ಆ್ಯಪ್ನಗರ

ವಿಮಾನವನ್ನೇ ಧರೆಗಿಳಿಸಿದ ನಾಯಿಮರಿ...!

ನಾಯಿ ಮರಿಯ ಅವಾಂತರದಿಂದ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಪ್ರಸಂಗ ರಷ್ಯಾದಲ್ಲಿ ವರದಿಯಾಗಿದೆ. ಸೈಂಟ್‌ ಪೀಟರ್ಸ್‌ಬರ್ಗ್‌ನಿಂದ ಮಾಸ್ಕೋಗೆ ತೆರಳುತ್ತಿದ್ದ ವಿಮಾನದ ಲಗೇಜ್‌ ಕಂಪಾರ್ಟ್‌ಮೆಂಟ್‌ನಲ್ಲಿ ನಾಯಿ ಮರಿ ಇರಿಸಲಾಗಿತ್ತು. ಪಂಜರ ಸರಿಯಾಗಿ ಮುಚ್ಚದೇ ಇದ್ದ ಮರಿ ಹೊರಗೆ ಬಂದಿದೆ.

Vijaya Karnataka 24 Jul 2018, 1:47 pm
ಮಾಸ್ಕೋ: ನಾಯಿ ಮರಿಯ ಅವಾಂತರದಿಂದ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಪ್ರಸಂಗ ರಷ್ಯಾದಲ್ಲಿ ವರದಿಯಾಗಿದೆ. ಸೈಂಟ್‌ ಪೀಟರ್ಸ್‌ಬರ್ಗ್‌ನಿಂದ ಮಾಸ್ಕೋಗೆ ತೆರಳುತ್ತಿದ್ದ ವಿಮಾನದ ಲಗೇಜ್‌ ಕಂಪಾರ್ಟ್‌ಮೆಂಟ್‌ನಲ್ಲಿ ನಾಯಿ ಮರಿ ಇರಿಸಲಾಗಿತ್ತು. ಪಂಜರ ಸರಿಯಾಗಿ ಮುಚ್ಚದೇ ಇದ್ದ ಮರಿ ಹೊರಗೆ ಬಂದಿದೆ. ನಂತರ ಅತ್ತಿತ್ತ ಓಡಾಡಿ, ಬಾಗಿಲನ್ನು ತೆರೆಯುವ ಸಾಹಸ ಮಾಡಿದೆ.
Vijaya Karnataka Web Flight- Dog


ಅದರ ಉಗುರಿನಿಂದ ಪರಚಿ, ಕಾಲಿನಿಂದ ವಿಮಾನದ ಒಂದು ಬಾಗಿಲು ಅರ್ಧ ತೆರೆದಿದೆ. ವಿಮಾನದ ಭದ್ರತಾ ವ್ಯವಸ್ಥೆಯ ಕಾರಣ ಬಾಗಿಲು ಸಂಪೂರ್ಣವಾಗಿ ತೆರೆದುಕೊಳ್ಳಲು ಸಾಧ್ಯವಾಗಿಲ್ಲ. ವಿಮಾನ ಹಾರಾಟ ನಡೆಸುತ್ತಿರುವಾಗಲೇ ಬಾಗಿಲು ಅರ್ಧ ತೆರೆದ ಕಾರಣ ಎಚ್ಚರಿಕೆಯ ಗಂಟೆ ಬಡಿದುಕೊಳ್ಳಲು ಪ್ರಾರಂಭಿಸಿದೆ. ಆಗ ಭೂಮಿಯಿಂದ ಸುಮಾರು 13,000 ಅಡಿಗಳ ಮೇಲೆ ವಿಮಾನ ಹಾರಾಟ ಮಾಡುತ್ತಿತ್ತು. ಮಾಸ್ಕೋ ಸಮೀಪಿಸುತ್ತಿದ್ದಂತೆ ಪೈಲಟ್‌ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಬಳಿಕ ಸಮಸ್ಯೆಗೆ ಕಾರಣವೇನೆಂದು ತಿಳಿದಿದೆ. ನಾಯಿ ಮರಿಯ ಜೀವಕ್ಕೆ ಯಾವುದೇ ಪ್ರಾಣಾಪಾಯವಾಗಿಲ್ಲ. ಪ್ರಯಾಣಿಕರಿಗೂ ಯಾವುದೇ ತೊಂದರೆ ಆಗದೆ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ