ಆ್ಯಪ್ನಗರ

ಅಮೆರಿಕದ ಆಪ್ತ ಪಾಲುದಾರ ಭಾರತ

ಭಾರತವು ಅಮೆರಿಕದ ಆಪ್ತ ಪಾಲುದಾರನಾಗಿದ್ದು, ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ಟ್ರಂಪ್‌ ಆಡಳಿತ ಏನು ಮಾಡಿದರೂ ಭಾರತವು ಕೇಂದ್ರವಾಗಿರಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪೊಂಪಿಯೊ ತಿಳಿಸಿದ್ದಾರೆ.

Vijaya Karnataka 26 May 2018, 9:48 am
ವಾಷಿಂಗ್ಟನ್‌: ಭಾರತವು ಅಮೆರಿಕದ ಆಪ್ತ ಪಾಲುದಾರನಾಗಿದ್ದು, ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ಟ್ರಂಪ್‌ ಆಡಳಿತ ಏನು ಮಾಡಿದರೂ ಭಾರತವು ಕೇಂದ್ರವಾಗಿರಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪೊಂಪಿಯೊ ತಿಳಿಸಿದ್ದಾರೆ.
Vijaya Karnataka Web America- India


ಅಮೆರಿಕ ಸಂಸತ್‌ನ ವಿದೇಶಾಂಗ ವ್ಯವಹಾರಗಳ ಸಮಿತಿ ಸಭೆಯಲ್ಲಿ ಅಮೆರಿಕ-ಭಾರತ ಸಂಬಂಧದ ಕುರಿತು ಮಾತನಾಡಿದ ಅವರು, ''ನಿರ್ದಿಷ್ಟ ಸಮಸ್ಯೆಗಳು, ದಕ್ಷಿಣ ಮಧ್ಯ ಏಷ್ಯಾದ ಸಮಸ್ಯೆಗಳು ಮತ್ತು ಆಗ್ನೇಯ ಏಷ್ಯಾ ಸಮಸ್ಯೆಗಳ ಕುರಿತು ನಾವು ಏನು ಮಾಡಬೇಕಾದರೂ ಭಾರತವು ಕೇಂದ್ರವಾಗಿರಬೇಕು. ಭಾರತವು ನಮ್ಮ ಆಪ್ತ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿದೆ,'' ಎಂದು ಹೇಳಿದರು. ಕಾರ್ಯತಂತ್ರದ ಕುರಿತ ಭಾರತ ಮತ್ತು ಅಮೆರಿಕ ದೇಶಗಳ ಉನ್ನತ ಮಟ್ಟದ ಮಾತುಕತೆ ನಿಗದಿಯಾಗಿದ್ದು, ಅಧಿಕೃತ ದಿನಾಂಕವು ಘೋಷಣೆಯಾಗಬೇಕಿದೆ.

ಕಳೆದ ವರ್ಷ ಜೂನ್‌ 26ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ನಿಗದಿಯಾದಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬರುವ ದಿನಗಳಲ್ಲಿ ಅಮೆರಿಕದ ತಮ್ಮ ಸಮಸ್ಥಾನಿಕರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಲಿದ್ದಾರೆ.

ರಕ್ಷಣಾ ಸಂಬಂಧ ವೃದ್ಧಿ

ಅಮೆರಿಕ ಸಂಸತ್‌ 2019ರ ಆರ್ಥಿಕ ವರ್ಷಕ್ಕೆ 717 ಶತಕೋಟಿ ಡಾಲರ್‌ ವಾರ್ಷಿಕ ರಕ್ಷ ಣಾ ಬಜಟ್‌ಗೆ ಅನುಮೋದನೆ ನೀಡಿದ್ದು, ಮುಖ್ಯವಾಗಿ ಭಾರತದೊಂದಿಗೆ ರಕ್ಷ ಣಾ ಸಂಬಂಧ ಬಲಪಡಿಸಲು ಉತ್ಸುಕತೆ ತೋರಿದೆ. ಜತೆಗೆ ಇಂಡೋ-ಪೆಸಿಫಿಕ್‌ ವಲಯದಲ್ಲಿ ಚೀನಾದಿಂದ ಎದುರಾಗಿರುವ ಸವಾಲುಗಳನ್ನು ಎದುರಿಸಲು ಹೆಚ್ಚಿನ ಬದ್ಧತೆಯನ್ನು ತೋರಿಸಿದೆ. ''ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಪರಮಾಣು ಶಸ್ತ್ರಾಸ್ತ್ರ ಹೊಂದಿರುವವರಿಂದ ಅಮೆರಿಕ ಯುದ್ಧದ ಬೆದರಿಕೆ ಎದುರಿಸುತ್ತಿದೆ ಮತ್ತು ದೇಶವು ದೀರ್ಘಕಾಲೀನ ಕಾರ್ಯತಂತ್ರದ ಪ್ರತಿಸ್ಪರ್ಧಿಯಾಗಿದೆ,'' ಎಂದು ಅಮೆರಿಕ ಕಾಂಗ್ರೆಸ್‌ನ ಸಶಸ್ತ್ರ ಸೇವಾ ಸಮಿತಿಯ ಅಧ್ಯಕ್ಷ ಮ್ಯಾಕ್‌ ಥೋರ್ನ್‌ಬೆರಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ