ಆ್ಯಪ್ನಗರ

ಭಾರತ-ಶ್ರೀಲಂಕಾ ಸಂಬಂಧ: 195 ಕಡತ ನಾಶ

ಲಿಬರೇಷನ್‌ ಟೈಗರ್ಸ್‌ ಆಪ್‌ ತಮಿಳ್‌ ಈಲಮ್‌ (ಎಲ್‌ಟಿಟಿಇ) ನೇತೃತ್ವದ ನಾಗರಿಕ ಯುದ್ಧದ ಸಮಯದಲ್ಲಿ ಭಾರತ ಮತ್ತು ಶ್ರೀಲಂಕಾ ಸಂಬಂಧಗಳ ಕುರಿತಾದ ದಾಖಲೆಗಳನ್ನು ಒಳಗೊಂಡ ಸುಮಾರು 195 ಕಡತಗಳನ್ನು ಬ್ರಿಟನ್‌ನ ವಿದೇಶಾಂಗ ಮತ್ತು ಕಾಮನ್ವೆಲ್ತ್‌ ಕಚೇರಿ ನಾಶಪಡಿಸಿದೆ.

Vijaya Karnataka 28 May 2018, 9:41 am
ಲಂಡನ್‌: ಲಿಬರೇಷನ್‌ ಟೈಗರ್ಸ್‌ ಆಪ್‌ ತಮಿಳ್‌ ಈಲಮ್‌ (ಎಲ್‌ಟಿಟಿಇ) ನೇತೃತ್ವದ ನಾಗರಿಕ ಯುದ್ಧದ ಸಮಯದಲ್ಲಿ ಭಾರತ ಮತ್ತು ಶ್ರೀಲಂಕಾ ಸಂಬಂಧಗಳ ಕುರಿತಾದ ದಾಖಲೆಗಳನ್ನು ಒಳಗೊಂಡ ಸುಮಾರು 195 ಕಡತಗಳನ್ನು ಬ್ರಿಟನ್‌ನ ವಿದೇಶಾಂಗ ಮತ್ತು ಕಾಮನ್ವೆಲ್ತ್‌ ಕಚೇರಿ ನಾಶಪಡಿಸಿದೆ. 1978 ಮತ್ತು 1980ರ ನಡುವೆ ಎಲ್‌ಟಿಟಿಇ ಬಿಕ್ಕಟ್ಟಿನ ಸಂದರ್ಭದಲ್ಲಿ ಶ್ರೀಲಂಕಾದ ಭದ್ರತಾ ಪಡೆಗಳಿಗೆ ಬ್ರಿಟನ್‌ನ ಎಂಐ5 ಮತ್ತು ಸೀಕ್ರೆಟ್‌ ಏರ್‌ ಸವೀರ್‍ಸ್‌ (ಎಸ್‌ಎಎಸ್‌) ಸಲಹೆ ನೀಡಿತ್ತು. ಸರಕಾರದ ಈ ಕ್ರಮಕ್ಕೆ ಇತಿಹಾಸಕಾರರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ದೇಶದ ದಾಖಲೆಗಳ ನೀತಿಯ ಆಧಾರದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸರಕಾರ ಸ್ಪಷ್ಟನೆ ನೀಡಿದೆ.
Vijaya Karnataka Web ltte


''ನಾಶವಾದ ಎರಡು ದಾಖಲೆಗಳು 1979ರಿಂದ 1980ರವರೆಗಿನ ಶ್ರೀಲಂಕಾ-ಭಾರತ ಸಂಬಂಧದ ಕುರಿತಾದದು,'' ಎಂದು ಪತ್ರಕರ್ತ ಮತ್ತು ಸಂಶೋಧಕ ಫಿಲ್‌ ಮಿಲ್ಲರ್‌ ತಿಳಿಸಿದ್ದಾರೆ. ಇವರು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಈ ಮಾಹಿತಿ ಪಡೆದುಕೊಂಡಿದ್ದಾರೆ. ''ಶ್ರೀಲಂಕಾದ ಭದ್ರತಾ ಪಡೆಗಳ ತರಬೇತಿಯಲ್ಲಿ ಎಸ್‌ಎಎಸ್‌ ಮತ್ತು ಎಂಐ5ರ ಭಾಗಿಯಾಗಿದ್ದನ್ನು ಮರೆಮಾಚಲು ವಿದೇಶಾಂಗ ಕಚೇರಿ ಈ ಕ್ರಮ ಕೈಗೊಂಡಿರುವಂತೆ ತೋರುತ್ತದೆ,'' ಎಂದು ತಮಿಳು ಮಾಹಿತಿ ಕೇಂದ್ರದ ಸಂಸ್ಥಾಪಕ ವೈರಮುತ್ತು ವರದಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ