ಆ್ಯಪ್ನಗರ

ನ್ಯೂಜಿಲೆಂಡ್‌ನಲ್ಲಿ ವಾರದಲ್ಲಿ 4 ದಿನ ಕೆಲಸಕ್ಕೆ ಚಿಂತನೆ, ಪಿಎಂ ಸಲಹೆಗೆ ಉತ್ತಮ ಸ್ಪಂದನೆ

ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ನ್ಯೂಜಿಲೆಂಡ್‌ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದ್ದು, ಪ್ರಧಾನಿ ಜಸಿಂದಾ ಆಡ್ರೆನ್ ವಾರದಲ್ಲಿ ನಾಲ್ಕು ದಿನ ಕೆಲಸಕ್ಕೆ ಚಿಂತನೆ ನಡೆಸಿದ್ದಾರೆ.

Vijaya Karnataka Web 23 May 2020, 4:38 pm
ವೆಲ್ಲಿಂಗ್ಟನ್‌: ನಯನ ಮನೋಹರ ಪರಿಸರ ತಾಣಗಳನ್ನು ಹೊಂದಿರುವ ನ್ಯೂಜಿಲೆಂಡ್‌ ಪ್ರವಾಸೋದ್ಯಮವನ್ನೇ ಆದಾಯ ಮೂಲವಾಗಿ ನಂಬಿಕೊಂಡಿರುವ ರಾಷ್ಟ್ರ. ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದ್ದು, ಈ ಕ್ಷೇತ್ರದ ಚೇತರಿಕೆಗೆ ಪ್ರಧಾನಿ ಜಸಿಂದಾ ಆಡ್ರೆನ್‌ ಅವರು ದೇಶೀಯವಾಗಿ ಮುಂದಾಗಿದ್ದಾರೆ.
Vijaya Karnataka Web Jacinda Ardern
ನ್ಯೂಜಿಲೆಂಡ್ ಪ್ರಧಾನಿ


''ಸದ್ಯದ ಪರಿಸ್ಥಿತಿಯಲ್ಲಿ ವಿದೇಶಗಳಿಂದ ನ್ಯೂಜಿಲೆಂಡ್‌ಗೆ ಪ್ರವಾಸಿಗರು ಬರುವುದು ಅನುಮಾನ. ಹಾಗಾಗಿ ನಮ್ಮಲ್ಲಿರುವ ಕಂಪನಿಗಳಲ್ಲಿ ವಾರದಲ್ಲಿ ನಾಲ್ಕು ದಿನವಷ್ಟೇ ಕೆಲಸಕ್ಕೆ ಅವಕಾಶ ನೀಡಿದರೆ, ಉದ್ಯೋಗಿಗಳು ಉಳಿದ 3 ದಿನಗಳ ಬಿಡುವಿನ ವೇಳೆ ದೇಶದೊಳಗಿರುವ ಪ್ರವಾಸಿ ತಾಣಗಳಿಗೆ ಭೇಟಿಕೊಡಲು ಸಾಧ್ಯವಾಗುತ್ತದೆ. ಇದರಿಂದ ಕೊರೊನಾ ಕಾಲದಲ್ಲಿ ಉದ್ಯೋಗಿಗಳಿಗೂ ಒಂದಷ್ಟು ಲವಲವಿಕೆ ಬರುವುದರ ಜತಗೆ ಪ್ರವಾಸೋದ್ಯಮವೂ ಸುಧಾರಿಸಿಕೊಳ್ಳಲಿದೆ,'' ಎಂದು ಅವರು ಹೇಳಿದ್ದಾರೆ.

ಫೇಸ್‌ಬುಕ್‌ ಲೈವ್‌ ಮೂಲಕ ಪ್ರಧಾನಿ ಜಸಿಂದಾ ಇಂತಹದ್ದೊಂದು ಸಲಹೆ ತೇಲಿಬಿಟ್ಟಿದ್ದು, ಉದ್ಯೋಗದಾತರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಈ ಸಂದೇಶಕ್ಕೆ ದೇಶದ ಜನತೆ ಉತ್ತಮ ಖುಷಿಯಿಂದ ಸ್ಪಂದನೆ ನೀಡಿದ್ದು, ಪಿಎಂ ಸಲಹೆಯನ್ನು ಹೊಗಳಿದ್ದಾರೆ. ಮಾತ್ರವಲ್ಲ ಬೆಸ್ಟ್ ಪಿಎಂ ಎವರ್ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ