ಆ್ಯಪ್ನಗರ

ಭಾರತೀಯ ಮೂಲದ ನಿಯೋಮಿ ರಾವ್‌ ಅಮೆರಿಕ ಜಜ್‌

ಅಮೆರಿಕದಲ್ಲಿನ ಈ ಪ್ರಭಾವಿ ಕೋರ್ಟ್‌ನಲ್ಲಿ ನ್ಯಾಯಾಧೀಶರ ಹುದ್ದೆ ಗಿಟ್ಟಿಸಿದ ಎರಡನೇ ಭಾರತೀಯ ಇವರಾಗಿದ್ದಾರೆ.

Vijaya Karnataka 22 Mar 2019, 5:00 am
ವಾಷಿಂಗ್ಟನ್‌: ಅಮೆರಿಕದಲ್ಲಿರುವ ಭಾರತೀಯ ಮೂಲದ ಪ್ರಭಾವಿ ವಕೀಲ ನಿಯೋಮಿ ಜೆ. ರಾವ್‌ ಅವರು ಅಮೆರಿಕದ ಕೊಲಂಬಿಯ ಜಿಲ್ಲಾ ಸಕ್ರ್ಯೂಟ್‌ ಕೋರ್ಟ್‌ನ ನ್ಯಾಯಾಧೀಶರಾಗಿ ಅಧಿಕಾರವಹಿಸಿಕೊಂಡಿದ್ದಾರೆ.
Vijaya Karnataka Web neomi


ಅಮೆರಿಕದಲ್ಲಿನ ಈ ಪ್ರಭಾವಿ ಕೋರ್ಟ್‌ನಲ್ಲಿ ನ್ಯಾಯಾಧೀಶರ ಹುದ್ದೆ ಗಿಟ್ಟಿಸಿದ ಎರಡನೇ ಭಾರತೀಯ ಇವರಾಗಿದ್ದಾರೆ.

ರಾವ್‌ (45) ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಕ್ಲಾರೆನ್ಸ್‌ ಥಾಮಸ್‌ ಅವರು ಶ್ವೇತಭವನದಲ್ಲಿ ಪ್ರತಿಜ್ಞಾವಿಧಿ ಬೋಧೀಸಿದರು. ಬೈಬಲ್‌ ಮೇಲೆ ಪ್ರಮಾಣಮಾಡಿ ಅವರು ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷ ಟ್ರಂಪ್‌ ಅವರೂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಅಧ್ಯಕ್ಷ ಟ್ರಂಪ್‌ ಅವರಿಂದ ನಾಮನಿರ್ದೇಶನಗೊಂಡಿದ್ದ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ವಿವಾದಕ್ಕೆ ಸಿಲುಕಿರುವ ಹಾಲಿ ನ್ಯಾಯಾಧೀಶರಾದ ಬ್ರೆಟ್‌ ಕವನೌ ಅವರ ಸ್ಥಾನವನ್ನು ರಾವ್‌ ತುಂಬಲಿದ್ದಾರೆ.

ಮತ್ತೊಬ್ಬ ಭಾರತೀಯ ಶ್ರಿ ಶ್ರೀನಿವಾಸನ್‌ ಅವರು ಸಹ ಒಬಾಮಾ ಅಧಿಕಾರವಧಿಯಲ್ಲಿದ್ದಾಗ ಈ ಕೋರ್ಟ್‌ಗೆ ನೇಮಕಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ