ಆ್ಯಪ್ನಗರ

ಉ.ಕೊರಿಯಾದ ಕಿಮ್‌ ಜತೆ ಮಾತಿಗೆ ಸಿದ್ಧ: ಟ್ರಂಪ್‌

ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಜತೆಗೆ ದೂರವಾಣಿ ಮಾತುಕತೆಗೆ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಉತ್ತರ ಕೊರಿಯಾ-ದಕ್ಷಿಣ ಕೊರಿಯಾ ನಡುವಣ ಮಾತುಕತೆಗೆ ವೇದಿಕೆ ಸಿದ್ಧವಾದ ಬಳಿಕ ಈ ಧನಾತ್ಮಕ ಬೆಳವಣಿಗೆ ನಡೆದಿದೆ.

Vijaya Karnataka Web 7 Jan 2018, 2:45 pm
ಅಮೆರಿಕ- ಉ.ಕೊರಿಯಾ ಉದ್ವಿಗ್ನತೆ ಶಮನಕ್ಕೆ ವೇದಿಕೆ ತಯಾರಿ
Vijaya Karnataka Web donald trump says he would absolutely talk to north koreas kim on phone
ಉ.ಕೊರಿಯಾದ ಕಿಮ್‌ ಜತೆ ಮಾತಿಗೆ ಸಿದ್ಧ: ಟ್ರಂಪ್‌


ಕ್ಯಾಂಪ್‌ ಡೇವಿಡ್‌: ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಜತೆಗೆ ದೂರವಾಣಿ ಮಾತುಕತೆಗೆ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಉತ್ತರ ಕೊರಿಯಾ-ದಕ್ಷಿಣ ಕೊರಿಯಾ ನಡುವಣ ಮಾತುಕತೆಗೆ ವೇದಿಕೆ ಸಿದ್ಧವಾದ ಬಳಿಕ ಈ ಧನಾತ್ಮಕ ಬೆಳವಣಿಗೆ ನಡೆದಿದೆ.

ದಕ್ಷಿಣ ಕೊರಿಯಾದ ಜತೆ ಮುಂದಿನ ವಾರ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಉತ್ತರ ಕೊರಿಯಾ ಶುಕ್ರವಾರ ಹೇಳಿತ್ತು. ಎರಡು ವರ್ಷಗಳಿಗೂ ಹೆಚ್ಚು ಅಂತರದ ಬಳಿಕ ಮೊದಲ ಬಾರಿಗೆ ಈ ಎರಡೂ ಕೊರಿಯಾಗಳು ಸಂಧಾನದ ಮೇಜಿಗೆ ಬರುತ್ತಿವೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಾಗಳು ಉದ್ದೇಶಿತ ಜಂಟಿ ಮಿಲಿಟರಿ ಕವಾಯತನ್ನು ಮುಂದೂಡಿದ ಬಳಿಕ ಈ ಸಂಧಾನದ ವೇದಿಕೆ ಸಿದ್ಧವಾಗಿದೆ.

ಮೇರಿಲ್ಯಾಂಡ್‌ನ ಕ್ಯಾಪ್‌ ಡೇವಿಡ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಟ್ರಂಪ್‌, ಕಿಮ್‌ ಜತೆ ಯಾವುದೇ ಪೂರ್ವ ಷರತ್ತಿಲ್ಲದೆ ಮಾತುಕತೆ ನಡೆಸುವ ಇಂಗಿತ ವ್ಯಕ್ತಪಡಿಸಿದರು.

'ಖಂಡಿತ, ಅವರ ಜತೆ ಮಾತನಾಡಲು ನನಗೇನೂ ಸಮಸ್ಯೆಯಿಲ್ಲ. ಶೀಘ್ರವೇ ಅವರ ಜತೆ ಮಾತನಾಡುವೆ' ಎಂದು ಟ್ರಂಪ್‌ ಘೋಷಿಸಿದರು.

ಟ್ರಂಪ್‌ ಅಧ್ಯಕ್ಷರಾಗಿ ಆಯ್ಕೆಯಾದಾಗಿನಿಂದಲೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜತೆ ವಾಗ್ಯುದ್ಧ ನಡೆಸುತ್ತಲೇ ಇದ್ದಾರೆ.

ಮೊನ್ನೆಯಷ್ಟೇ, ಅಣ್ವಸ್ತ್ರದ ಬಟನ್‌ ನನ್ನ ಮೇಜಿನ ಮೇಲೆಯೇ ಇದೆ ಎಂದು ಕಿಮ್‌ ಸವಾಲು ಹಾಕಿದ್ದರು. ಅದಕ್ಕೆ ಪ್ರತಿಯಾಗಿ ಟ್ರಂಪ್‌, ತಮ್ಮ ಬಳಿಯೂ ಅದಕ್ಕಿಂತ ದೊಡ್ಡ ಅಣ್ವಸ್ತ್ರದ ಬಟನ್‌ ಇದೆ, ಅದು ಕೆಲಸವನ್ನೂ ಮಾಡುತ್ತದೆ ಎನ್ನುವ ಮೂಲಕ ತಿರುಗೇಟು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಉದ್ದೇಶಿತ ಮಾತುಕತೆ ಪರಸ್ಪರ ಉದ್ವಿಗ್ನತೆ ಶಮನಗೊಳಿಸಲು ನೆರವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ