ಆ್ಯಪ್ನಗರ

ಪ್ಯಾರಿಸ್ ಪ್ರಳಯಕ್ಕೆ ನಾಲ್ಕು ಬಲಿ

ಕಳೆದ ಹಲವು ದಿನಗಳಿಂದ ಸುರಿಯತ್ತಿರುವ ಕುಂಭದ್ರೋಣ ಮಳೆಯ ಹೊಡೆತಕ್ಕೆ ಫ್ರಾನ್ಸ್ ತತ್ತರಿಸಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 4ಕ್ಕೆ ಏರಿಕೆಯಾಗಿದೆ.

ಏಜೆನ್ಸೀಸ್ 5 Jun 2016, 4:00 am
ಪ್ಯಾರಿಸ್: ಕಳೆದ ಹಲವು ದಿನಗಳಿಂದ ಸುರಿಯತ್ತಿರುವ ಕುಂಭದ್ರೋಣ ಮಳೆಯ ಹೊಡೆತಕ್ಕೆ ಫ್ರಾನ್ಸ್ ತತ್ತರಿಸಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 4ಕ್ಕೆ ಏರಿಕೆಯಾಗಿದೆ.
Vijaya Karnataka Web death toll in france rises to 4 as flooding peaks in paris
ಪ್ಯಾರಿಸ್ ಪ್ರಳಯಕ್ಕೆ ನಾಲ್ಕು ಬಲಿ


ಪ್ಯಾರಿಸ್‌ನಲ್ಲಿ ಸೀನ್ ನದಿ ಉಕ್ಕಿ ಹರಿಯುತ್ತಿದ್ದು, ಐಫೆಲ್ ಟವರ್ ಸುತ್ತಮುತ್ತಲ ಪ್ರದೇಶಗಳು ಜಲಾವೃತವಾಗಿವೆ.

ವಿಶ್ವವಿಖ್ಯಾತ ‘ಮೋನಾಲಿಸಾ’ ಸೇರಿದಂತೆ ಹಲವು ಅಪರೂಪದ ಪೇಂಟಿಂಗ್‌ಗಳಿರುವ ಇರುವ ಲೌರ್ ಹಾಗೂ ಡೋರ್‌ಸೆ ಮ್ಯೂಸಿಯಂಗಳಿಗೂ ನೀರು ನುಗ್ಗಿದ್ದು, ಸಾರ್ವಜನಿಕ ದರ್ಶನ ರದ್ದುಪಡಿಸಲಾಗಿದೆ. ನೀರಿನಿಂದಾಗಿ ಹಲವು ಅಪರೂಪದ ಹಾಗೂ ಐತಿಹಾಸಿಕ ವರ್ಣಚಿತ್ರಗಳಿಗೆ ಹಾನಿಯಾಗುವ ಭೀತಿ ಎದುರಾಗಿದ್ದು, ಅವುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಸಂಚಾರ ಅಸ್ತವ್ಯಸ್ತ:

ಜಲಾವೃತಗೊಂಡಿರುವ ನಗರದ ಹಲವು ರೈಲ್ವೆ ಮತ್ತು ಸಬ್‌ವೇ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ರಸ್ತೆಗಳು ಜಲಾವೃತಗೊಂಡ ಕಾರಣ ಶನಿವಾರ ವಾಹನ ಸವಾರರ ಪರದಾಟ ಸಾಮಾನ್ಯವಾಗಿತ್ತು.

ಮುಂದುವರಿದ ಹೈ ಅಲರ್ಟ್:

ಪ್ಯಾರಿಸ್ ಸೇರಿದಂತೆ ಫ್ರಾನ್ಸ್‌ನ 14 ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಈ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

35 ವರ್ಷಗಳಲ್ಲೇ ಗರಿಷ್ಠ ಮಟ್ಟ:

ಸೀನ್ ನದಿಯಲ್ಲಿ ನೀರಿನ ಪ್ರಮಾಣ ಸಾಮಾನ್ಯ ಮಟ್ಟಕ್ಕಿಂತ 20 ಅಡಿಗಳಷ್ಟು ಹೆಚ್ಚಿದೆ. ಕಳೆದ 35 ವರ್ಷಗಳಲ್ಲೇ ಇದು ಗರಿಷ್ಠ ಮಟ್ಟ ಎಂದು ತಿಳಿದುಬಂದಿದೆ. ಆದರೆ, ಪ್ರಸ್ತುತ ನದಿಯ ನೀರಿನ ಮಟ್ಟ ಇಳಿಕೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಂಚ್ ಪ್ರಧಾನಿ ಮಾನ್ಯುಯಲ್ ವಾಲ್ಸ್ ಅವರು ತುರ್ತು ಸಭೆ ನಡೆಸಿದ್ದು, ಪರಿಹಾರ ಕಾರ್ಯ ಚುರುಕು ಗೊಳಿಸುವಂತೆ ಸೂಚಿಸಿದ್ದಾರೆ.

ಮುಳುಗಿದ ಯೂರೋಪ್:

ಜರ್ಮನಿ, ಬೆಲ್ಜಿಯಂ, ರೊಮೇನಿಯಾ ಸೇರಿದಂತೆ ಇತರ ಯೂರೋಪ್ ರಾಷ್ಟ್ರಗಳಲ್ಲೂ ಭಾರಿ ಮಳೆಯಾಗುತ್ತಿದ್ದು, ಕಳೆದ ಒಂದು ವಾರದಲ್ಲಿ ಒಟ್ಟಾರೆ 17 ಮಂದಿ ಮೃತಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ