ಆ್ಯಪ್ನಗರ

ಕಲ್ಪನಾ ಚಾವ್ಲಾ ಅಮೆರಿಕದ ಹೀರೋ: ಟ್ರಂಪ್‌

ಬಾಹ್ಯಾಕಾಶ ಕಾರ್ಯಕ್ರಮಗಳಿಗಾಗಿ ತನ್ನ ಜೀವವನ್ನೇ ಅರ್ಪಿಸಿದ ಕಲ್ಪನಾ ಚಾವ್ಲಾ ಅವರು ಅಮೆರಿಕದ ಹೀರೊ ಆಗಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಣ್ಣಿಸಿದ್ದಾರೆ.

Vijaya Karnataka 2 May 2018, 11:22 am
ವಾಷಿಂಗ್ಟನ್‌: ಬಾಹ್ಯಾಕಾಶ ಕಾರ್ಯಕ್ರಮಗಳಿಗಾಗಿ ತನ್ನ ಜೀವವನ್ನೇ ಅರ್ಪಿಸಿದ ಕಲ್ಪನಾ ಚಾವ್ಲಾ ಅವರು ಅಮೆರಿಕದ ಹೀರೊ ಆಗಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಣ್ಣಿಸಿದ್ದಾರೆ.
Vijaya Karnataka Web Kalpana Chawla


ಮೇ ತಿಂಗಳನ್ನು 'ಏಷಿಯನ್‌ ಅಮೆರಿಕನ್‌ ಹಾಗೂ ಫೆಸಿಪಿಕ್‌ ದ್ವೀಪ ರಾಷ್ಟ್ರಗಳ ಪಾರಂಪರಿಕ ತಿಂಗಳು' ಎಂದು ಘೋಷಿಸಿದ ಬೆನ್ನಲ್ಲೇ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ. ಅಮೆರಿಕ ಕಾಂಗ್ರೆಸ್‌ ಕೂಡ ಈ ಘೋಷಣೆಗೆ ಅನುಮೋದನೆ ನೀಡಿದೆ.

ಭಾರತ ಮೂಲದ ಮೊದಲ ಮಹಿಳಾ ಗಗನಯಾತ್ರಿಯಾಗಿ ಕಲ್ಪನಾ ಚಾವ್ಲಾ (40) 2003ರಲ್ಲಿ ಕೊಲಂಬಿಯಾ ಬಾಹ್ಯಾಕಾಶ ನೌಕಾ ದುರಂತದಲ್ಲಿ ಮೃತಪಟ್ಟ ಏಳು ಜನರಲ್ಲಿ ಒಬ್ಬರಾಗಿದ್ದಾರೆ. ಬಾಹ್ಯಾಕಾಶ ನೌಕೆಯು ಭೂಮಿಯ ವಾತಾವರಣಕ್ಕೆ ಮರು ಪ್ರವೇಶ ಮಾಡುವ ಸಮಯದಲ್ಲಿ ಈ ದುರಂತ ಸಂಭವಿಸಿತ್ತು.

''ಗಗನಯಾತ್ರಿ ಆಗಬೇಕೆಂದು ಕನಸು ಕಾಣುವ ಸಾವಿರಾರು ಹೆಣ್ಣು ಮಕ್ಕಳಿಗೆ ಕಲ್ಪನಾ ಚಾವ್ಲಾ ಸ್ಫೂರ್ತಿಯಾಗಿದ್ದಾರೆ. ಬಾಹ್ಯಾಕಾಶ ನೌಕಾ ಕಾರ್ಯಕ್ರಮ ಹಾಗೂ ಅದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸರಕು ಸಾಗಣೆ, ಸಿಬ್ಬಂದಿ ಸಾಗಾಟ ಕಾರ್ಯಾಚರಣೆಯಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡ ಆಕೆ ಅಮೆರಿಕದ ಹಿರೋ ಆಗಿದ್ದಾರೆ,'' ಎಂದು ಟ್ರಂಪ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ