ಆ್ಯಪ್ನಗರ

ಪಾಕ್‌ ಕ್ರಮ ಕೈಗೊಳ್ಳದಿದ್ದರೆ 'ಉಗ್ರರ ಸ್ವರ್ಗ' ನಾಶ ಖಚಿತ: ಸಿಐಎ

ಪಾಕಿಸ್ತಾನ ತನ್ನ ನೆಲದಲ್ಲಿ ಸಾಕಿರುವ ಉಗ್ರರನ್ನು ಮಟ್ಟ ಹಾಕದೇ ಹೋದಲ್ಲಿ ನಾವು ಉಗ್ರರ ಸ್ವರ್ಗವನ್ನು ನಿರ್ನಾಮ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಅಮೆರಿಕದ ಗುಪ್ತಚರ ಇಲಾಖೆ ಸಿಐಎ ಮುಖ್ಯಸ್ಥ ಮೈಕ್‌ ಪೋಂಪಿಯೋ ಗುಡುಗಿದ್ದಾರೆ.

TNN 4 Dec 2017, 7:44 pm
ಹೊಸದಿಲ್ಲಿ: ಪಾಕಿಸ್ತಾನ ತನ್ನ ನೆಲದಲ್ಲಿ ಸಾಕಿರುವ ಉಗ್ರರನ್ನು ಮಟ್ಟ ಹಾಕದೇ ಹೋದಲ್ಲಿ ನಾವು ಉಗ್ರರ ಸ್ವರ್ಗವನ್ನು ನಿರ್ನಾಮ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಅಮೆರಿಕದ ಗುಪ್ತಚರ ಇಲಾಖೆ ಸಿಐಎ ಮುಖ್ಯಸ್ಥ ಮೈಕ್‌ ಪಾಂಪೊ ಗುಡುಗಿದ್ದಾರೆ.
Vijaya Karnataka Web if pakistan doesnt act well ensure terror safe havens dont exist says cias director
ಪಾಕ್‌ ಕ್ರಮ ಕೈಗೊಳ್ಳದಿದ್ದರೆ 'ಉಗ್ರರ ಸ್ವರ್ಗ' ನಾಶ ಖಚಿತ: ಸಿಐಎ


ಬುಧವಾರದಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್‌ ಮ್ಯಾಟ್ಟಿಸ್‌, ಪಾಕ್‌ಗೆ ಭೇಟಿ ನೀಡಲಿದ್ದು ಈ ಬೆನ್ನಲ್ಲೇ ಚಾನೆಲ್‌ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿರುವ ಮೈಕ್‌, ಪಾಕ್‌ಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಉಗ್ರರ ಸ್ವರ್ಗಗಳ ವಿರುದ್ಧ ಈಗಾಗಲೇ ಕೆಂಡಕಾರಿದ್ದು, ಪಾಕ್‌ಗೆ ಭೇಟಿ ನೀಡುತ್ತಿರುವ ಮ್ಯಾಟ್ಟಿಸ್‌ ಅಲ್ಲಿನ ಸರಕಾರದ ಬಳಿ ಉಗ್ರರ ಸ್ವರ್ಗವನ್ನು ನಿರ್ನಾಮ ಮಾಡಲು ಬೇಕಾದ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಳ್ಳುತ್ತಾರೆ ಒಂದು ವೇಳೆ ಈ ಪ್ರಯತ್ನವೂ ವಿಫಲಗೊಂಡರೆ ನಾವು ಅಂತಹ ಸ್ವರ್ಗವೇ ಇಲ್ಲದಂತೆ ನೋಡಿಕೊಳ್ಳುತ್ತೇವೆ ಎಂಬದಾಗಿ ಮೈಕ್‌ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

' ಕೇವಲ ಉಗ್ರರ ಮೇಲೆ ಕ್ರಮ ಕೈಗೊಳ್ಳಲು ನಾವು ಪಾಕಿಸ್ತಾನಕ್ಕೆ ಬಿಲಿಯನ್‌ಗಟ್ಟಲೆ ಡಾಲರ್‌ ಹಣವನ್ನು ನೀಡುತ್ತಿದ್ದೇವೆ, ಆದರೆ ಅವರು ಮಾತ್ರ ಅದೇ ಹಣವನ್ನು ಉಗ್ರರ ಪೋಷಣೆಗೆ ಬಳಸಿಕೊಳ್ಳುವುದು ವಿಪರ್ಯಾಸ' ಎಂದು ಕೆಲದಿನಗಳ ಹಿಂದೆ ಟ್ರಂಪ್‌ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ