ಆ್ಯಪ್ನಗರ

ಮಾಸ್ಕೋದಲ್ಲಿ ಭಾರತ-ಚೀನಾ ವಿದೇಶಾಂಗ ಸಚಿವರ ಭೇಟಿಗೆ ಕ್ಷಣಗಣನೆ: ಮಹತ್ವದ ಘಟ್ಟದಲ್ಲಿ ಗಡಿ ಚರ್ಚೆ!

ಶಾಂಘೈ ಸಹಕಾರ ಶೃಂಗಸಭೆ(ಎಸ್‌ಸಿಒ) ವಿದೇಶಾಂಗ ಇಲಾಖೆ ಸಚಿವರ ಸಭೆಯಲ್ಲಿ ಭಾಗವಹಿಸಿರುವ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ವೈ ಇನ್ನೇನು ಕೆಲವೇ ಕ್ಷಣಗಳಲ್ಲಿ ಪರಸ್ಪರ ಭೇಟಿಯಾಗಲಿದ್ದಾರೆ.

Vijaya Karnataka Web 10 Sep 2020, 7:38 pm
ಮಾಸ್ಕೋ: ಶಾಂಘೈ ಸಹಕಾರ ಶೃಂಗಸಭೆ(ಎಸ್‌ಸಿಒ) ವಿದೇಶಾಂಗ ಇಲಾಖೆ ಸಚಿವರ ಸಭೆಯಲ್ಲಿ ಭಾಗವಹಿಸಿರುವ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ವೈ ಇನ್ನೇನು ಕೆಲವೇ ಕ್ಷಣಗಳಲ್ಲಿ ಪರಸ್ಪರ ಭೇಟಿಯಾಗಲಿದ್ದಾರೆ.
Vijaya Karnataka Web India-China Foreign Ministers
ಕೆಲವೇ ಕ್ಷಣಗಳಲ್ಲಿ ಭೇಟಿಯಾಗಲಿರುವ ಭಾರತ-ಚೀನಾ ವಿದೇಶಾಂಗ ಸಚಿವರು!


ಭಾರತ-ಚೀನಾ ವಿದೇಶಾಂಗ ಸಚಿವರ ಪರಸ್ಪರ ಭೇಟಿಗೆ ಕ್ಷಣಗಣನೆ ಶುರುವಾಗಿದ್ದು, ಈ ಸಭೆಯಲ್ಲಿ ಲಡಾಖ್ ಗಡೆಇ ಉದ್ವಿಗ್ನತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಿಲಿಟರಿ ಸಂಘರ್ಷ ತಡೆಯುವ ಪ್ರಯತ್ನ: ಭಾರತ-ಚೀನಾ ವಿದೇಶಾಂಗ ಸಚಿವರ ಭೇಟಿ ಸಾಧ್ಯವೇ?

ಲಡಾಖ್ ಗಡಿ ಸಮಸ್ಯೆ ಇತ್ಯರ್ಥಕ್ಕೆ ರಾಜತಾಂತ್ರಿಕ ಮಾತುಕತೆಗಳಿಗೆ ವೇಗ ತುಂಬುವ ಉದ್ದೇಶದಿಂದ ಎಸ್ ಜೈಶಂಕರ್ ಹಾಗೂ ವಾಂಗ್ ವೈ ಭೇಟಿಯಾಗಲಿದ್ದು, ಈ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ.

ಲಡಾಖ್ ಗಡಿಯ ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಭಾರತೀಯ ಸೇನೆಯ ಹಿಡಿತ ಅಧಿಕವಾಗಿದ್ದು, ಇದು ಮಾತುಕತೆ ಸಂದರ್ಭದಲ್ಲಿ ಭಾರತದ ಚೌಕಾಶಿ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.


ಎಸ್ ಜೈಶಂಕರ್ ಮಾತುಕತೆ ಸಂಪೂರ್ಣ ಸಿದ್ಧತೆ ನಡೆಸಿದ್ದು, ಚೀನಿ ವಿದೇಶಾಂಗ ಸಚಿವರೊಂದಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನಿಟ್ಟುಕೊಂಡೇ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಮಾಸ್ಕೋ ಮಾತುಕತೆಯಲ್ಲಿ ಜೈಶಂಕರ್ ತೋರಲಿದ್ದಾರೆ ಚೌಕಾಶಿ ಚಾತುರ್ಯ: ಚೀನಾಗೆ ಕಾದಿದೆ ಆಶ್ಚರ್ಯ!

ಈಗಾಗಲೇ ಎಸ್‌ಸಿಒ ರಕ್ಷಣಾ ಸಚಿವರ ಸಭೆಯಲ್ಲಿ ಭಾಗವಹಿಸಲು ಮಾಸ್ಕೋಗೆ ತೆರಳಿದ್ದ ಎಆಜನಾಥ್ ಸಿಂಗ್, ಚೀನಿ ರಕ್ಷಣಾ ಸಚಿವ ವೀ ಫೆಂಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ