ಆ್ಯಪ್ನಗರ

ಟ್ರಂಪ್‌ ಅಮೆರಿಕದಲ್ಲಿ ಗ್ರೀನ್‌ ಕಾರ್ಡ್‌ ವಲಸಿಗರಿಗೆ ರಿಲೀಫ್‌

ಅಮೆರಿಕದ ಕಾಯಂ ನಿವಾಸಗಳಿಗೆ (ಗ್ರೀನ್‌ ಕಾರ್ಡ್‌ ಉಳ್ಳವರಿಗೆ) ಮರಳಿ ಅಮೆರಿಕಕ್ಕೆ ಆಗಮಿಸಲು ಅಥವಾ ತೆರಳಲು ವಿಶೇಷ ಅನುಮತಿಯ ಅಗತ್ಯವಿಲ್ಲ

Vijaya Karnataka Web 2 Feb 2017, 4:03 pm
ವಾಷಿಂಗ್ಟನ್: ಏಳು ಮುಸ್ಲಿಂ ರಾಷ್ಟ್ರಗಳಿಗೆ ನಿಷೇಧ ಹೇರಿದ ಬಳಿಕ ತೇಪೆ ಹಾಕಲು ಯತ್ನಿಸಿರುವ ಟ್ರಂಪ್‌ ಆಡಳಿತ, ಅಮೆರಿಕದ ಕಾಯಂ ನಿವಾಸಗಳಿಗೆ (ಗ್ರೀನ್‌ ಕಾರ್ಡ್‌ ಉಳ್ಳವರಿಗೆ) ಮರಳಿ ಅಮೆರಿಕಕ್ಕೆ ಆಗಮಿಸಲು ಅಥವಾ ತೆರಳಲು ವಿಶೇಷ ಅನುಮತಿಯ ಅಗತ್ಯವಿಲ್ಲ ಎಂದು ಆದೇಶ ಹೊರಡಿಸಿದೆ.
Vijaya Karnataka Web green card holders exempted from travel ban us
ಟ್ರಂಪ್‌ ಅಮೆರಿಕದಲ್ಲಿ ಗ್ರೀನ್‌ ಕಾರ್ಡ್‌ ವಲಸಿಗರಿಗೆ ರಿಲೀಫ್‌


ಈ ಕುರಿತು ಮಾತನಾಡಿರುವ ಶ್ವೇತಭವನದ ವಕ್ತಾರ ಸೀನ್‌ ಸ್ಪೈಸರ್‌, ''ಗ್ರೀನ್‌ ಕಾರ್ಡ್‌ ಹೊಂದಿರುವ ನಿಷೇಧಿತ ರಾಷ್ಟ್ರಗಳ ಮೂಲ ನಿವಾಸಿಗಳ ಮೇಲೆ ಯಾವದೇ ನಿಷೇಧ ಹೇರದಂತೆ ಮನವಿ ಮಾಡಿದ್ದರು. ಹೀಗಾಗಿ ಗ್ರೀನ್‌ ಕಾರ್ಡ್‌ ಹೊಂದಿರುವ ಈ ರಾಷ್ಟ್ರಗಳ ನಿವಾಸಿಗಳಿಗೆ ಯಾವುದೇ ನಿರ್ಬಂಧನೆಗಳಿಲ್ಲ'' ಎಂದು ಹೇಳಿದ್ದಾರೆ.

ಕಳೆದ ಶುಕ್ರವಾರ ಟ್ರಂಪ್‌ ಸರಕಾರ ಏಳು ರಾಷ್ಟ್ರಗಳಿಂದ ಅಮೆರಿಕಕ್ಕೆ ಆಗಮಿಸುವ ವಲಸೆಗಾರರ ಮೇಲೆ ಮೂರು ತಿಂಗಳ ಕಾಲ ನಿಷೇಧ ಹೇರಿ ಆಜ್ಞೆ ಹೊರಡಿಸಿದ್ದರು. ಈ ಆದೇಶದ ಬಳಿಕ ಹಲವಾರು ರಾಷ್ಟ್ರಗಳು ಟ್ರಂಪ್‌ ಕ್ರಮದ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದವು. ಇಷ್ಟೆಲ್ಲಾ ಬೆಳವಣಿಗೆ ಬಳಿಕ ಬುಧವಾರ ಸರಕಾರ, ಗ್ರೀನ್‌ ಕಾರ್ಡ್‌ ಇರುವ ವಲಸಿಗರ ಮೇಲೆ ನಿರ್ಬಂಧನೆಯನ್ನು ಸಡಿಲಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ