ಕೊರೊನಾ ಹಾವಳಿಗೆ 'ಇಟಲಿ' ಸ್ಥಬ್ದ: ದ.ಕೊರಿಯಾ, ಇರಾನ್, ಸಿಂಗಾಪುರದಲ್ಲಿ ಉಲ್ಬಣ!
ಕೊರೊನಾ ವೈರಸ್ ಸೋಂಕಿಗೆ ಉತ್ತರ ಇಟಲಿಯ 10ಕ್ಕೂ ಹೆಚ್ಚು ನಗರಗಳು ಅಕ್ಷರಶಃ ಸ್ಥಬ್ಧಗೊಂಡಿವೆ. ಕೊರೊನಾ ವೈರಸ್ಗೆ ಇಟಲಿಯಲ್ಲಿ ಮೊದಲ ಬಲಿಯಾಗಿರುವುದು ವರದಿಯಾಗುತ್ತಿದ್ದಂತೆಯೇ ರಾಷ್ಟ್ರಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
THE TIMES OF INDIA NEWS SERVICE 22 Feb 2020, 5:57 pm
ಹೈಲೈಟ್ಸ್:
- ಕೊರೊನಾ ಹಾವಳಿಗೆ ಸ್ಥಬ್ದವಾದ 'ಇಟಲಿ'
- ಇಟಲಿಯಲ್ಲಿ ಕೊರೊನಾ ವೈರಸ್ಗೆ ಮೊದಲ ಬಲಿ
- ಶಾಲಾ-ಕಾಲೇಜಿಗೆ ರಜೆ, ಅಂಗಡಿ ಮಳಿಗೆಗಳು ಬಂದ್
- ಚೀನಾದಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 76,288ಕ್ಕೆ ಏರಿಕೆ
ರೋಮ್: ವಿಶ್ವವ್ಯಾಪಿ ಮಹಾಮಾರಿಯಂತೆ ಹಬ್ಬುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಉತ್ತರ ಇಟಲಿಯ 10ಕ್ಕೂ ಹೆಚ್ಚು ನಗರಗಳು ಅಕ್ಷರಶಃ ಸ್ಥಬ್ಧಗೊಂಡಿವೆ. ಕೊರೊನಾ ವೈರಸ್ಗೆ ಇಟಲಿಯಲ್ಲಿ ಮೊದಲ ಬಲಿಯಾಗಿರುವುದು ವರದಿಯಾಗುತ್ತಿದ್ದಂತೆಯೇ ರಾಷ್ಟ್ರಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇಟಲಿಯ ಲೊಂಬಾರ್ಡಿ ಮತ್ತು ವೆನೆಟೋ ನಗರಗಳಲ್ಲಿ ಹೋಟೆಲ್ಗಳು, ಅಂಗಡಿ ಮಳಿಗೆಗಳು ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜತಗೆ ಕ್ರೀಡಾಕೂಟಗಳನ್ನೂ ಸಹ ರದ್ದುಗೊಳಿಸಲಾಗಿದೆ.
ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲೋದಿ, ಮಿಲಾನ್ ನಗರದ ಸುತ್ತಲಿನ ಸುಮಾರು 10 ಪಟ್ಟಣಗಳನ್ನು ಸ್ತಬ್ಧಗೊಳಿಸುವಂತೆ ಅಲ್ಲಿನ ಆರೊಗ್ಯ ಸಚಿವರು ಆಜ್ಞೆ ಹೊರಡಿಸಿದ್ದಾರೆ.
ಕೊರೊನಾಗೆ ಬಲಿಯಾದವರ ಸಂಖ್ಯೆ 2,236ಕ್ಕೆ ಏರಿಕೆ, ಹತೋಟಿಗೆ ಬರುತ್ತಿದೆಯಂತೆ ವೈರಸ್
ಇಟಲಿಯ ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯು ಕೊರೊನಾ ಸೋಂಕಿಗೆ 78ವರ್ಷದ ವ್ಯಕ್ತಿ ಬಲಿಯಾಗಿರುವ ಕುರಿತು ವರದಿ ಮಾಡಿತ್ತು. ಇಟಲಿಯ ಸುದ್ದಿ ಏಜನ್ಸಿ ಎಎನ್ಎಸ್ಎ ಕೂಡ ಈ ಕುರಿತು ವರದಿ ಮಾಡಿದ್ದು, ಮತ್ತಿಬ್ಬರು ವ್ಯಕ್ತಿಗಳಿಗೂ ಸೋಂಕು ಹರಡಿರುವ ಕುರಿತು ತಿಳಿಸಿವೆ.
ಚೀನಾದಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 76,288ಕ್ಕೆ ಏರಿಕೆಯಾಗಿದ್ದು, ಇದುವರೆಗೂ 2,345 ಜನ ಬಲಿಯಾಗಿದ್ದಾರೆ. ಚೀನಾ ಹೊರತುಪಡಿಸಿ ಇತರೆ 26 ರಾಷ್ಟ್ರಗಳು ಹಾಗೂ ಪ್ರಾಂತ್ಯಗಳಿಗೂ ಕೊರೊನಾ ವೈರಸ್ ಹಬ್ಬಿದೆ. ಜಪಾನ್ನಲ್ಲಿ 14 ಮಂದಿ ಕೊರೊನಾ ಸೋಂಕಿರುವುದು ಖಾತರಿಯಾಗಿದೆ. ಉತ್ತರ ಕೊರಿಯಾ, ಇರಾನ್, ಸಿಂಗಾಪುರಕ್ಕೂ ಕೊರೊನಾ ಪ್ರವೇಶಿಸಿದೆ.