ಆ್ಯಪ್ನಗರ

ಹೊಸ ಹಿಸ್ಟರಿ, ಹೊಸ ಕೆಮೆಸ್ಟ್ರಿ: ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಹವಾ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾರತ-ಅಮೆರಿಕ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.

Vijaya Karnataka 23 Sep 2019, 10:57 am
ಹ್ಯೂಸ್ಟನ್‌: ಭಾರತದಲ್ಲಿಎಲ್ಲವೂ ಚೆನ್ನಾಗಿದೆ ಎನ್ನುವ ಮೂಲಕ ಜಮ್ಮು-ಕಾಶ್ಮೀರದಲ್ಲಿ370ನೇ ವಿಧಿ ರದ್ದುಪಡಿಸಿದ ಬಳಿಕ ಅಪಪ್ರಚಾರ ಮಾಡುತ್ತಿರುವವರಿಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದ್ದಾರೆ.
Vijaya Karnataka Web namo


ಬಹು ನಿರೀಕ್ಷಿತ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ ಭಾರತ ನಿರ್ಮಾಣಕ್ಕಾಗಿ ತಮ್ಮ ಸರಕಾರ ಶ್ರಮಿಸುತ್ತಿದೆ. ದೇಶ ಪರಿವರ್ತನೆಯತ್ತ ದಾಪುಗಾಲಿಡುತ್ತಿದೆ ಎಂದು ಹೇಳಿದರು. ಜಮ್ಮು-ಕಾಶ್ಮೀರ ಸಹ ಭಾರತದ ಜತೆ ಅಭಿವೃದ್ಧಿ ಹೊಂದಬೇಕು, ಅಲ್ಲಿನ ಜನರಿಗೂ ಸಮಾನ ಅಧಿಕಾರ ಸಿಗಬೇಕು ಎಂಬ ಕಾರಣದಿಂದ 370ನೇ ವಿಧಿ ರದ್ದುಪಡಿಸಿದ್ದಾಗಿ ಸಮರ್ಥಿಸಿಕೊಂಡರು. ''ಉಗ್ರವಾದದ ವಿರುದ್ಧ ನಿರ್ಣಾಯಕ ಹೋರಾಟ ಮಾಡುವ ಕಾಲ ಸನ್ನಿಹಿತವಾಗಿದೆ. ಈ ಹೋರಾಟದಲ್ಲಿಅಮೆರಿಕ ಕೂಡ ನಮ್ಮ ಜತೆಗೆ ನಿಲ್ಲುತ್ತದೆ ಎನ್ನುವ ವಿಶ್ವಾಸವಿದೆ,'' ಎಂದು ಹೇಳಿದರು. ಕನ್ನಡ, ತಮಿಳು, ತೆಲುಗು ಸೇರಿದಂತೆ ಎಲ್ಲಭಾಷೆಗಳಲ್ಲೂ''ಭಾರತದಲ್ಲಿಎಲ್ಲರೂ ಚೆನ್ನಾಗಿದ್ದಾರೆ?'' ಎಂದು ಹೇಳಿದ ಪ್ರಧಾನಿ, ಹಿಂದಿಯಲ್ಲಿಮಾತು ಮುಂದುವರಿಸಿದರು.

ಹತಾಶೆ ತಾಳಲಾರದೆ 'ಹೌಡಿ ಮೋದಿ' ಕಾರ್ಯಕ್ರಮ 'ಫ್ಲಾಪ್ ಶೋ' ಎಂದ ಪಾಕಿಸ್ತಾನ

* ಈ ವಾತಾವರಣವು ಅಭೂತಪೂರ್ವವಾಗಿದೆ. ನಾವು ಇಲ್ಲಿಹೊಸ ಇತಿಹಾಸ ಮತ್ತು ಹೊಸ ಕೆಮಿಸ್ಟ್ರಿಯನ್ನು ನೋಡುತ್ತಿದ್ದೇವೆ. ಈ ಎನ್‌ಆರ್‌ಜಿ ಸ್ಟೇಡಿಯಂ ಶಕ್ತಿಯು ಭಾರತ ಮತ್ತು ಅಮೆರಿಕ ನಡುವಿನ ಸಿನರ್ಜಿ (ಶಕ್ತಿ ಸಂಚಲನ) ಹೆಚ್ಚುತ್ತಿರುವುದರ ಪುರಾವೆಯಾಗಿದೆ.

* ಈ ಕಾರ್ಯಕ್ರಮದ ಹೆಸರು 'ಹೌಡಿ ಮೋದಿ', ಆದರೆ ಮೋದಿ ಮಾತ್ರ ಏನೂ ಅಲ್ಲ. ನಾನು 130 ಕೋಟಿ ಜನರ ಆದೇಶದ ಅನುಸಾರ ಕೆಲಸ ಮಾಡುವ ಸಾಮಾನ್ಯ ಸೇವಕ. ನೀವು ಹೌಡಿ ಮೋದಿ ಎಂದು ಕೇಳುತ್ತಿದ್ದೀರಿ. ಅದಕ್ಕೆ ನಾನು ಹೇಳುತ್ತೇನೆ, ಭಾರತದಲ್ಲಿಎಲ್ಲರೂ ಚೆನ್ನಾಗಿದ್ದಾರೆ.

ಹ್ಯೂಸ್ಟನ್‌ ಆವರಿಸಿದ ‘ಮೋದಿ ಜಯಘೋಷ’

* ಭಾರತದ ಜೀವಾಳ ಎಂದರೆ ವೈವಿಧ್ಯತೆಯಲ್ಲಿಏಕತೆ. ಈ ವೈವಿಧ್ಯತೆಯು ಭಾರತದ ರೋಮಾಂಚಕ ಪ್ರಜಾಪ್ರಭುತ್ವದ ತಿರುಳು.

*ದೇಶದ 60 ವರ್ಷಗಳ ರಾಜಕೀಯ ಇತಿಹಾಸದಲ್ಲಿಮೊದಲ ಬಾರಿ ಸತತ ಎರಡನೇ ಅವಧಿಗೆ ಪೂರ್ಣ ಬಹುಮತದ ಸರಕಾರ ಅಧಿಕಾರಕ್ಕೆ ಬಂದಿದೆ. ಇದು ನಮ್ಮ ಮೇಲೆ ಜನ ಇರಿಸಿದ ಅಚಲ ವಿಶ್ವಾಸದ ಪ್ರತೀಕ.

*ಅಭಿವೃದ್ಧಿಯ ವಿಷಯದಲ್ಲಿನಾವು ಅನ್ಯರೊಂದಿಗೆ ಪೈಪೋಟಿಗೆ ಇಳಿಯುವುದಿಲ್ಲ. ನಾವು ನಮ್ಮೊಂದಿಗೆ ಸ್ಪರ್ಧಿಸುತ್ತಿದ್ದೇವೆ. ನಮಗೆ ನಾವೇ ಸವಾಲು ಹಾಕಿಕೊಳ್ಳುತ್ತಿದ್ದೇವೆ. ನಾವು ನಮ್ಮನ್ನು ಬದಲಾಯಿಸಿಕೊಳ್ಳುತ್ತಿದ್ದೇವೆ. ಆದ್ದರಿಂದಲೇ ನಾವು ಅಭಿವೃದ್ಧಿಯ ಹಾದಿಯ ಮಹೋನ್ನತ ಹಾದಿಯಲ್ಲಿದ್ದೇವೆ. ನಮ್ಮ ಗುರಿ ಉನ್ನತವಾದದ್ದು. ಉನ್ನತವಾದುದ್ದನ್ನೇ ಸಾಧಿಸುತ್ತೇವೆ.

* ವಿಶ್ವದ ಎಲ್ಲಿಯಾದರೂ ಕೈಗೆಟುಕುವ ದರದಲ್ಲಿಡೇಟಾ ಲಭ್ಯವಿದ್ದರೆ ಅದು ಭಾರತದಲ್ಲಿಮಾತ್ರ. ಭಾರತದಲ್ಲಿ1ಜಿಬಿ ಡೇಟಾ ಬೆಲೆ 25 ಸೆಂಟ್‌. ಇದು ಡಿಜಿಟಲ್‌ ಇಂಡಿಯಾ ಅಡಿಯಲ್ಲಿಸಾಧ್ಯವಾದ ಸಾಧನೆ.

* ಶತಮಾನಗಳಿಂದ ದೇಶಕ್ಕೆ ಕಳಂಕ ಪ್ರಾಯವಾಗಿ ಕಾಡಿದ ಬಯಲು ಬಹಿರ್ದೆಸೆಗೆ ಬರುವ ಅಕ್ಟೋಬರ್‌ 2ಕ್ಕೆ ಸಂಪೂರ್ಣ ಮುಕ್ತಿ ಕಾಣಿಸಲಿದ್ದೇವೆ. ಇಂತಹ ಹಲವು ಸಾಧನೆಗಳ ಪಟ್ಟಿ ನಮ್ಮ ಸರಕಾರದ ಸಾಧನೆಯ ಪಟ್ಟಿಯಲ್ಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ