ಆ್ಯಪ್ನಗರ

ನಾನೇ ಗೆದ್ದೆ: ಪಟ್ಟು ಬಿಡದ ಡೊನಾಲ್ಡ್ ಟ್ರಂಪ್‌ರಿಂದ ರೋಚಕ ಟ್ವೀಟ್!

ಐ ವೋನ್ ದಿ ಎಲೆಕ್ಷನ್(ನಾನು ಚುನಾವಣೆ ಗೆದ್ದಿದ್ದೇನೆ) ಎಂದು ಮತ್ತೆ ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ. ನಾನು ಚುನಾವಣೆಯಲ್ಲಿ ಜಯಗಳಿಸಿದ್ದು ಅಧಿಕೃತ ಚುನಾವಣಾ ಫಲಿತಾಂಶ ಮಾತ್ರ ಬೇರೆಯಾಗಿದೆ ಎಂದು ಟ್ರಂಪ್ ನುಡಿದಿದ್ದಾರೆ.

Vijaya Karnataka Web 16 Nov 2020, 10:06 pm
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಹಾಗೂ ಉಪಾಧ್ಯಕ್ಷೀಯ ಚುನಾವಣೆಗಳು ಮುಗಿದು ಫಲಿತಾಂಶವೂ ಪ್ರಕಟವಾಗಿದೆ. ಆದರೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮಾತ್ರ ತಮ್ಮ ಸೋಲನ್ನು ಒಪ್ಪಿಕೊಳ್ಳಲು ಸುತಾರಾಂ ತಯಾರಿಲ್ಲ.
Vijaya Karnataka Web Donald Trump
ಸಂಗ್ರಹ ಚಿತ್ರ


ಆರಂಭದಿಂದಲೂ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದೇ ವಾದಿಸುತ್ತಾ ಬಂದಿರುವ ಟ್ರಂಪ್, ಇದೀಗ ಅಧಿಕೃತ ಫಲಿತಾಂಶ ಹೊರಬಂದರೂ ತಮ್ಮ ವಾದ ಸರಣಿಯನ್ನು ಮುಂದುವರೆಸಿದ್ದಾರೆ.

ಅದರಂತೆ 'ಐ ವೋನ್ ದಿ ಎಲೆಕ್ಷನ್'(ನಾನು ಚುನಾವಣೆ ಗೆದ್ದಿದ್ದೇನೆ) ಎಂದು ಮತ್ತೆ ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ.

ಸೋಲೊಪ್ಪದ ಡೊನಾಲ್ಡ್‌ ಟ್ರಂಪ್‌, ಅಮೆರಿಕದಲ್ಲಿ ಮುಂದುವರಿದ ಪ್ರತಿಭಟನೆ

ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಡೊನಾಲ್ಡ್ ಟ್ರಂಪ್, ನಾನು ಚುನಾವಣೆಯಲ್ಲಿ ಜಯಗಳಿಸಿದ್ದು ಅಧಿಕೃತ ಚುನಾವಣಾ ಫಲಿತಾಂಶ ಮಾತ್ರ ಬೇರೆಯಾಗಿದೆ ಎಂದು ನುಡಿದಿದ್ದಾರೆ.


ಅಲ್ಲದೇ ಜಾರ್ಜಿಯಾದಲ್ಲಿ ನೆಪ ಮಾತ್ರಕ್ಕೆ ಮರು ಎಣಿಕೆ ನಡೆಸಲಾಗುತ್ತಿದ್ದು, ಮತಪತ್ರಗಳ ಮೇಲಿನ ಸಹಿಯ ನೈಜ ಪರಿಶೀಲನೆ ನಡೆಯುತ್ತಿಲ್ಲ ಎಂದು ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ.

ಎಡ ಡೆಮಾಕ್ರೆಟಿಕ್ ಪಕ್ಷ ತಮ್ಮ ಫೇಕ್ ನ್ಯೂಸ್ ಸಹಕಾರದೊಂದಿಗೆ ಈ ಚುನಾವಣೆಯನ್ನು ಕದಿಯಲು ಪ್ರಯತ್ನಿಸುತ್ತಿದ್ದು, ನಾವು ಇದಕ್ಕೆ ಆಸ್ಪದ ಕೊಡುವುದಿಲ್ಲ ಎಂದು ಟ್ರಂಪ್ ಗುಡುಗಿದ್ದಾರೆ.

ಸೋಲು ಒಪ್ಪಿಕೊಳ್ಳದ ಡೊನಾಲ್ಡ್‌ ಟ್ರಂಪ್‌, ಕಾನೂನು ಹೋರಾಟ ನಡೆಸಲು ಸಜ್ಜು

ಒಟ್ಟಿನಲ್ಲಿ ತಮ್ಮ ಚುನಾವಣಾ ಸೋಲನ್ನು ಒಪ್ಪದ ಟ್ರಂಪ್, ನ್ಯಾಯಯುತವಾಗಿ ನಾನೇ ಗೆದ್ದಿರುವುದು ಎಂದು ವಾದಿಸುತ್ತಿರುವುದು ಇಡೀ ವಿಶ್ವದ ಗಮನ ಸೆಳೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ