ಆ್ಯಪ್ನಗರ

ಭಾರತ-ಫ್ರಾನ್ಸ್‌ ಜಂಟಿ ಸಮರಾಭ್ಯಾಸ: ಚೀನಾಗೆ ಸಡ್ಡು

ವಿಮಾನ ವಾಹಕ ನೌಕೆ ಚಾರ್ಲ್ಸ್ ಡಿ ಗೌಲ್‌ನ ಸಾರಥ್ಯದಲ್ಲಿ ನಡೆಯುತ್ತಿರುವ ಈ ಸಮರಾಭ್ಯಾಸ ದಕ್ಷಿಣ ಚೀನಾ ಸಮುದ್ರದಲ್ಲಿ ಆಗಾಗ ಗಡಿ ಉದ್ವಿಗ್ನತೆ ಸೃಷ್ಟಿಸುತ್ತಿರುವ ಚೀನಾಕ್ಕೆ ಸಡ್ಡು ಹೊಡೆಯುವ ಕ್ರಮ ಎಂದು ಬಣ್ಣಿಸಲಾಗಿದೆ.

Vijaya Karnataka 11 May 2019, 5:00 am
ಪ್ಯಾರಿಸ್‌: ಭಾರತ ಮತ್ತು ಫ್ರಾನ್ಸ್‌ಗಳು ಹಿಂದೂ ಮಹಾಸಾಗರದ ಅತ್ಯಂತ ಆಯಕಟ್ಟಿನ ಸಂಚಾರ ಮಾರ್ಗದಲ್ಲಿ ಶುಕ್ರವಾರ ಜಂಟಿ ಸಮರಾಭ್ಯಾಸವನ್ನು ತೀವ್ರಗೊಳಿಸಿವೆ.
Vijaya Karnataka Web navy

ವಿಮಾನ ವಾಹಕ ನೌಕೆ ಚಾರ್ಲ್ಸ್ ಡಿ ಗೌಲ್‌ನ ಸಾರಥ್ಯದಲ್ಲಿ ನಡೆಯುತ್ತಿರುವ ಈ ಸಮರಾಭ್ಯಾಸ ದಕ್ಷಿಣ ಚೀನಾ ಸಮುದ್ರದಲ್ಲಿ ಆಗಾಗ ಗಡಿ ಉದ್ವಿಗ್ನತೆ ಸೃಷ್ಟಿಸುತ್ತಿರುವ ಚೀನಾಕ್ಕೆ ಸಡ್ಡು ಹೊಡೆಯುವ ಕ್ರಮ ಎಂದು ಬಣ್ಣಿಸಲಾಗಿದೆ. ಜತೆಗೆ ಆರ್ಥಿಕ ವ್ಯವಹಾರಗಳ ಮೇಲೆ ಬಿಗಿಗೊಳ್ಳುತ್ತಿರುವ ಚೀನಾದ ಹಿಡಿತವೂ ಭಾರತ ಮತ್ತು ಫ್ರಾನ್ಸ್‌ನ ಕಳವಳಕ್ಕೆ ಕಾರಣವಾಗಿದೆ.
'ಅಂತಾರಾಷ್ಟ್ರೀಯ ವಹಿವಾಟಿನಲ್ಲಿ ಬಹುದೊಡ್ಡ ಪಾತ್ರ ವಹಿಸುವ ಅತ್ಯಂತ ವ್ಯೂಹಾತ್ಮಕ ಪ್ರದೇಶವಾಗಿರುವ ಇಲ್ಲಿ ಹೆಚ್ಚು ಸ್ಥಿರತೆಯನ್ನು ತರಬಹುದು ಎನ್ನುವುದು ನಮ್ಮ ಯೋಚನೆ,'' ಎಂದು ಸಮರಾಭ್ಯಾಸದ ಫ್ರಾನ್ಸ್‌ ವಿಭಾಗದ ನೇತೃತ್ವ ವಹಿಸಿರುವ ರೇರ್‌ ಅಡ್ಮಿರಲ್‌ ಒಲಿವಿಯರ್‌ ಲೆಬಾಸ್‌ ಹೇಳಿದ್ದಾರೆ.
ಏಷ್ಯಾ, ಯುರೋಪ್‌ ಮತ್ತು ಮಧ್ಯ ಪ್ರಾಚ್ಯ ದೇಶಗಳ ವ್ಯಾಪಾರ ವಹಿವಾಟಿನ ರಾಜಮಾರ್ಗ ಇದಾಗಿದೆ. ತೈಲ ಸಾಗಣೆಗೆ ಅತ್ಯಂತ ಪ್ರಮುಖವಾದ ಮಾರ್ಗ ಇದು. ಇಂಟರ್‌ನೆಟ್‌ ಸಂವಹನ ಕೇಬಲ್‌ಗಳನ್ನು ಇದೇ ಸಾಗರದ ತಳದಲ್ಲಿ ಹಾಕಲಾಗಿದೆ.
2001ರ ಬಳಿಕ ದೊಡ್ಡ ಅಭ್ಯಾಸ
ಗೋವಾ ಸಮುದ್ರದಲ್ಲಿ ನಡೆಯುತ್ತಿರುವ 17ನೇ ವಾರ್ಷಿಕ ಸಮರಾಭ್ಯಾಸ ಇದು. 2001ರಲ್ಲಿ ಆರಂಭಗೊಂಡಿರುವ ಕಾರ್ಯಾಚರಣೆಯಲ್ಲಿ ಇದು ಅತ್ಯಂತ ದೊಡ್ಡದು. ಇದರಲ್ಲಿ ಎರಡು ದೇಶಗಳ ತಲಾ ಆರು ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳು ಭಾಗವಹಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ