ಆ್ಯಪ್ನಗರ

ಭಾರತೀಯನಿಗೆ ದುಬೈ ಲಾಟರಿಯಲ್ಲಿ 27 ಕೋಟಿ ರೂ.

ಆಶ್ಚರ್ಯವೆಂದರೆ ಬಿಗ್‌ ಟಿಕೆಟ್‌ ಡ್ರಾ ಉಸ್ತುವಾರಿಯ ಅಧಿಕಾರಿಗಳು ಶೋಜಿತ್‌ಗೆ ಕರೆ ಮಾಡಿ ಬಹುಮಾನ ಗೆದ್ದ ವಿಚಾರ ತಿಳಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.

Vijaya Karnataka 5 May 2019, 5:00 am
ದುಬೈ : ಅಬುಧಾಬಿಯಲ್ಲಿ ನಡೆದ ಡ್ಯೂಟಿ ಫ್ರೀಸ್‌ ಬಿಗ್‌ ಟಿಕೆಟ್‌ ಸರಣಿ ಡ್ರಾನಲ್ಲಿ ಭಾರತೀಯ ಶೋಜಿತ್‌ ಕೆ.ಎಸ್‌. ಅವರು 27 ಕೋಟಿ ರೂ. ಗೆದ್ದಿದ್ದಾರೆ. ಸದ್ಯ ಶಾರ್ಜಾ ನಿವಾಸಿಯಾಗಿರುವ ಶೋಜಿತ್‌ ಏ.1ರಂದು ಲಾಟರಿ ಟಿಕೆಟ್‌ ಖರೀದಿಸಿದ್ದರು.
Vijaya Karnataka Web indian man in uae wins dirhams 15 million in abu dhabi raffle
ಭಾರತೀಯನಿಗೆ ದುಬೈ ಲಾಟರಿಯಲ್ಲಿ 27 ಕೋಟಿ ರೂ.


ಆಶ್ಚರ್ಯವೆಂದರೆ ಬಿಗ್‌ ಟಿಕೆಟ್‌ ಡ್ರಾ ಉಸ್ತುವಾರಿಯ ಅಧಿಕಾರಿಗಳು ಶೋಜಿತ್‌ಗೆ ಕರೆ ಮಾಡಿ ಬಹುಮಾನ ಗೆದ್ದ ವಿಚಾರ ತಿಳಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಏಕೆಂದರೆ ಹಲವು ಬಾರಿ ಕರೆ ಮಾಡಿದರು ಶೋಜಿತ್‌ ಕರೆ ಸ್ವೀಕರಿಸುತ್ತಿಲ್ಲ ಎಂದು ಉಸ್ತುವಾರಿ ಅಧಿಕಾರಿ ರಿಚರ್ಡ್‌ ತಿಳಿಸಿದ್ದಾರೆ. ಶಾರ್ಜಾದಲ್ಲಿ ಶೋಜಿತ್‌ ವಾಸಿಸುವ ವಿಳಾಸ ಸಿಕ್ಕಿದೆ. ಹಾಗಾಗಿ ಖುದ್ದು ನಿವಾಸಕ್ಕೆ ತೆರಳಿ ಬಹುಮಾನ ನೀಡುತ್ತೇವೆ ಎಂದಿದ್ದಾರೆ.

ಇದೇ ಡ್ರಾನಲ್ಲಿ ಮತ್ತೋರ್ವ ಭಾರತೀಯ ಮಂಗೇಶ್‌ ಮೈಂಡೆ ಬಿಎಂಡಬ್ಲ್ಯೂ 220ಐ ಕಾರು ಗೆದ್ದಿದ್ದಾರೆ. ಇವರಿಬ್ಬರಲ್ಲದೆ 8 ಮಂದಿ ಭಾರತೀಯರು ಮತ್ತು ಒಬ್ಬ ಪಾಕಿಸ್ತಾನಿ ಸಮಾಧಾನಕರ ಬಹುಮಾನಗಳನ್ನು ಗಳಿಸಿದ್ದಾರೆ. ಕಳೆದ ವರ್ಷ ಕೇರಳ ಮೂಲದ ಜಾನ್‌ ವರ್ಗೀಸ್‌ ಇದೇ ಡ್ರಾನಲ್ಲಿ 22.6 ಕೋಟಿ ರೂ. ಗೆದ್ದಿದ್ದರು. ಪ್ರತಿ ತಿಂಗಳು ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗ್‌ ಟಿಕೆಟ್‌ ರಾಫ್ಲೆ ಹೆಸರಿನಲ್ಲಿ ಡ್ರಾ ನಡೆಸಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ