ಆ್ಯಪ್ನಗರ

Indian Air Force: ಪಾಕಿಸ್ತಾನಿಗಳು ಗೂಗಲ್‌ ಮಾಡುತ್ತಿರುವ ಪದಗಳು ಎರಡೇ 1.ಐಎಎಫ್‌, 2.ಬಾಲಾಕೋಟ್‌!

ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ವಾಯು ಪಡೆ ಪಾಕಿಸ್ತಾನದ ಗಡಿ ದಾಟಿ ಬಾಲಾಕೋಟ್‌ನಲ್ಲಿದ್ದ ಜೈಷೆ ಮೊಹಮ್ಮದ್‌ ಉಗ್ರರ ತಾಣಗಳನ್ನು ನಾಶಗೊಳಿಸಿದ ನಂತರ ಪಾಕಿಸ್ತಾನದಲ್ಲಿ ಐಎಫ್‌ ಬಗ್ಗೆ ಗೂಗಲ್‌ ಮಾಡಿದವರ ಸಂಖ್ಯೆ ಹೆಚ್ಚಾಗಿದೆ.

Indiatimes 27 Feb 2019, 2:47 pm
ಇಸ್ಲಾಮಾಬಾದ್‌: ಪಾಕಿಸ್ತಾನದ ಬಾಲಾಕೋಟ್‌ ಮೇಲೆ ಭಾರತೀಯ ವಾಯು ಪಡೆ ಸರ್ಜಿಕಲ್‌ ದಾಳಿ ನಡೆಸಿದ ನಂತರ ಪಾಕಿಸ್ತಾನದಲ್ಲಿ ಭಾರತೀಯ ವಾಯು ಪಡೆಯ ಬಗ್ಗೆ ಗೂಗಲ್‌ನಲ್ಲಿ ಹುಡುತ್ತಿರುವವರ ಸಂಖ್ಯೆ ಮಿತಿ ಮೀರಿದೆ. ಎಷ್ಟರ ಮಟ್ಟಿಗೆ ಎಂದರೆ ಪಾಕಿಸ್ತಾನ ವಾಯು ಪಡೆಗಿಂತಲೂ ಭಾರತೀಯ ವಾಯು ಪಡೆ ಕುರಿತು ಗೂಗಲ್‌ನಲ್ಲಿ ಹುಡುಕಾಡಿದವರ ಸಂಖ್ಯೆಯೇ ಹೆಚ್ಚಿದೆ.
Vijaya Karnataka Web IAF


ಗೂಗಲ್‌ ಸರ್ಚ್‌ ಎನಾಲಿಸಿಸ್‌ ಪ್ರಕಾರ ಪಾಕಿಸ್ತಾನದಲ್ಲಿ ಪಿಎಎಫ್‌ಗಿಂತ ಐಎಎಫ್‌ ಬಗ್ಗೆ ಹುಡುಕಾಡಿದವರ ಸಂಖ್ಯೆ ಹೆಚ್ಚಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ದಿನವಿಡೀ ಈ ಫಲಿತಾಂಶ ಕಂಡು ಬಂದಿದ್ದು, ಭಾರತೀಯ ವಾಯು ಪಡೆ ಬಗ್ಗೆ ಪಾಕಿಸ್ತಾನಿಯರು ಅದೆಷ್ಟು ಗಾಬರಿಗೆ ಒಳಗಾಗಿದ್ದಾರೆ ಎಂದು ತಿಳಿದು ಬರುತ್ತಿದೆ.

ಪಾಕಿಸ್ತಾನ ವಾಯು ಪಡೆ ಮತ್ತು ಪಾಕಿಸ್ತಾನ ಸೇನೆಯ ಬಗ್ಗೆ ಗೂಗಲ್‌ ಮಾಡಿದ ಪಾಕಿಸ್ತಾನಿಯರಿಗಿಂತ ಭಾರತೀಯ ವಾಯು ಪಡೆ ಮತ್ತು ಭಾರತೀಯ ಸೇನೆ ಬಗ್ಗೆ ಸರ್ಚ್‌ ಮಾಡಿದ ಪಾಕಿಗರೇ ಹೆಚ್ಚು.

ಗೂಗಲ್‌ ಅನಾಲಿಟಿಕ್ಸ್‌ ಪ್ರಕಾರ ಭಾರತದಲ್ಲಿ ಅತಿಹೆಚ್ಚು ಪ್ರಚಲಿತ ಶಬ್ಧ Surgical Strike ಆಗಿದೆ. ಪಾಕಿಸ್ತಾನದಲ್ಲು ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಹುಡುಕಿದವರ ಸಂಖ್ಯೆ ಹೆಚ್ಚಿದೆ. ಪಾಕಿಸ್ತಾನದಲ್ಲಿ ಪ್ರಚಲಿತದಲ್ಲಿರುವ ಮತ್ತೊಂದು ಶಬ್ಧ 'Balakot' ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ