ಫೀನಿಕ್ಸ್ (ಅಮೆರಿಕ): ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ರೂಪಿಸಿದ್ದ ಒಬಾಮಾ ಕೇರ್ ವಿಮಾ ಯೋಜನೆಯನ್ನು ಪುನರಾರಂಭಿಸುವಂತೆ ಟ್ರಂಪ್ ಸರ್ಕಾರಕ್ಕೆ ಒತ್ತಡ ಹೇರಲಾಗುತ್ತಿದೆ. ಕೊರೊನಾ ವೈರಸ್ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ, ಒಬಾಮಾ ಕೇರ್ ಯೋಜನೆಗೆ ನೋಂದಣಿಗೆ ಮತ್ತೆ ಅವಕಾಶ ನೀಡಬೇಕೆಂದು ಅರಿಜೋನಾ ರಾಜ್ಯದ ಗವರ್ನರ್ ಡಗ್ ಡ್ಯೂಸಿ ಆಗ್ರಹಿಸಿದ್ದಾರೆ. ಕೊರೊನಾ ವೈರಸ್ ಅಬ್ಬರದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಅಮೆರಿಕದಲ್ಲಿ ವೈದ್ಯಕೀಯ ಸೇವೆ ಭಾರೀ ವೆಚ್ಚದಾಯಕವಾಗಿ ಪರಿಣಮಿಸಿದೆ. ಒಬಾಮಾ ಕೇರ್ ಯೋಜನೆಗೆ ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಮತ್ತೆ ಅವಕಾಶ ನೀಡಬೇಕೆಂಬ ಕೋರಿಕೆಯನ್ನು ಹಲವು ಜನಪ್ರತಿನಿಧಿಗಳು ಅಮೆರಿಕದಾದ್ಯಂತ ಆಗ್ರಹಿಸುತ್ತಿದ್ದಾರೆ. ಆದ್ರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದಕ್ಕೆ ಸಿದ್ದರಿಲ್ಲ ಎನ್ನಲಾಗುತ್ತಿದೆ. ಅಮೆರಿಕದ ಹಲವು ರಾಜ್ಯಗಳು ಒಬಾಮಾ ಕೇರ್ ಯೋಜನೆಯನ್ನು ಪುನಾರಂಭಿಸಲು ಮುಂದಾಗಿದ್ದವು. ಆದ್ರೆ, ಟ್ರಂಪ್ ಸರ್ಕಾರ ಎಲ್ಲದಕ್ಕೂ ತಡೆ ಒಡ್ಡಿದೆ.
ನ್ಯೂಯಾರ್ಕ್ ನೋಡಿ ಹೆಂಗಾಗಿದೆ: ಪಾಕಿಸ್ತಾನಿಯರಿಗೆ ಇಮ್ರಾನ್ ಕೊರೊನಾ ಎಚ್ಚರಿಕೆ ನೀಡಿದ್ದು ಹೀಗೆ..!
ಹೀಗಾಗಿ, ಅರಿಜೋನಾ ರಾಜ್ಯದ ಗವರ್ನರ್ ಡಗ್ ಡ್ಯೂಸಿ, ಟ್ರಂಪ್ಗೆ ಬಹಿರಂಗ ಪತ್ರ ಬರೆದಿದ್ದಾರೆ. ಈ ತುರ್ತು ಸಂದರ್ಭದಲ್ಲಿ ಆರೋಗ್ಯ ವಿಮೆ ಅತ್ಯಗತ್ಯ. ಹಲವರು ಉದ್ಯೋಗವಿಲ್ಲದೆ ಪರದಾಡುತ್ತಿದ್ಧಾರೆ. ಹೀಗಾಗಿ, ಸರ್ಕಾರ ಅಧಿಕಾರ ಶಾಹಿಗಳನ್ನು ಚುರುಕುಗೊಳಿಸಬೇಕು. ಒಬಾಮಾ ಕೇರ್ ವಿಮಾ ಯೋಜನೆಯ ಮರು ನೋಂದಣಿ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.
ಕೂಡಲೇ ಮಲೇರಿಯಾ ಮೆಡಿಸಿನ್ ಬಿಡುಗಡೆ ಮಾಡಿ: ಮೋದಿಗೆ ಟ್ರಂಪ್ ಮನವಿ!
ಆದ್ರೆ, ಟ್ರಂಪ್ ಸರ್ಕಾರ, ಒಬಾಮಾ ಕೇರ್ ಯೋಜನೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಅಗತ್ಯವಿದ್ದವರಿಗೆ ಮಾತ್ರ ಆರೋಗ್ಯ ಸೇವೆಯಲ್ಲಿ ಸಹಾಯಹಸ್ತ ಚಾಚಲು ಮುಂದಾಗಿದೆ. ಇದರ ಹಿಂದೆ ಇನ್ಶೂರೆನ್ಸ್ ಕಂಪನಿಗಳ ಲಾಬಿ ಕೂಡಾ ಇದೆ ಎನ್ನಲಾಗಿದೆ.
ಕೊರೊನಾ: ಮಲೇರಿಯಾ ಔಷಧದಿಂದ ಹೃದಯಕ್ಕೆ ತೊಂದರೆ, ಅಮೆರಿಕ ವಿಜ್ಞಾನಿಗಳ ಎಚ್ಚರಿಕೆ