ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹತ್ಯೆ ಪ್ರಯತ್ನ ಘಟನೆಯಿಂದ ಚೇತರಿಸಿಕೊಳ್ಳುವ ಮುನ್ನವೇ ಹೊಸ ವಿವಾದವೊಂದು ಅವರನ್ನು ಸುತ್ತಿಕೊಂಡಿದೆ. ಮಹಿಳೆಯೊಬ್ಬರ ಜತೆ ಇಮ್ರಾನ್ ಖಾನ್ ಸರಸಲ್ಲಾಪದ ಮಾತುಗಳಲ್ಲಿ ತೊಡಗಿದ್ದರು ಎನ್ನಲಾದ ಆಡಿಯೋ ತುಣುಕೊಂದು ಸೋರಿಕೆಯಾಗಿದೆ. ಪಾಕಿಸ್ತಾನದ ಪತ್ರಕರ್ತ ಸಯ್ಯದ್ ಅಲಿ ಹೈದರ್, ಯೂಟ್ಯೂಬ್ನಲ್ಲಿ ಈ ಆಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಇದು ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ನಡೆದಿದ್ದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಆಡಿಯೋ ಪಾಕಿಸ್ತಾನ ಪ್ರಧಾನಿ ಕಚೇರಿಯಿಂದಲೇ ಸೃಷ್ಟಿಯಾಗಿದೆ ಎಂದು ಕೆಲವು ವರದಿಗಳು ಹೇಳಿವೆ.
ಈ ಆಡಿಯೋ ತುಣಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇಮ್ರಾನ್ ಖಾನ್ ಅವರು ಈ ವರ್ಷದ ಆರಂಭದಲ್ಲಿ ಅಧಿಕಾರ ಕಳೆದುಕೊಂಡ ನಂತರ ಈ ಮಾತುಕತೆಗಳು ನಡೆದಿವೆ ಎಂದು ಹೇಳಲಾಗಿದೆ. ಇದು ಮಾಜಿ ಕ್ರಿಕೆಟಿಗರೂ ಆಗಿರುವ ಇಮ್ರಾನ್ ಖಾನ್ ಮತ್ತು ಅವರ ಪಾಕಿಸ್ತಾನ್ ತೆಹ್ರೀಕ್- ಇ- ಇನ್ಸಾಫ್ (ಪಿಟಿಐ) ಪಕ್ಷಕ್ಕೆ ತೀವ್ರ ಕಸಿವಿಸಿ ಉಂಟುಮಾಡಿದೆ.
ಈ ಆಡಿಯೋ ಕ್ಲಿಪ್ಗಳು ನಕಲಿ ಎಂದು ಪ್ರತಿಪಾದಿಸಿರುವ ಪಿಟಿಐ, ತಮ್ಮ ಮುಖ್ಯಸ್ಥರನ್ನು ಟಾರ್ಗೆಟ್ ಮಾಡಲು ಸರ್ಕಾರವು ನಕಲಿ ವಿಡಿಯೋ ಮತ್ತು ಆಡಿಯೋಗಳನ್ನು ಬಳಸುತ್ತಿದೆ ಎಂದು ಆರೋಪಿಸಿದೆ.
"ಪಿಟಿಐ ಅಧ್ಯಕ್ಷರ ರಾಜಕೀಯ ವಿರೋಧಿಗಳು ನಕಲಿ ಆಡಿಯೋಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸುವುದರ ಹೊರತಾಗಿ ಬೇರೇನನ್ನೂ ಯೋಚಿಸಲಾರರು" ಎಂದು ಪಿಟಿಐ ಮುಖಂಡ ಅರ್ಸ್ಲಾನ್ ಖಾಲಿದ್ ಟೀಕಿಸಿದ್ದಾರೆ.
ಇಮ್ರಾನ್ ಖಾನ್ ಹಾಗೂ ಮಹಿಳೆ ಜತೆ ದೂರವಾಣಿಯಲ್ಲಿ ಆಪ್ತ ಮಾತುಕತೆ ನಡೆದಿದೆ ಎಂದು ಆಡಿಯೋ ಕ್ಲಿಪ್ಗಳ ಮೂಲಕ ಆರೋಪಿಸಲಾಗಿದೆ. ಇದರಲ್ಲಿ ಇಮ್ರಾನ್ ಖಾನ್, ತಾವಿಬ್ಬರೂ ಭೇಟಿಯಾಗಬೇಕು ಎಂದು ಒತ್ತಾಯಿಸಿದ್ದು, ಅಶ್ಲೀಲ ಪದಗಳನ್ನು ಬಳಸಿರುವುದು ದಾಖಲಾಗಿದೆ.
ಇಮ್ರಾನ್ ಖಾನ್ ಅವರ ಧ್ವನಿಯನ್ನು ಹೋಲುವ ಆಡಿಯೋದಲ್ಲಿ ಭೇಟಿಯ ಕುರಿತಂತೆ ಚರ್ಚೆ ನಡೆದಿದೆ. ಮರುದಿನ ಭೇಟಿಯಾಗುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಆದರೆ ತನ್ನ ಕುಟುಂಬದವರನ್ನು ಭೇಟಿ ಮಾಡಿಬೇಕಿರುವುದರಿಂದ ಅದನ್ನು ಬಳಿಕ ಖಚಿತಪಡಿಸುವುದಾಗಿ ಇಮ್ರಾನ್ ಖಾನ್ ಧ್ವನಿ ಹೇಳಿದೆ. "ನನ್ನ ಕುಟುಂಬ ಮತ್ತು ಮಕ್ಕಳು ಬರುತ್ತಿದ್ದಾರೆ. ಹೀಗಾಗಿ ಅದರ ಬಗ್ಗೆ ಯೋಚಿಸಬೇಕು. ಅವರು ತಡವಾಗಿ ಬರುವಂತೆ ಮಾಡಲು ಪ್ರಯತ್ನಿಸುತ್ತೇನೆ. ನಿನಗೆ ನಾಳೆ ಅದನ್ನು ತಿಳಿಸುತ್ತೇನೆ" ಎಂದು ಖಾನ್ ಅವರದ್ದು ಎನ್ನಲಾದ ಧ್ವನಿ ತಿಳಿಸಿದೆ.
"ಸೆಕ್ಸ್ ಕರೆ ಸೋರಿಕೆಯ ಬಳಿಕ ಇಮ್ರಾನ್ ಖಾನ್ ಅವರು ಇಮ್ರಾನ್ ಹಶ್ಮಿಯಾಗಿ ಬದಲಾಗಿದ್ದಾರೆ" ಎಂದು ಪತ್ರಕರ್ತೆ ನೈಲಾ ಇನಾಯತ್ ಲೇವಡಿ ಮಾಡಿದ್ದಾರೆ. ಈ ಆಡಿಯೋ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರದ್ದೇ ಎನ್ನುವುದಕ್ಕೆ ಪುರಾವೆಗಳು ಸಿಕ್ಕಿಲ್ಲ. ಆದರೆ, ಈ ಆಡಿಯೋ ಪಾಕಿಸ್ತಾನದಾದ್ಯಂತ ಸಾಮಾಜಿಕ ಮಾಧ್ಯಮಗಳ ಮೂಲಕ ಹರಿದಾಡುತ್ತಿದೆ. ಇದು ಪಿಟಿಐ ಪಕ್ಷಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ.