ಆ್ಯಪ್ನಗರ

ಅತ್ಯಾಚಾರ ಸಂತ್ರಸ್ತೆಗೆ ಅಸಭ್ಯ ಪ್ರಶ್ನೆ: ಜಡ್ಜ್‌ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು

ನ್ಯಾಯಾಧೀಶರ ಅಪ್ರಬುದ್ಧ ಪ್ರಶ್ನೆಗಳು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನೈತಿಕ ಸಮಿತಿಯಿಂದ ವಿಚಾರಣೆ ಎದುರಿಸಿರುವ ನ್ಯಾ.ರುಸ್ಸೊ 2017ರಿಂದ ಅಡಳಿತಾತ್ಮಕ ರಜೆಯಲ್ಲಿದ್ದಾರೆ.

Vijaya Karnataka 6 Apr 2019, 5:00 am
ವಾಷಿಂಗ್ಟನ್‌: ಅತ್ಯಾಚಾರ ಸಂತ್ರಸ್ತೆಯನ್ನು ಅಸಭ್ಯವಾಗಿ ಪ್ರಶ್ನಿಸಿದ ನ್ಯೂಜೆರ್ಸಿ ಕೋರ್ಟ್‌ನ ನ್ಯಾಯಾಧೀಶರಿಗೆ ಮೂರು ತಿಂಗಳ ವೇತನರಹಿತ ಅಮಾನತು ಶಿಕ್ಷೆ ವಿಧಿಸಲು ಅಮೆರಿಕದ ನೈತಿಕ ಸಮಿತಿ ಶಿಫಾರಸು ಮಾಡಿದೆ.
Vijaya Karnataka Web russo


2016ರಲ್ಲಿ ನ್ಯೂಜೆರ್ಸಿಯ ಓಶನ್‌ ಕೌಂಟಿ ಕೋರ್ಟ್‌ನ ನ್ಯಾ.ಜಾನ್‌ ರಸ್ಸೊ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಸಂತ್ರಸ್ತ ಮಹಿಳೆಯು ನಡೆದ ಘಟನೆಯನ್ನು ವಿವರಿಸಿದಳು. ಈ ವೇಳೆ ನ್ಯಾ.ರುಸ್ಸೊ,''ನಿಮ್ಮೊಂದಿಗೆ ಸಂಭೋಗ ನಡೆಸದಂತೆ ತಡೆಯುವುದು ಹೇಗೆ ಎಂಬುದು ನಿಮಗೆ ತಿಳಿದಿದೆಯೇ?'' ಎಂದು ಪ್ರಶ್ನಿಸಿದ್ದರು. ಇದಕ್ಕೆ ಮಹಿಳೆ, ''ಸ್ಥಳದಿಂದ ಓಡಿ ಹೋಗುವುದು ತಪ್ಪಿಸಿಕೊಳ್ಳುವ ಒಂದು ವಿಧಾನ,'' ಎಂದು ಹೇಳಿಕೆ ನೀಡಿದ್ದರು. ನ್ಯಾ.ರುಸ್ಸೊ ಮಧ್ಯಪ್ರವೇಶಿಸಿ, ''ನೀವು ನಿಮ್ಮ ಕಾಲುಗಳನ್ನು ಮುಚ್ಚಿದಿರಾ? ಪೊಲೀಸರಿಗೆ ಕರೆ ಮಾಡಿದಿರಾ? ಇದರಲ್ಲಿ ಯಾವುದಾದರೂ ನೀವು ಮಾಡಿದಿರಾ?,'' ಎಂದು ಪ್ರಶ್ನಿಸಿದ್ದರು.

ನ್ಯಾಯಾಧೀಶರ ಅಪ್ರಬುದ್ಧ ಪ್ರಶ್ನೆಗಳು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನೈತಿಕ ಸಮಿತಿಯಿಂದ ವಿಚಾರಣೆ ಎದುರಿಸಿರುವ ನ್ಯಾ.ರುಸ್ಸೊ 2017ರಿಂದ ಅಡಳಿತಾತ್ಮಕ ರಜೆಯಲ್ಲಿದ್ದಾರೆ.

''ಸಂತ್ರಸ್ತೆ ಮಹಿಳೆಯನ್ನು ಈ ರೀತಿ ಪ್ರಶ್ನಿಸುವುದು ನ್ಯಾಯಾಲಯದ ನಿಯಮಗಳಿಗೆ ವಿರುದ್ಧವಾಗಿದೆ. ಇದು ಸೂಕ್ತವಾದ ವಿಚಾರಣೆಯ ಮಾರ್ಗವಲ್ಲ. ಅಲ್ಲದೇ ಇದು ಸಂತ್ರಸ್ತರ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಅವರ ದುಃಖವನ್ನು ಹೆಚ್ಚಿಸುತ್ತದೆ,'' ಎಂದು ನೈತಿಕ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಳಿಸಿದ್ದು, ನ್ಯಾ.ರುಸ್ಸೊ ವಿರುದ್ಧ ಶಿಸ್ತುಕ್ರಮಕ್ಕೆ ಅಮೆರಿಕ ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ