ಆ್ಯಪ್ನಗರ

ಕೊರೊನಾ: 21 ಸಾವಿರ ದಾಟಿದ ಸಾವಿನ ಸಂಖ್ಯೆ, ಅಮೆರಿಕಾದಲ್ಲಿ 69,194 ಜನರಿಗೆ ಸೋಂಕು!

ಜಗತ್ತಿನಾದ್ಯಂತ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 21 ಸಾವಿರ ದಾಟಿದ್ದು, 21,308 ಜನರು ಕೋವಿಡ್‌ 19 ಸೋಂಕಿಗೆ ಸಾವನ್ನಪ್ಪಿದ್ದಾರೆ. ಇನ್ನು ಕೊರೊನಾ ಪೀಡಿತರ ಸಂಖ್ಯೆ 4,72,076ಕ್ಕೆ ಏರಿಕೆಯಾಗಿದೆ.

Agencies 26 Mar 2020, 1:20 pm

ನ್ಯೂಯಾರ್ಕ್‌: ದಿನದಿಂದ ದಿನಕ್ಕೆ ಕೊರೊನಾ ಸೋಂಕು ತನ್ನ ನಾಗಾಲೋಟ ಮುಂದುವರಿಸಿದ್ದು ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ ಭಾರಿ ಏರಿಕೆಯಾಗಿದೆ. ಇಲ್ಲಿ ಸಾವಿಗೀಡಾದವರ ಸಂಖ್ಯೆಯೂ 1 ಸಾವಿರ ದಾಟಿದೆ.
Vijaya Karnataka Web coronavirus


ಜಗತ್ತಿನಾದ್ಯಂತ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 21 ಸಾವಿರ ದಾಟಿದ್ದು, 21,308 ಜನರು ಕೋವಿಡ್‌ 19 ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಕೊರೊನಾ ಪೀಡಿತರ ಸಂಖ್ಯೆ 5 ಲಕ್ಷದತ್ತ ಮುನ್ನುಗ್ಗಿದ್ದು, ಸದ್ಯ 4,72,076 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಅಮೆರಿಕಾದಲ್ಲಿ ಕಳೆದ 24 ಗಂಟೆಯಲ್ಲಿ 13 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು, ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಬರೋಬ್ಬರಿ 69,197ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಕೊರೊನಾದಿಂದ ಇಲ್ಲಿಯವರೆಗೆ 1,050 ಜನರು ಸಾವನ್ನಪ್ಪಿದ್ದರೆ ಕೇವಲ 619 ಜನರಷ್ಟೇ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನ್ಯೂಯಾರ್ಕ್‌ ನಗರವೊಂದರಲ್ಲೇ 30,000 ಕ್ಕೂ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ.

ಇಟಲಿ ಬಳಿಕ ಸ್ಪೇನ್‌ನಲ್ಲೀಗ ಕೊರೊನಾ ಮರಣ ಮೃದಂಗ, ಒಂದೇ ದಿನ 738 ಜನ ಬಲಿ!

ಒಟ್ಟು 8 ದೇಶಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ 10 ಸಾವಿರ ದಾಟಿದೆ.

ದೇಶಕೋವಿಡ್‌-19 ಸೋಂಕಿತರುಸಾವಿಗೀಡಾದವರು
ಚೀನಾ81,7313,291
ಇಟಲಿ74,3867,503
ಅಮೆರಿಕಾ69,1971,050
ಸ್ಪೇನ್‌49,5153,647
ಜರ್ಮನಿ37,323206
ಇರಾನ್27,0172,077
ಫ್ರಾನ್ಸ್‌25,6001,333
ಸ್ವಿಟ್ಜರ್ಲೆಂಡ್‌10,897153
ಒಟ್ಟು 4,72,07621,308
*ಮಾಹಿತಿ - ಜಾನ್‌ ಹಾಪ್ಕಿನ್ಸ್‌ ಯುನಿವರ್ಸಿಟಿ & ಮೆಡಿಸಿನ್‌

ಇಟಲಿಯಲ್ಲಿ ಬುಧವಾರ 683 ಜನರು ಕೊರೊನಾದಿಂದ ಅಸುನೀಗಿದ್ದಾರೆ. ಇಟಲಿ ಮತ್ತು ಸ್ಪೇನ್‌ನಲ್ಲಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ ಚೀನಾವನ್ನು ಮೀರಿಸಿದೆ. ಎರಡೂ ದೇಶಗಳಲ್ಲಿ ಸದ್ಯ ದಿನಕ್ಕೆ 600 ರಿಂದ 700ರ ಆಸುಪಾಸಿನಲ್ಲಿ ಜನ ಸಾವಿಗೀಡಾಗುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ