ಆ್ಯಪ್ನಗರ

ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್‌ ಕ್ಯಾಸ್ಟ್ರೊ ಇನ್ನಿಲ್ಲ

ಕ್ಯೂಬಾದ ಕ್ರಾಂತಿಕಾರಿ ನಾಯಕ, ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ನಿಧನರಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 26 Nov 2016, 2:52 pm
ಹವಾನಾ: ಕ್ಯೂಬಾದ ಕ್ರಾಂತಿಕಾರಿ ನಾಯಕ, ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ನಿಧನರಾಗಿದ್ದಾರೆ, ಅವರಿಗೆ 90 ವರ್ಷವಾಗಿತ್ತು. ಫಿಡೆಲ್ ಕ್ಯಾಸ್ಟ್ರೊ ನಿಧನ ವಿಚಾರವನ್ನು ಸಹೋದರ ಹಾಗೂ ಕ್ಯೂಬಾ ಅಧ್ಯಕ್ಷ ರೌಲ್ ಕ್ಯಾಸ್ಟ್ರೊ ಪ್ರಕಟಿಸಿದ್ದಾರೆ.
Vijaya Karnataka Web fidel castro made revolutionary mark on history
ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್‌ ಕ್ಯಾಸ್ಟ್ರೊ ಇನ್ನಿಲ್ಲ


634 ಬಾರಿ ಹತ್ಯೆ ಯತ್ನದಿಂದ ಪಾರಾಗಿರುವ ಫಿಡೆಲ್ ಕ್ಯಾಸ್ಟ್ರೊ ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ 2008ರಲ್ಲಿ ಸಹೋದರ ರೌಲ್ ಕ್ಯಾಸ್ಟ್ರೊ ಅವರಿಗೆ ಕ್ಯೂಬಾದ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದ್ದರು.

ಫಿಡೆಲ್ ಕ್ಯಾಸ್ಟ್ರೊ 1926ರಲ್ಲಿ ಕ್ಯೂಬಾದ ಆಗ್ನೇಯ ಪೂರ್ವ ಪ್ರಾಂತ್ಯದಲ್ಲಿ ಜನಿಸಿದವರು. ಆಡಳಿತದಲ್ಲಿದ್ದ ಬಟಿಸ್ಟಾ ರೆಜಿಮ್ ನ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದ ಅವರು 1953ರಲ್ಲಿ ಜೈಲು ಸೇರಿದ್ದರು. 1955ರಲ್ಲಿ ಬಿಡುಗಡೆಯಾಗಿ 1956ರಲ್ಲಿ ಬಟಿಸ್ಟಾ ರೆಜಿಮ್ ನ ವಿರುದ್ಧ ಚೆಗುವೆರಾ ಜತೆ ಸೇರಿ ಯುದ್ಧ ಮಾಡಿದ್ದರು. ಬಳಿಕ 1959ರಲ್ಲಿ ಬಟಿಸ್ಟಾ ರೆಜಿಮೆಂಟ್ ಅನ್ನು ಸೋಲಿಸಿ ಫಿಡೆಲ್ ಕ್ಯಾಸ್ಟ್ರೊ ಮೊದಲ ಬಾರಿಗೆ ಕ್ಯೂಬಾದ ಅಧ್ಯಕ್ಷರಾಗಿ ಆಯ್ಕೆಯಾದರು. 1976ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಕಮ್ಯೂನಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಅಧಿಕಾರಕ್ಕೆ ಬಂದಿದ್ದರು.

ಮಾನವಹಕ್ಕು ಉಲ್ಲಂಘನೆ, ವಿರೋಧಪಕ್ಷಗಳ ಮೇಲೆ ನಿಷೇಧ, ಕ್ಯೂಬಾದ ಆರ್ಥಿಕತೆ ನಾಶಗಳಿಗೆ ಕಾರಣರಾಗಿರುವ ಟೀಕೆಗಳು ಫಿಡೆಲ್‌ ಕ್ಯಾಸ್ಟ್ರೊ ಅವರ ಮೇಲಿದೆ. ಅದೇ ರೀತಿ ಲ್ಯಾಟಿನ್‌ ಅಮೆರಿಕಾದ ಮೇಲೆ ಅಮೆರಿಕ ಪ್ರಾಬಲ್ಯವನ್ನುವಿರೋಧಿಸಿದ, ಬಡವರಿಗೆ ಆರೋಗ್ಯ ಮತ್ತು ಶಿಕ್ಷಣ ಸೇವೆಗಳನ್ನು ನೀಡುವ ಮೂಲಕ ಜಗತ್ತಿನಾದ್ಯಂತ ಸೋಷಿಯಲಿಸ್ಟ್‌ ಮೂವ್‌ಮೆಂಟ್‌ಗೆ ಉತ್ತೇಜನ ನೀಡಿದ ನಾಯಕ ಎಂಬ ಶ್ಲಾಘನೆಯೂ ಇದೆ ಎಂಬುದು ಗಮನಾರ್ಹ.

ಒಟ್ಟಿನಲ್ಲಿ ತನ್ನ ಗಡ್ಡ, ಸೇನಾ ಉಡುಪು, ಕ್ಯೂಬಾದ ಸಿಗಾರ್‌ನೊಂದಿಗೆ ತನ್ನದೇ ಆದ ಛಾಪು ಮೂಡಿಸಿಕೊಂಡಿದ್ದ ಫಿಡೆಲ್‌ ಕ್ಯಾಸ್ಟ್ರೊ ಸಮರ್ಥ ನಾಯಕ, ಜಾಗತಿಕ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿದ್ದರು.

1990ರಲ್ಲಿ ಸೋವಿಯತ್‌ ಯೂನಿಯನ್‌ ಪತನಗೊಂಡರೂ ಅಮೆರುಕದ ಹಿಡಿತದಿಂದ ಕ್ಯೂಬಾದ ಸಾರ್ವಭೌಮತೆಯನ್ನುರಕ್ಷಿಸಿ ನಾಯಕತ್ವವನ್ನು ಮರೆದ ಕ್ರಾಂತಿಕಾರಿ ಫಿಡೆಲ್‌ ಕ್ಯಾಸ್ಟ್ರೊ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ