ಆ್ಯಪ್ನಗರ

ಕ್ಷಿಪಣಿ ನಾಶಕ ಪರೀಕ್ಷೆ ನಡೆಸಿದ ಚೀನಾ

ದಾಲಿಯನ್‌ ಬಂದರು ನಗರದಲ್ಲಿ ಎರಡು 'ಟೈಪ್‌ 052ಡಿ' ನಿರ್ದೇಶಿತ ಕ್ಷಿಪಣಿ ನಾಶಕದ ಪರೀಕ್ಷೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 70ನೇ ವರ್ಷಾಚರಣೆ ಸಂಭ್ರಮದಲ್ಲಿರುವ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ ಬಳಿ ಪ್ರಸ್ತುತ 20 ಕ್ಷಿಪಣಿ ನಾಶಕ ಯುದ್ಧನೌಕೆಗಳಿದ್ದು, ಇವುಗಳು ಯುದ್ಧವಿಮಾನಗಳನ್ನು ಕೂಡ ಹೊತ್ತೊಯ್ಯುವ ಸಾಮರ್ಥ್ಯ‌ ಹೊಂದಿವೆ.

Vijaya Karnataka 14 May 2019, 5:00 am
ಬೀಜಿಂಗ್‌ : ನೌಕಾಪಡೆ ಸಾಮರ್ಥ್ಯ‌ ವೃದ್ಧಿಗೆ ತೀವ್ರ ಕ್ರಮಗಳನ್ನು ಕೈಗೊಂಡಿರುವ ಚೀನಾ ಸೇನೆಯು ಎರಡು ನಿರ್ದೇಶಿತ ಕ್ಷಿಪಣಿ ನಾಶಕಗಳ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ದಾಲಿಯನ್‌ ಬಂದರು ನಗರದಲ್ಲಿ ಎರಡು 'ಟೈಪ್‌ 052ಡಿ' ನಿರ್ದೇಶಿತ ಕ್ಷಿಪಣಿ ನಾಶಕದ ಪರೀಕ್ಷೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Vijaya Karnataka Web chinese navy launches two new guided missile destroyers
ಕ್ಷಿಪಣಿ ನಾಶಕ ಪರೀಕ್ಷೆ ನಡೆಸಿದ ಚೀನಾ

70ನೇ ವರ್ಷಾಚರಣೆ ಸಂಭ್ರಮದಲ್ಲಿರುವ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ ಬಳಿ ಪ್ರಸ್ತುತ 20 ಕ್ಷಿಪಣಿ ನಾಶಕ ಯುದ್ಧನೌಕೆಗಳಿದ್ದು, ಇವುಗಳು ಯುದ್ಧವಿಮಾನಗಳನ್ನು ಕೂಡ ಹೊತ್ತೊಯ್ಯುವ ಸಾಮರ್ಥ್ಯ‌ ಹೊಂದಿವೆ. ಪ್ರತಿ ತಿಂಗಳು ಹೊಸ ಶಸ್ತ್ರಾಸ್ತ್ರಗಳು ಚೀನಾ ಸೇನೆಗೆ ಸೇರ್ಪಡೆಯಾಗುತ್ತಿವೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ರಣತಂತ್ರದಂತೆ ಕಳೆದ ಕೆಲವು ವರ್ಷಗಳಲ್ಲಿ ತನ್ನ ಸೇನಾಪಡೆಯಲ್ಲಿದ್ದ 3 ಲಕ್ಷ ಯೋಧರನ್ನು ನೌಕಾಪಡೆ ಮತ್ತು ವಾಯುಪಡೆಗೆ ವರ್ಗಾಯಿಸಿರುವ ಚೀನಾ ಮಿಲಿಟರಿ, ಸಮುದ್ರ ಮತ್ತು ವಾಯುದಾಳಿಗಳಿಗೆ ಒತ್ತು ನೀಡುತ್ತಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ