ಆ್ಯಪ್ನಗರ

ಬಾಹ್ಯಾಕಾಶ ಪ್ರವಾಸಕ್ಕೆ ಇನ್ನೊಂದೇ ಹೆಜ್ಜೆ : ಬೋಯಿಂಗ್‌ ಮೊದಲ ಹಂತದ ಪ್ರಯೋಗ ಯಶಸ್ವಿ

ವಿಮಾನದಲ್ಲಿ ಹಾರಾಡಿ ಹಾರಾಡಿ ಬೇಜಾರಾಗಿರುವವರಿಗೆಂದೇ ಬಾಹ್ಯಾಕಾಶಕ್ಕೆ ಪ್ರವಾಸ ಕರೆದೊಯ್ಯಲೆಂದೇ ಅಮರಿಕದ ಸ್ಪೇಸ್‌ ಎಕ್ಸ್‌ ಹಾಗೂ ಬೋಯಿಂಗ್‌ ಸಂಸ್ಥೆಗಳು ಜಂಟಿಯಾಗಿ ಯೋಜನೆ ಕೈಗೊಂಡಿದೆ. ಇದೀಗ ಈ ಯೋಜನೆಯ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ.

Vijaya Karnataka Web 5 Nov 2019, 7:06 pm
ವಿಮಾನದಲ್ಲಿ ಹಾರಾಡಿ ಹಾರಾಡಿ ಬೇಜಾರಾಗಿರುವವರಿಗೆಂದೇ ಬಾಹ್ಯಾಕಾಶಕ್ಕೆ ಪ್ರವಾಸ ಕರೆದೊಯ್ಯಲು ಅಮರಿಕದ ವಿಮಾನಯಾನ ಸಂಸ್ಥೆ ಬೋಯಿಂಗ್ ಯೋಜನೆ ಕೈಗೊಂಡಿದೆ. ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ಪೇಸ್‌ ಎಕ್ಸ್‌ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಯೋಜನೆಯಡಿ ಸೋಮವಾರ ಮೊದಲ ಹಂತದ ಪ್ರಯೋಗ ಕೈಗೊಂಡಿದ್ದು, ಬಹುಪಾಲು ಯಶಸ್ವಿಯೂ ಆಗಿದೆ.
Vijaya Karnataka Web Pad Abort Test boing


ಬಾಹ್ಯಾಕಾಶಕ್ಕೊಂದು ಟಿಕೆಟ್ ಕೊಡಿ...!

ಬೋಯಿಂಗ್‌ ಕಂಪನಿಯು ಬಾಹ್ಯಾಕಾಶ ಪ್ರವಾಸಕ್ಕೆಂದೇ ವಿಶೇಷವಾಗಿ ತಯಾರಿಸುಸತ್ತಿರುವ 'ಸ್ಟಾರ್‌ಲೈನರ್‌' ಗಗನನೌಕೆಯನ್ನು ಇದೇ ಮೊದಲ ಬಾರಿಗೆ ಪ್ರಯೋಗಿಕ ಉಡಾವಣೆ ಮಾಡಿದೆ. ಇದರಲ್ಲಿ ಪಾಡ್‌ ಅಬಾರ್ಟ್‌ ಪರೀಕ್ಷೆ (ರಾಕೆಟ್‌ನಿಂದ ಗಗನನೌಕೆ ಸುರಕ್ಷಿತವಾಗಿ ಬೇರ್ಪಡುವುದು) ನಡೆಸಿದ್ದು, ಬಹುಪಾಲು ಯಶಸ್ವಿಯೂ ಆಗಿದೆ. ಇದರಿಂದ ಬೋಯಿಂಗ್‌ನ ಆತ್ಮವಿಶ್ವಾಸ ಹೆಚ್ಚಿದ್ದು, ಡಿಸೆಂಬರ್‌ 17 ಕ್ಕೆ ಪ್ರಾಯೋಗಿಕವಾಗಿ ಮಾನವರಹಿತ ನೌಕೆ ಉಡಾಯಿಸುವ ವಿಶ್ವಾಸ ವ್ಯಕ್ತಪಡಿಸಿದೆ.

ಮೊದಲ ಬಾರಿ ಬಾಹ್ಯಾಕಾಶಕ್ಕೆ ಪ್ರವಾಸಿಗರನ್ನು ಹೊತ್ತೊಯ್ದ ವರ್ಜಿನ್‌ ಗ್ಯಾಲಕ್ಟಿಕ್‌ ಸ್ಪೇಸ್‌ಶಿಪ್‌! (ವೀಡಿಯೋ)

ಏನಿದು ಬಾಹ್ಯಾಕಾಶ ಪ್ರವಾಸ: ಗಗನಯಾತ್ರಿಗಳಂತೆ ಬಾಹ್ಯಾಕಾಶಕ್ಕೆ ಹೋಗಬೇಕೆಂಬ ಮಹದಾಸೆ ಹೊಂದಿರುವ ಜನರಿಗಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಒಂದು ಯೋಜನೆ ಸಿದ್ದಪಡಿಸಿದೆ. ಈ ಯೋಜನೆಯ ಜವಾಬ್ದಾರಿಯನ್ನು ಎಲನ್‌ ಮಸ್ಕ್‌ ಒಡೆತನದ ಸ್ಪೇಸ್‌ ಎಕ್ಸ್‌ ಮತ್ತು ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್‌ ಗೆ ವಯಿಸಿತ್ತು. ಇದೀಗ ಈ ಯೋಜನೆಯ ಪ್ರಯೋಗಗಳು ಆರಂಭವಾಗಿವೆ.

ನಾಸಾ ಯೋಜನೆಯಂತೆ 2020ರಿಂದ ವರ್ಷಕ್ಕೆ ಎರಡು ಬಾರಿ ನಾಸಾದಿಂದ ತಲಾ 30 ದಿನಗಳ ಕಾಲ ಈ ಯಾತ್ರೆ ನಡೆಯುತ್ತದೆ. ಆದರೆ ಬಾಹ್ಯಾಕಾಶಕ್ಕೆ ಪ್ರವಾಸ ಹೋಗಲು ಕನಿಷ್ಠ 408 ಕೋಟಿ ರೂಪಾಯಿ ವ್ಯಯವಾಗಲಿದೆ. ಇದಕ್ಕಾಗಿ ಸ್ಪೇಸ್‌ ಎಕ್ಸ್‌ ಕಂಪನಿ ತನ್ನ ಡ್ರ್ಯಾಗನ್‌ ಕ್ಯಾಪ್ಸೂಲ್‌ ತಯಾರಿಸುತ್ತಿದ್ದರೆ, ಬೋಯಿಂಗ್ 'ಸ್ಟಾರ್‌ಲೈನರ್‌ ಎಂಬ ಗಗನನೌಕೆ ತಯಾರಿಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ