ಆ್ಯಪ್ನಗರ

ನಮ್ಮಲ್ಲೇ ಇದ್ದಾನೆ ಅಜರ್‌, ಸೂಕ್ತ ಸಾಕ್ಷಿ ಕೊಟ್ಟರೆ ಬಂಧಿಸ್ತೀವಿ: ಪಾಕ್‌ ವಿದೇಶಾಂಗ ಸಚಿವಾಲಯ

ಜೈಷೆ ಮೊಹಮ್ಮದ್‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಪಾಕಿಸ್ತಾದಲ್ಲೇ ಇರುವುದಾಗಿ ಅಲ್ಲಿನ ವಿದೇಶಾಂಗ ಸಚಿವಾಲಯ ಹೇಳಿಕೊಂಡಿದ್ದು, ಭಾರತ ಸೂಕ್ತ ಸಾಕ್ಷಿಗಳನ್ನು ನೀಡಿದರೆ, ಅವುಗಳನ್ನು ಅಲ್ಲಿನ ಕೋರ್ಟ್‌ ಪುರಸ್ಕರಿಸಿದರೆ ಮಾತ್ರ ಆತನನ್ನು ಬಂಧಿಸುವುದಾಗಿ ಹೇಳಿದೆ.

PTI 1 Mar 2019, 12:08 pm
ಇಸ್ಲಾಮಾಬಾದ್‌: ಉಗ್ರ ಸಂಘಟನೆ ಜೈಷೆ ಮೊಹಮ್ಮದ್‌ನ ಮುಖ್ಯಸ್ಥ ಮಸೂದ್‌ ಅಜರ್‌ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
Vijaya Karnataka Web Masood Azar


ಭಾರತ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಿದರೆ, ಪಾಕಿಸ್ತಾನದ ಕೋರ್ಟ್‌ನಲ್ಲಿ ಸ್ವೀಕೃತಿಯಾದರೆ ಮಾತ್ರ ಮೌಲಾನಾ ಮಸೂದ್‌ ಅಜರ್‌ನನ್ನು ಬಂಧಿಸುವುದಾಗಿ ಸಿಎನ್‌ಎನ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್‌ ಖುರೇಶಿ ಹೇಳಿಕೊಂಡಿದ್ದಾರೆ.

ಅಜರ್‌ ಅನಾರೋಗ್ಯದಿಂದ ಬಳಲುತ್ತಿದ್ದು, ಮನೆಯಿಂದ ಹೊರಗೆ ಬಾರದಂತಹ ಪರಿಸ್ಥಿತಿಯಲ್ಲಿ ಇದ್ದಾನೆ ಎಂದು ಖುರೇಶಿ ಮಾಹಿತಿ ನೀಡಿದ್ದಾರೆ.

'ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಮಸೂದ್‌ ಅಜರ್‌ ಪಾಕಿಸ್ತಾನದಲ್ಲಿ ಇದ್ದಾನೆ. ಮಜೂರ್‌ ಅನಾರೋಗ್ಯಕ್ಕೆ ತುತ್ತಾಗಿದ್ದು, ಅತ್ಯಂತ ವಿಷಮ ಪರಿಸ್ಥಿತಿಯಲ್ಲಿದ್ದಾನೆ. ಮನೆಯಿಂದ ಹೊರಗೆ ಬಾರದಂತಹ ಸ್ಥಿತಿಯಲ್ಲಿದ್ದಾನೆ' ಎಂದು ಸಿಎನ್‌ಎನ್‌ ಗೆ ಖರೇಶಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಜೈಷೆ ಮೊಹಮ್ಮದ್‌ ಉಗ್ರರು ನಡೆಸಿದ ಭೀಕರ ಆತ್ಮಾಹುತಿ ದಾಳಿಗೆ ಸಂಬಂಧಿಸಿ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ತೀವ್ರ ಹದಗೆಟ್ಟಿರುವ ಹಿನ್ನೆಲೆ ಮಸೂದ್‌ ಅಜರ್‌ ಬಗ್ಗೆ ಖರೇಶಿ ಮಾಹಿತಿ ನೀಡಿದ್ದಾರೆ.

ಜೈಷೆ ಮೊಹಮ್ಮದ್‌ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಪಾಕಿಸ್ತಾನವೇ ಒಪ್ಪಿಕೊಂಡಿರುವಾಗ ಮಸೂದ್‌ ಅಜರ್‌ನನ್ನು ಏಕೆ ಬಂಧಿಸುತ್ತಿಲ್ಲ ಎಂಬ ಪ್ರಶ್ನೆಗೆ, ಭಾರತ ಸೂಕ್ತ ಸಾಕ್ಷ್ಯಗಳನ್ನು ನೀಡಿದರೆ, ಪಾಕಿಸ್ತಾನ ಕೋರ್ಟ್‌ ಅವುಗಳನ್ನು ಪರಿಗಣಿಸಿದರೆ ಮಾತ್ರ ಬಂಧನ ಸಾಧ್ಯ ಎಂದು ಖುರೇಶಿ ಉತ್ತರಿಸಿದ್ದಾರೆ.

ಪಾಕಿಸ್ತಾನ ನೆಲದಿಂದ ಭಾರತದ ವಿರುದ್ಧ ದಾಳಿ ನಡೆಸಲು ಯಾವುದೇ ಸಂಘಟನೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂಬುದಾಗಿಯೂ ಖುರೇಶಿ ಸಂದರ್ಶನದಲ್ಲಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ