ಆ್ಯಪ್ನಗರ

ಕೊರೊನಾ ಲಸಿಕೆ ಉತ್ಪಾದನೆಯಲ್ಲಿ ಭಾರತ ಮುಂಚೂಣಿಯಲ್ಲಿ ಮಿಂಚಲಿದೆ: ಬಿಲ್‌ ಗೇಟ್ಸ್‌

''ಕೋವಿಡ್‌ ಹಾವಳಿಯು ಜಾಗತಿಕ ಯುದ್ಧದ ಬಳಿಕ ವಿಶ್ವ ಮುಖಾಮುಖಿಯಾದ ಬಹುದೊಡ್ಡ ಸಂಘರ್ಷ. ಈ ಸೋಂಕು ತನ್ನಷ್ಟಕ್ಕೆ ತಾನೇ ತೊಲಗುವುದಿಲ್ಲ. ಲಸಿಕೆಯೊಂದೇ ಪರಿಣಾಮಕಾರಿ ಮದ್ದು. ಇದರ ಉತ್ಪಾದನೆಗೆ ತಮ್ಮ ಫೌಂಡೇಷನ್‌ ವಿಶೇಷ ಒತ್ತು ನೀಡಿದೆ. ಭಾರತ ಲಸಿಕೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ ಮಿಂಚಲಿದೆ,'' ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿಗೇಟ್ಸ್‌ ತಿಳಿಸಿದ್ದಾರೆ.

Agencies 16 Sep 2020, 7:24 am
ಹೊಸದಿಲ್ಲಿ: ಕೋವಿಡ್‌-19 ಸೋಂಕು ನಿಯಂತ್ರಣಕ್ಕೆ ಅಗತ್ಯವಾದ ಲಸಿಕೆ ಉತ್ಪಾದನೆಯಲ್ಲಿ ಭಾರತವು ಮಹತ್ವ ಪಾತ್ರ ವಹಿಸಲಿದೆ. ಈ ವಿಷಯದಲ್ಲಿ ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಭಾರತವೇ ಆಸರೆಯಾಗಲಿದೆ ಎಂದು ಮೈಕ್ರೊಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Vijaya Karnataka Web Bill Gates

''ಕೋವಿಡ್‌ ಹಾವಳಿಯು ಜಾಗತಿಕ ಯುದ್ಧದ ಬಳಿಕ ವಿಶ್ವ ಮುಖಾಮುಖಿಯಾದ ಬಹುದೊಡ್ಡ ಸಂಘರ್ಷ. ಈ ಸೋಂಕು ತನ್ನಷ್ಟಕ್ಕೆ ತಾನೇ ತೊಲಗುವುದಿಲ್ಲ. ಲಸಿಕೆಯೊಂದೇ ಪರಿಣಾಮಕಾರಿ ಮದ್ದು. ಇದರ ಉತ್ಪಾದನೆಗೆ ತಮ್ಮ ಫೌಂಡೇಷನ್‌ ವಿಶೇಷ ಒತ್ತು ನೀಡಿದೆ. ಭಾರತ ಲಸಿಕೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ ಮಿಂಚಲಿದೆ,'' ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿಗೇಟ್ಸ್‌ ತಿಳಿಸಿದ್ದಾರೆ.

''ನಿಸ್ಸಂಶಯವಾಗಿ ನಾವೆಲ್ಲರೂ ಭಾರತದಲ್ಲಿಉತ್ಪಾದನೆಯಾಗುವ ಲಸಿಕೆಯನ್ನು ಎದುರು ನೋಡುತ್ತಿದ್ದೇವೆ. ಅದು ತುಂಬಾ ಪರಿಣಾಮಕಾರಿ ಮತ್ತು ಅತ್ಯಂತ ಸುರಕ್ಷಿತವಾಗಿರುತ್ತದೆ ಎನ್ನುವ ನಂಬಿಕೆ ನಮಗಿದೆ. ಸದ್ಯದ ಯೋಜನೆಗಳ ಪ್ರಕಾರ ಆ ಲಸಿಕೆ ಮುಂದಿನ ವರ್ಷದ ವೇಳೆಗೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಸಾಕಷ್ಟು ದೊಡ್ಡ ಪ್ರಮಾಣದಲ್ಲಿಲಸಿಕೆ ಉತ್ಪಾದನೆ ನಡೆಯುವ ನಿರೀಕ್ಷೆ ಇದೆ,'' ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್‌ ರಮ್ಮಿ ಆಟ ನಿಷೇಧಿಸಿ: ಸಂಸತ್‌ನಲ್ಲಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ ಬಿಜೆಪಿ ರಾಜ್ಯಸಭಾ ಸದಸ್ಯ

ಜಗತ್ತಿನಾದ್ಯಂತ ಇದುವರೆಗೆ 9,32,000 ಜನರನ್ನು ಬಲಿ ಪಡೆದಿರುವ ಕೊರೊನಾ ಸೋಂಕಿನ ವಿರುದ್ಧ ಪರಿಣಾಮಕಾರಿ ಲಸಿಕೆ ಸಿದ್ಧಪಡಿಸಲು ನೂರಾರು ವಿಜ್ಞಾನಿಗಳು ಮತ್ತು ಔಷಧ ತಯಾರಿಕ ಕಂಪನಿಗಳು ಪೈಪೋಟಿ ನಡೆಸಿವೆ. ''ಇದು ವಿಶ್ವ ಯುದ್ಧ ಅಲ್ಲ. ಅದರ ನಂತರ ಜಗತ್ತು ಕಂಡ ಬಹುದೊಡ್ಡ ಸಂಘರ್ಷ,'' ಎಂದು ಬಿಲ್‌ಗೇಟ್ಸ್‌ ಬಣ್ಣಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ