ಆ್ಯಪ್ನಗರ

ಲಾಡೆನ್‌ ಪಾಕಿಸ್ತಾನದ ಹೀರೋ ಎಂದ ಮುಷರ್ರಫ್‌, ಯುನೆಸ್ಕೊ ಸಭೆಯಲ್ಲಿ ಪಾಕಿಸ್ತಾನವನ್ನು ಜಾಡಿಸಿದ ಭಾರತ

ಜಮ್ಮು-ಕಾಶ್ಮೀರ ಪುನರ್‌ ವಿಂಗಡನೆ ಮತ್ತು ಅಯೋಧ್ಯೆ ಭೂವಿವಾದ ಪ್ರಕರಣದಲ್ಲಿ ಸುಪ್ರೀಂ ತೀರ್ಪು ಬಗ್ಗೆ ಪಾಕಿಸ್ತಾನ ಅಪಪ್ರಚಾರದಲ್ಲಿ ತೊಡಗಿದೆ ಭಾರತ ಪಾಕಿಸ್ತಾನವನ್ನು ತರಾಟೆಗೆತ್ತಿಕೊಂಡಿದೆ. ಇನ್ನೊಂಡೆದೆ ಒಸಾಮ ಬಿನ್‌ ಲಾಡೆನ್‌ ಪಾಕಿಸ್ತಾನದ ಹೀರೋ ಎಂದು ಪರ್ವೇಜ್‌ ಮುಷರಫ್ ಬಣ್ಣಿಸಿದ್ದಾರೆ.

Vijaya Karnataka Web 15 Nov 2019, 2:35 pm
ಇಸ್ಲಾಮಾಬಾದ್‌: ಜಮ್ಮು-ಕಾಶ್ಮೀರದಲ್ಲಿನ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿ ಯುವಕರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿತ್ತು. ಅಲ್‌ ಕಾಯಿದಾ ಉಗ್ರ ಸಂಘಟನೆ ಸ್ಥಾಪಕ ಒಸಾಮ ಬಿನ್‌ ಲಾಡೆನ್‌ ಪಾಕಿಸ್ತಾನದ ಹೀರೋ ಆಗಿದ್ದ ಎಂದು ಪಾಕ್‌ನ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ಒಪ್ಪಿಕೊಂಡಿದ್ದಾರೆ.
Vijaya Karnataka Web pervez musharraf


ಪರ್ವೇಜ್‌ ಮುಷರ್ರಫ್‌ಗೆ ನಿಗೂಢ ಕಾಯಿಲೆ

ಸಂದರ್ಶನವೊಂದರಲ್ಲಿ ಮುಷರ್ರಫ್‌ ಈ ಹೇಳಿಕೆ ನೀಡಿದ್ದಾರೆ. ಇದರ ವಿಡಿಯೊ ತುಣುಕನ್ನು ಪಾಕಿಸ್ತಾನದ ರಾಜಕೀಯ ನಾಯಕ ಫರ್ಹಾತುಲ್ಲಾಬಾಬರ್‌ ಅವರು ಟ್ವಿಟರ್‌ ನಲ್ಲಿಹಂಚಿಕೊಂಡಿದ್ದು, ವೈರಲ್‌ ಆಗಿದೆ. ವಿಡಿಯೊದಲ್ಲಿ ಮುಷರ್ರಫ್‌ ಅವರು ಪಾಕಿಸ್ತಾನ ಸರಕಾರವೇ ಅಫಘಾನಿಸ್ತಾನದಲ್ಲಿ ಧಾರ್ಮಿಕ ಉಗ್ರವಾದ ಸೃಷ್ಟಿಸಿತು ಎಂಬುದನ್ನೂ ಒಪ್ಪಿದ್ದಾರೆ.

ಮತ್ತೆ ಅಧಿಕಾರಕ್ಕೆ ಅಮೆರಿಕದ ನೆರವು ಕೋರಿದ್ದ ಮುಷರ್ರಫ್‌

''ಭಯೋತ್ಪಾದನೆ ತರಬೇತಿಗಾಗಿ ಪಾಕ್‌ಗೆ ಬರುವ ಕಾಶ್ಮೀರಿಗರಿಗೆ ನಾವು ಹೀರೋಗಳಂತೆ ಸ್ವಾಗತ ಕೋರುತ್ತಿದ್ದೆವು. ಲಷ್ಕರ್‌-ಎ-ತಯ್ಬಾ ಆ ಸಮಯದಲ್ಲಿಯೇ ಸೃಷ್ಟಿಯಾಯಿತು. ಭಾರತೀಯ ಸೇನೆ ವಿರುದ್ಧ ಹೋರಾಡುವ ಮುಜಾಹಿದ್ದೀನ್‌ಗಳು ಎಂದು ಅವರನ್ನು ಪರಿಗಣಿಸಲಾಗುತ್ತಿತ್ತು. ಬಳಿಕ ಜಾಗತಿಕ ಚಿತ್ರಣ ಬಯಲಾಗಿ , ನಮ್ಮ ಹೀರೋಗಳೆನಿಸಿದ್ದ ಹಕ್ಕಾನಿ, ಲಾಡೆನ್‌ರ ಹಣೆಗೆ ವಿಲನ್‌ ಎಂಬ ಹಣೆಪಟ್ಟಿ ಅಂಟಿಸಲಾಯಿತು,'' ಎಂದು ಮುಷರ್ರಫ್‌ ಹೇಳಿದ್ದಾರೆ.

ಯುನೆಸ್ಕೋ ಸಭೆಯಲ್ಲಿ ಭಾರತ ತರಾಟೆ
ಪ್ಯಾರಿಸ್‌: ಜಮ್ಮು-ಕಾಶ್ಮೀರ ಪುನರ್‌ ವಿಂಗಡನೆ ಮತ್ತು ಅಯೋಧ್ಯೆ ಭೂವಿವಾದ ಪ್ರಕರಣದಲ್ಲಿಸುಪ್ರೀಂ ಕೋರ್ಟ್‌ ತೀರ್ಪು ಬಗ್ಗೆ ಪಾಕಿಸ್ತಾನ ಪ್ರತಿಕ್ರಿಯಿಸುವ ನೆಪದಲ್ಲಿಅಪಪ್ರಚಾರದಲ್ಲಿ ತೊಡಗಿದೆ. ಇಂಥ ಬಾಲಿಶತನವನ್ನು ಬಿಡಬೇಕು ಎಂದು ವಿಶ್ವಸಂಸ್ಥೆಯ ಯುನೆಸ್ಕೋ ಸಭೆಯಲ್ಲಿ ಭಾರತವು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ.

ಭಾರತದ 7 ಸಂರಕ್ಷಿತ ಸ್ಥಳಗಳಿಗೆ ಯುನೆಸ್ಕೋ ಗರಿ

'' ಪಾಕಿಸ್ತಾನ ನಮ್ಮ ಆಂತರಿಕ ವಿಚಾರದಲ್ಲಿಮೂಗು ತೂರಿಸುವುದನ್ನು ಮುಂದುವರಿಸಿದೆ. ದ್ವೇಷ ಹರಡುವಿಕೆಯ ದುರುದ್ದೇಶದಿಂದ ಅಪಪ್ರಚಾರದಲ್ಲಿನಿರತವಾಗಿದೆ. ಇದನ್ನು ನಾವು ಒಪ್ಪುವುದಿಲ್ಲ,'' ಎಂದು ಭಾರತದ ಪ್ರತಿನಿಧಿ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ