ಆ್ಯಪ್ನಗರ

ಭಾರತೀಯರಿಗೆ ನಾನು ಆಭಾರಿ ಎಂದ ಟ್ರಂಪ್

ಅಮೆರಿಕ ಅಧ್ಯಕ್ಷ ಹುದ್ದೆ ಅಲಂಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಡೊನಾಲ್ಡ್‌ ಟ್ರಂಪ್‌ ವೈಟ್‌ಹೌಸ್‌ನಲ್ಲಿ ದೀಪಾವಳಿ ಹಬ್ಬ ಆಚರಿಸಿಕೊಂಡಿದ್ದಾರೆ.

TNN 19 Oct 2017, 11:53 am
ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಹುದ್ದೆ ಅಲಂಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಡೊನಾಲ್ಡ್‌ ಟ್ರಂಪ್‌ ವೈಟ್‌ಹೌಸ್‌ನಲ್ಲಿ ವಿಶ್ವವಿಖ್ಯಾತ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
Vijaya Karnataka Web donald trump celebrates diwali in oval office
ಭಾರತೀಯರಿಗೆ ನಾನು ಆಭಾರಿ ಎಂದ ಟ್ರಂಪ್


ಟ್ರಂಪ್‌ ಆಡಳಿತ ವರ್ಗದ ಭಾರತೀಯ-ಅಮೆರಿಕನ್‌ ಸದಸ್ಯರೊಂದಿಗೆ ದೀಪಾವಳಿ ಹಬ್ಬ ಆಚರಿಸಿಕೊಂಡಿರುವ ಡೊನಾಲ್ಡ್‌ ಟ್ರಂಪ್‌ ತಮ್ಮ ದೀಪಾವಳಿ ಆಚರಣೆಯ ವೀಡಿಯೊವನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

'ನಾವು ದೀಪಾವಳಿಯನ್ನು ಆಚರಿಸಿಕೊಳ್ಳುವುದರ ಮೂಲಕ ಭಾರತೀಯರು, ಅವರ ಸಂಸ್ಕೃತಿ, ಹಿಂದೂ ಧರ್ಮದ ನಂಬಿಕೆ ಹಾಗೂ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೆನಪಿಸಿಕೊಳ್ಳಬಹುದು' ಎಂದು ಟ್ರಂಪ್‌ ಹೇಳಿಕೊಂಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇನೆ ಎಂದು ಹೇಳಿರುವ ಟ್ರಂಪ್‌, ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ದೇಶದ ಬೆಳವಣಿಗೆಗೆ ಕಲೆ, ವಿಜ್ಞಾನ, ವೈದ್ಯಕೀಯ, ವ್ಯಾಪಾರ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅಸಾಮಾನ್ಯ ಕೊಡುಗೆಗಳನ್ನು ನೀಡಿದ್ದು, ಇವರೆಲ್ಲರಿಗೂ ದೀಪಾವಳಿ ಶುಭಾಶಯಗಳು ಎಂದು ತಿಳಿಸಿದ್ದಾರೆ.



ವೈಟ್‌ ಹೌಸ್‌ನಲ್ಲಿ ದೀಪಾವಳಿ ಆಚರಣೆಗೆ ವಿಶ್ವ ಸಂಸ್ಥೆಯ ಅಮೆರಿಕ ರಾಯಭಾರಿ ನಿಕ್ಕಿ ಹಾಲೇ, ಸೆಂಟರ್ ಫಾರ್ ಮೆಡಿಕೇರ್ ಅಡ್ಮಿನಿಸ್ಟ್ರೇಟರ್ ಸೀಮಾ ವರ್ಮಾ, ಯುಎಸ್ ಫೆಡರಲ್ ಕಮ್ಯುನಿಕೇಶನ್ಸ್‌ ಕಮಿಷನ್ ಚೇರ್ಮನ್ ಅಜಿತ್ ಪಾಯ್ ಮತ್ತಿತರರು ಪಾಲ್ಗೊಂಡಿದ್ದರು. ಅಧ್ಯಕ್ಷರ ಸಲಹೆಗಾರ್ತಿ, ಟ್ರಂಪ್ ಪುತ್ರಿ ಇವಾಂಕ ಟ್ರಂಪ್ ಕೂಡಾ ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ