ಆ್ಯಪ್ನಗರ

ಹಿಲರಿ ಡೆಮೊಕ್ರಾಟಿಕ್ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ

2384 ಡೆಲಿಗೆಟ್ಸ್ ಬೆಂಬಲದಿಂದ ಹಿಲರಿ ಕ್ಲಿಂಟನ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮೊಕ್ರಾಟಿಕ್ ಪಕ್ಷದ ಚೊಚ್ಚಲ ಮಹಿಳಾ ಸಂಭಾವ್ಯ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.

ಏಜೆನ್ಸೀಸ್ 8 Jun 2016, 12:40 am
ವಾಷಿಂಗ್ಟನ್: ಅಮೆರಿಕದ 240 ವರ್ಷಗಳ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಹಿಲರಿ ಕ್ಲಿಂಟನ್ ಹೊಸ ಅಧ್ಯಾಯ ಬರೆದಿದ್ದಾರೆ. 2384 ಡೆಲಿಗೆಟ್ಸ್ ಬೆಂಬಲದಿಂದ ಹಿಲರಿ ಕ್ಲಿಂಟನ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮೊಕ್ರಾಟಿಕ್ ಪಕ್ಷದ ಚೊಚ್ಚಲ ಮಹಿಳಾ ಸಂಭಾವ್ಯ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.
Vijaya Karnataka Web clinton clinches democratic nomination as sanders vows to fight on
ಹಿಲರಿ ಡೆಮೊಕ್ರಾಟಿಕ್ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ


ಇದರೊಂದಿಗೆ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗೂ ಹಿಲರಿ ಸೆಣಸಾಟಕ್ಕೆ ವೇದಿಕೆ ಸಜ್ಜಾದಂತಾಗಿದೆ.

ಪ್ಯುರ್ಟೊ ರಿಕೊದಲ್ಲಿ ಭಾನುವಾರ ನಡೆದ ಪಕ್ಷದ ಪ್ರಾಥಮಿಕ ಸುತ್ತಿನ ಜನಮತಗಣನೆಯಲ್ಲಿ ಕ್ಲಿಂಟನ್ ಅವರು ಅಗತ್ಯ ಸಂಖ್ಯೆಯ ಪ್ರತಿನಿಧಿಗಳ ಬೆಂಬಲ ಗಳಿಸಿದರು ಮತ್ತು ಸೂಪರ್ ಡೆಲಿಗೇಟ್ಸ್‌ಗಳ ಹೆಚ್ಚುವರಿ ಬೆಂಬಲವೂ ಸಿಕ್ಕಿತು.

ಈ ವಿಷಯ ಹೊರಬಿದ್ದ ಕೆಲವೇ ತಾಸುಗಳಲ್ಲಿ ಹೌಸ್ ಮೈನಾರಿಟಿ ಲೀಡರ್ ಮತ್ತು ಕ್ಯಾಲಿಫೋರ್ನಿಯಾ ಡೆಮೊಕ್ರಾಟ್ ಸದಸ್ಯೆ ನ್ಯಾನ್ಸಿ ಪೆಲೊಸಿ ಅವರು ಕ್ಲಿಂಟನ್ ಅಭ್ಯರ್ಥಿ ಗಾದಿಯನ್ನು ಅನುಮೋದಿಸಿದರು.

ಮಂಗಳವಾರ ಕ್ಯಾಲಿಫೋರ್ನಿಯಾ ಸೇರಿದಂತೆ 6 ರಾಜ್ಯಗಳಲ್ಲಿ ನಡೆದಿರುವ ಪಕ್ಷದ ಪ್ರಾಥಮಿಕ ಸುತ್ತಿನ ಜನಮತಗಣನೆಯಲ್ಲಿ ಕ್ಲಿಂಟನ್ ಅವರಿಗೆ ಮತ್ತಷ್ಟು ಬೆಂಬಲ ವ್ಯಕ್ತವಾಗುವ ನಿರೀಕ್ಷೆ ಇದೆ.

68 ವರ್ಷದ ಕ್ಲಿಂಟನ್ ಮಂಗಳವಾರ ಒಟ್ಟು 2,384 ಪ್ರತಿನಿಧಿಗಳ ಬೆಂಬಲ ಗಳಿಸಿದರು. ಅವರು ಅಧ್ಯಕ್ಷೀಯ ಅಭ್ಯರ್ಥಿಯಾಗಲು 2,383 ಪ್ರತಿನಿಧಿಗಳ ಮತ ಬೇಕಿತ್ತು. ಅದಕ್ಕಿಂತ ಒಂದು ಹೆಚ್ಚಿನ ಮತ ಗಳಿಸಿ, ಸಂಭಾವ್ಯ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗೆ ಅವರು ಡೆಮೊಕ್ರಾಟ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯಲಿದ್ದಾರೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ವಿರುದ್ಧ ಹಿಲರಿ ಸೆಣಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ