ಆ್ಯಪ್ನಗರ

ಶುಕ್ರವಾರ ಮೋದಿ-ರಾಜಪಕ್ಸ ವರ್ಚುವಲ್‌ ಸಭೆ, ಮಿಲಿಟರಿ ಮತ್ತು ಆಂತರಿಕ ಭದ್ರತೆಗೆ ಒತ್ತು

ಅಭೂತಪೂರ್ವ ಚುನಾವಣಾ ಜಯದೊಂದಿಗೆ ಶ್ರೀಲಂಕಾದಲ್ಲಿ ಮಹಿಂದಾ ರಾಜಪಕ್ಸ ಅಧಿಕಾರಕ್ಕೇರಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಯುತ್ತಿರುವ ಮೊದಲ ಮತ್ತು ಮಹತ್ವದ ಮಾತುಕತೆ ಇದಾಗಿದೆ.

Vijaya Karnataka 24 Sep 2020, 7:59 pm
ಕೊಲೊಂಬೊ: ದ್ವಿಪಕ್ಷೀಯ ಸಂಬಂಧಗಳ ಸುಧಾರಣೆ, ರಕ್ಷಣಾ ಮತ್ತು ಆಂತರಿಕ ಭದ್ರತಾ ಕ್ಷೇತ್ರಗಳಲ್ಲಿ ಪರಸ್ಪರರ ಸಹಯೋಗ ಸೇರಿದಂತೆ ಅನೇಕ ವಿಚಾರಗಳ ಕುರಿತು ಸೆ.26ರಂದು ನಡೆಯುವ ವರ್ಚುವಲ್‌‌ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಚರ್ಚೆ ನಡೆಸಲಿದ್ದಾರೆ.
Vijaya Karnataka Web MODI-RAJAPAKSA


ಅಭೂತಪೂರ್ವ ಚುನಾವಣಾ ಜಯದೊಂದಿಗೆ ರಾಜಪಕ್ಸ ಅಧಿಕಾರಕ್ಕೇರಿದ ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ನಡೆಯುತ್ತಿರುವ ಮೊದಲ ಮತ್ತು ಮಹತ್ವದ ಮಾತುಕತೆ ಇದಾಗಿದೆ.

ಆ. 6ರಂದು ಪ್ರಧಾನಿ ಮೋದಿ ಅವರು ರಾಜಪಕ್ಸ ಜತೆಗೆ ದೂರವಾಣಿ ಮಾತುಕತೆ ನಡೆಸಿ ವರ್ಚುವಲ್‌ ಸಭೆಯ ಪ್ರಸ್ತಾವನೆ ಇರಿಸಿದ್ದರು.
ಅದರಂತೆ ಇದು ಆಯೋಜನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರೀಲಂಕಾ ಚುನಾವಣೆಯಲ್ಲಿ ರಾಜಪಕ್ಸೆ ಅಣ್ತಮಂದಿರಿಗೆ ಭಾರಿ ಗೆಲುವು, ಮಹಿಂದಾ ಪ್ರಧಾನಿ, ಗೊಟಬಯ ಅಧ್ಯಕ್ಷ!
ಇನ್ನು ಸಭೆ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ರಾಜಪಕ್ಸ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಲು ಉತ್ಸುಕನಾಗಿದ್ದೇನೆ. ರಾಜಕೀಯ, ಆರ್ಥಿಕತೆ, ರಕ್ಷಣಾ ವಲಯ, ಪ್ರವಾಸೋದ್ಯಮಕ್ಕೆ ಸಂಬಂಧಿತ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ನಮ್ಮ ಮಾತುಕತೆ ಪುಷ್ಟಿ ನೀಡುವ ವಿಶ್ವಾಸವಿದೆ ಎಂದಿದ್ದಾರೆ.

ಇದಕ್ಕೆ ಟ್ವೀಟ್‌ ಮೂಲಕವೇ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಕೋವಿಡ್‌ ನಂತರದ ದಿನಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿಗೆ ವರ್ಚುವಲ್‌ ಸಭೆ ಅಡಿಪಾಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಿಸಿದ ನಂತರ ಪ್ರಧಾನಿ ಮಹಿಂದಾ ರಾಜಪಕ್ಸ ಸೋದರ ಗೊಟಬಯ ಅವರು ಕೂಡ ಭಾರತಕ್ಕೆ ತಮ್ಮ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದು ಗಮನಾರ್ಹ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ