ಹೊಸದಿಲ್ಲಿ: ಬೈಕ್, ಕಾರುಗಳಿಗೆ ಫ್ಯಾನ್ಸಿ ಸಂಖ್ಯೆಗಳುಳ್ಳ ನಂಬರ್ ಪ್ಲೇಟ್ ಖರೀದಿಗೆ ಜನ ಹೆಚ್ಚಿನ ಹಣ ಸುರಿಯುತ್ತಾರೆ. ಆದರೆ, ದುಬೈನಲ್ಲಿ ವ್ಯಕ್ತಿಯೊಬ್ಬ ಇಂತಹ ಫ್ಯಾನ್ಸಿ ನಂಬರ್ ಪ್ಲೇಟ್ಗೆ ಬರೋಬ್ಬರಿ 72.08 ಕೋಟಿ ರೂ. ಸುರಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಬುಧಾಬಿಯಲ್ಲಿ ನಡೆದ 'ಮೋಸ್ಟ್ ನೋಬಲ್ ನಂಬರ್ಸ್' ಹರಾಜು ಪ್ರಕ್ರಿಯೆಯಲ್ಲಿ ದುಬೈ ವ್ಯಕ್ತಿಯೊಬ್ಬ 'ಎಎ8' ಎಂಬ ನಂಬರ್ ಪ್ಲೇಟ್ಗೆ ಇಷ್ಟೊಂದು ಹಣ ನೀಡಿದ್ದಾನೆ. ಹಾಗೆಯೇ, ಈ ನಂಬರ್ ಪ್ಲೇಟ್ ಜಗತ್ತಿನಲ್ಲೇ ಮೂರನೇ ದುಬಾರಿ ನಂಬರ್ ಪ್ಲೇಟ್ ಎನಿಸಿದೆ.
ಕಳೆದ ವರ್ಷ ಎಎ9 ನಂಬರ್ ಪ್ಲೇಟ್ 79 ಕೋಟಿ ರೂ.ಗೆ ಮಾರಾಟವಾಗಿತ್ತು. ಈ ಬಾರಿಯ ಹರಾಜಿನಲ್ಲಿ'ಎಫ್55' 8.23 ಕೋಟಿ ರೂ.ಗೆ ಹಾಗೂ 'ವಿ66' 7.91 ಕೋಟಿ ರೂ.ಗೆ ಮಾರಾಟವಾಗಿದೆ.
ಕಳೆದ ವರ್ಷ ಎಎ9 ನಂಬರ್ ಪ್ಲೇಟ್ 79 ಕೋಟಿ ರೂ.ಗೆ ಮಾರಾಟವಾಗಿತ್ತು. ಈ ಬಾರಿಯ ಹರಾಜಿನಲ್ಲಿ'ಎಫ್55' 8.23 ಕೋಟಿ ರೂ.ಗೆ ಹಾಗೂ 'ವಿ66' 7.91 ಕೋಟಿ ರೂ.ಗೆ ಮಾರಾಟವಾಗಿದೆ.