ಆ್ಯಪ್ನಗರ

ಕೊರೊನಾ ಮೊದಲು ಪತ್ತೆ ಮಾಡಿ ಎಚ್ಚರಿಕೆಯ ಕರೆ ಗಂಟೆ ಬಾರಿಸಿದ್ದ ವೈದ್ಯ ಕೊರೊನಾಗೆ ಬಲಿ

ಕೊರೊನಾ ವೈರಾಣು ಸೋಂಕು ಹರಡುವಿಕೆ ಕುರಿತು ಮೊದಲು ಎಚ್ಚರಿಕೆಯ ಗಂಟೆ ಬಾರಿಸಿದ್ದ ಡಾಕ್ಟರ್‌ ಲೀ ವೆನ್‌ಲಿಯಾಂಗ್‌ ಕೊರೊನಾ ಸೋಂಕಿನಿಂದಲೇ ಮೃತಪಟ್ಟಿದ್ದಾರೆ. ಇಡೀ ಚೀನಾ ಅವರನ್ನು ನೆನೆಯುತ್ತಿದೆ.

Vijaya Karnataka Web 7 Feb 2020, 10:53 am
ಬೀಜಿಂಗ್‌: ಕೊರೊನಾ ವೈರಾಣು ಸೋಂಕು ಹರಡುವಿಕೆ ಕುರಿತು ಮೊದಲು ಎಚ್ಚರಿಕೆಯ ಗಂಟೆ ಬಾರಿಸಿದ್ದ ಎಂಟು ಮಂದಿ ಪೈಕಿ ಒಬ್ಬರಾದ ಡಾಕ್ಟರ್‌ ಲೀ ವೆನ್‌ಲಿಯಾಂಗ್‌ (34) ಕೊರೊನಾ ಸೋಂಕಿನಿಂದಲೇ ಗುರುವಾರ ಮೃತಪಟ್ಟಿದ್ದಾರೆ.
Vijaya Karnataka Web doctor Li Wenliang


ಸಾಂಕ್ರಾಮಿಕ ರೋಗವೊಂದು ಹರಡುತ್ತಿದೆ ಎಂದು ಸಹ ವೈದ್ಯರಿಗೆ ಮತ್ತು ವುಹಾನ್‌ನ ಬಹುತೇಕ ಆಸ್ಪತ್ರೆಗಳ ವೈದ್ಯರಿಗೆ ಲೀ ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಚ್ಚರಿಕೆ ನೀಡಿದ್ದರು. ''ಹುಬೀ ಪ್ರಾಂತ್ಯದಲ್ಲಿ ಈ ಸೋಂಕು ಹರಡಲಿದೆ. ಆದಷ್ಟು ಮುನ್ನೆಚ್ಚರಿಕೆ ವಹಿಸಿ. ಈಗಾಗಲೇ ವುಹಾನ್‌ನ ಮೀನು ಮಾರಾಟದ ಮಾರುಕಟ್ಟೆಯಲ್ಲಿ 7ಮಂದಿಗೆ ಸಾರ್ಸ್‌ ಲಕ್ಷಣಗಳು ಕಂಡುಬಂದಿದೆ. ಅವರು ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ,'' ಎಂದು ಲೀ ಚೀನಾದ ಜನಪ್ರಿಯ ವೀಚ್ಯಾಟ್‌ ಆ್ಯಪ್‌ನಲ್ಲಿನ ತಮ್ಮ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಗ್ರೂಪ್‌ನಲ್ಲಿ ಸಂದೇಶ ಹಾಕಿದ್ದರು.

2003ರಲ್ಲಿ ವಿಶ್ವಾದ್ಯಂತ 800 ಜನರನ್ನು ಬಲಿ ಪಡೆದಿದ್ದ ಸಾರ್ಸ್‌ ಮಾದರಿಯ ಭಯಾನಕ ಸೋಂಕು 'ಕೊರೊನಾ' ಎಂದು ಲೀ ಹೇಳಿದ್ದರು. ಖಾಸಗಿಯಾಗಿ ಕೂಡ ಅವರು ತಮ್ಮ ಸಂಬಂಧಿಗಳಿಗೆ ಕರೆ ಮಾಡಿ ವೈರಾಣು ಬಗ್ಗೆ ಎಚ್ಚರಿಸಿದ್ದರು. ದುರಾದೃಷ್ಟವಶಾತ್‌, ಚೀನಾ ಪೊಲೀಸರು ಲೀ ಅವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿಕೊಂಡು ಎಚ್ಚರಿಕೆ ನೀಡಿದ್ದರು. ಆದರೆ ಇಂದು ಇಡೀ ಚೀನಾ ಅವರನ್ನು ನೆನೆಯುತ್ತಿದೆ. ಆದರೆ ಲೀ ವೆನ್‌ಲಿಯಾಂಗ್ ಮಾತ್ರ ಸಾವಿನ ಕದ ತಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ