ಆ್ಯಪ್ನಗರ

ಅಫ್ಘಾನ್ ಟಿವಿ ಕಟ್ಟಡದ ಮೇಲೆ ಉಗ್ರರ ದಾಳಿ

ಅಫ್ಘಾನಿಸ್ತಾನದ ಪೂರ್ವ ವಲಯದಲ್ಲಿರುವ ಸರಕಾರಿ ಟಿವಿ ಕಟ್ಟಡದ ಮೇಲೆ ಅತ್ಮಾಹತ್ಯಾ ಬಾಂಬರ್‌ಗಳು ದಾಳಿ ನಡೆಸಿದ್ದು, ಕಟ್ಟಡದಲ್ಲಿ ಹಲವಾರು ಪತ್ರಕರ್ತರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಪ್ರಾಂತೀಯ ಗವರ್ನರ್ ವಕ್ತಾರ ತಿಳಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 17 May 2017, 5:06 pm
ಜಲಾಲಾಬಾದ್: ಅಫ್ಘಾನಿಸ್ತಾನದ ಪೂರ್ವ ವಲಯದಲ್ಲಿರುವ ಸರಕಾರಿ ಟಿವಿ ಕಟ್ಟಡದ ಮೇಲೆ ಅತ್ಮಾಹತ್ಯಾ ಬಾಂಬರ್‌ಗಳು ದಾಳಿ ನಡೆಸಿದ್ದು, ಕಟ್ಟಡದಲ್ಲಿ ಹಲವಾರು ಪತ್ರಕರ್ತರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಪ್ರಾಂತೀಯ ಗವರ್ನರ್ ವಕ್ತಾರ ತಿಳಿಸಿದ್ದಾರೆ.
Vijaya Karnataka Web gunmen attack state tv station in afghanistan 2 civilians among 4 killed
ಅಫ್ಘಾನ್ ಟಿವಿ ಕಟ್ಟಡದ ಮೇಲೆ ಉಗ್ರರ ದಾಳಿ


ಈ ದಾಳಿಯಲ್ಲಿ ಇಬ್ಬರು ನಾಗರಿಕರು ಸೇರಿದಂತೆ ನಾಲ್ವರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಕನಿಷ್ಠ ನಾಲ್ವರು ಉಗ್ರರು ಆಕ್ರಮಣ ಮಾಡಿದ್ದಾರೆ. ಇವರಲ್ಲಿ ಇಬ್ಬರು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದು, ಇನ್ನಿಬ್ಬರು ಮಾತ್ರ ಇನ್ನೂ ದಾಳಿ ಮುಂದುವರೆಸಿದ್ದಾರೆ ಎಂದು ​ ಅತ್ತಾವುಲ್ಲಾ ಖುಗ್ಯಾನಿ ಹೇಳಿದರು.

ಅಫ್ಘಾನಿಸ್ತಾನದ ಸರಕಾರಿ ಪ್ರಸಾರ ಸಂಸ್ಥೆ ರೇಡಿಯೋ ಟೆಲಿವಿಶನ್‌ ಅಫ್ಘಾನಿಸ್ತಾನ್ (ಆರ್‌ಟಿಎ) ಕಟ್ಟಡದ ಸುತ್ತಲೂ ಭಾರೀ ಗುಂಡಿನ ದಾಳಿ ನಡೆದಿದೆ.

ಜಲಾಲಾಬಾದ್ ನಂಗರ್‌ಹಾರ್ ಪ್ರಾಂತ್ಯದ ರಾಜಧಾನಿಯಾಗಿದ್ದು, ಈ ಪ್ರದೇಶ ಐಎಸ್ಐಎಸ್ಐ ಉಗ್ರರ ಭದ್ರ ನೆಲೆಯಾಗಿದೆ. ಕಳೆದ ತಿಂಗಳಷ್ಟೇ ಈ ಪ್ರದೇಶದಲ್ಲಿ ಅಮೆರಿಕ ಸೇನೆಯು ಇತಿಹಾಸದಲ್ಲಿಯೇ ಅತ್ಯಂತ ಬೃಹತ್ ಗಾತ್ರದ ಬಾಂಬ್‌‌ ಬಳಸಿ ದಾಳಿ ನಡೆಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ