ಆ್ಯಪ್ನಗರ

ಭಾರತ-ಪಾಕ್‌ ಮಧ್ಯೆ ಈಗಲೂ ಸರಿದಿಲ್ಲ ಯುದ್ಧ ಕಾರ್ಮೋಡ

ಭಾರತ ಮತ್ತೊಂದು ದಾಳಿ ನಡೆಸುವ ಅಪಾಯ ಇಮ್ರಾನ್‌ ಖಾನ್‌ ಅವರನ್ನು ಕಾಡುತ್ತಿದ್ದು, ''ಉಭಯ ದೇಶಗಳ ಗಡಿಯಲ್ಲಿ ಈಗಲೂ ಬಿಗುವಿನ ವಾತಾವರಣವಿದೆ. ಬಹುಶಃ ಲೋಕಸಭೆ ಚುನಾವಣೆ ಮುಗಿಯುವವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಭಾರತದ ಯಾವುದೇ ಆಕ್ರಮಣಕಾರಿ ನಡೆ ಎದುರಿಸಲು ಪಾಕಿಸ್ತಾನ ಸಂಪೂರ್ಣ ಸಿದ್ಧವಾಗಿದೆ,'' ಎಂದು ಹೇಳಿದ್ದಾರೆ.

Vijaya Karnataka 27 Mar 2019, 5:00 am
Vijaya Karnataka Web imran
ಇಸ್ಲಾ ಮಾಬಾದ್‌: ''ಭಾರತ-ಪಾಕ್‌ ಗಡಿಯಲ್ಲಿ ಉದ್ವಿಗ್ನತೆ ತಣ್ಣಗಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರಕಾರ ಲೋಕಸಭೆ ಚುನಾವಣೆಗೂ ಮುನ್ನ ಮತ್ತೊಂದು ದುಸ್ಸಾಹಸಕ್ಕೆ ಕೈಹಾಕುವ ಸಾಧ್ಯತೆ ಇದೆ. ಹೀಗಾಗಿ ಉಭಯ ದೇಶಗಳ ನಡುವೆ ಈಗಲೂ ಯುದ್ಧದ ಕಾರ್ಮೋಡ ಆವರಿಸಿದೆ,'' ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಫೆಬ್ರವರಿ 14ರ ಪುಲ್ವಾಮಾ ಉಗ್ರ ದಾಳಿ ನಂತರ ಭಾರತ ಕೆಚ್ಚೆದೆಯ ವಾಯುದಾಳಿ ಮೂಲಕ ಪ್ರತಿಕಾರ ತೀರಿಸಿಕೊಂಡಿತು. ವಾಯುಪಡೆ ನಡೆಸಿದ ದಾಳಿಗೆ ಬಾಲಾಕೋಟ್‌ನಲ್ಲಿದ್ದ ಜೈಷೆ ಮೊಹಮ್ಮದ್‌ ಸಂಘಟನೆಯ ಉಗ್ರ ಶಿಬಿರಗಳು ಧ್ವಂಸಗೊಂಡವು. ಇದಾದ ಬಳಿಕ ತೆಪ್ಪಗಿದ್ದ ಪಾಕಿಸ್ತಾನ ಈಗ ಭಾರತವೇ ಅತ್ಯಂತ ಆಕ್ರಮಣಕಾರಿ ದೇಶ ಎಂದು ಬಿಂಬಿಸಲು ಹೊರಟಿದೆ. ಉಗ್ರ ದಾಳಿ ಬಳಿಕ ಪ್ರಧಾನಿ ಮೋದಿ, ''ಭಾರತ ಇನ್ನೊಂದು ದೇಶದ ಮೇಲೆ ಎಂದಿಗೂ ಆಕ್ರಮಣ ನಡೆಸುವುದಿಲ್ಲ. ಆದರೆ ತಂಟೆಗೆ ಬಂದರೆ ಬಿಡುವುದಿಲ್ಲ,'' ಎಂದು ಎಚ್ಚರಿಸಿದ್ದರು.

ಭಾರತ ಮತ್ತೊಂದು ದಾಳಿ ನಡೆಸುವ ಅಪಾಯ ಇಮ್ರಾನ್‌ ಖಾನ್‌ ಅವರನ್ನು ಕಾಡುತ್ತಿದ್ದು, ''ಉಭಯ ದೇಶಗಳ ಗಡಿಯಲ್ಲಿ ಈಗಲೂ ಬಿಗುವಿನ ವಾತಾವರಣವಿದೆ. ಬಹುಶಃ ಲೋಕಸಭೆ ಚುನಾವಣೆ ಮುಗಿಯುವವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಭಾರತದ ಯಾವುದೇ ಆಕ್ರಮಣಕಾರಿ ನಡೆ ಎದುರಿಸಲು ಪಾಕಿಸ್ತಾನ ಸಂಪೂರ್ಣ ಸಿದ್ಧವಾಗಿದೆ,'' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ