ಆ್ಯಪ್ನಗರ

ಭಾರತೀಯ ಮಹಿಳೆಗೆ 3 ವರ್ಷ ಜೈಲು ಶಿಕ್ಷೆ ಸಾಧ್ಯತೆ

ಅಮೆರಿಕ ನೌಕಾಸೇನೆ ಇತಿಹಾಸದಲ್ಲೇ ಅತಿ ದೊಡ್ಡ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ 57 ವರ್ಷದ ಭಾರತೀಯ ಮೂಲದ ಸಿಂಗಾಪುರ ಮಹಿಳೆ ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ...

Vijaya Karnataka 23 Jun 2018, 11:00 am
ಸಿಂಗಾಪುರ: ಅಮೆರಿಕ ನೌಕಾಸೇನೆ ಇತಿಹಾಸದಲ್ಲೇ ಅತಿ ದೊಡ್ಡ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ 57 ವರ್ಷದ ಭಾರತೀಯ ಮೂಲದ ಸಿಂಗಾಪುರ ಮಹಿಳೆ ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
Vijaya Karnataka Web Arrest


ಅಮೆರಿಕ ನೌಕಾಸೇನೆಯ ಪ್ರಮುಖ ಗುತ್ತಿಗೆ ತಜ್ಞರಾದ ಶರೋನ್‌ ರಾಚೆಲ್‌ ಗುರುಶರಣ್‌ ಕೌರ್‌ ಅವರು 35 ದಶಲಕ್ಷದ 'ಫ್ಯಾಟ್‌ ಲಿಯೊನಾರ್ಡ್‌' ಹಗರಣದಲ್ಲಿ ಭಾಗಿಯಾಗಿದ್ದು, ಕನಿಷ್ಠ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ.

ಸಿಂಗಾಪುರದಲ್ಲಿರುವ ಅಮೆರಿಕ ನೌಕಾಸೇನೆಯ ಸಪ್ಲೈ ಸಿಸ್ಟಮ್ಸ್‌ ಕಮಾಂಡ್‌ ಫ್ಲೀಟ್‌ ಲಾಜಿಸ್ಟಿಕ್ಸ್‌ ಸೆಂಟರ್‌ನಲ್ಲಿ ಕೌರ್‌ ನೆಲೆಸಿದ್ದರು. ಗ್ಲೆನ್‌ ಡಿಫೆಸ್ಸ್‌ ಮೆರೈನ್‌ ಏಷ್ಯಾ(ಜಿಡಿಎಂಎ)ದ ಮಲೇಷ್ಯನ್‌ ಮುಖ್ಯ ಕಾರ್ಯನಿರ್ವಾಹಕ ಲಿಯೊನಾರ್ಡ್‌ ಗ್ಲೆನ್‌ ಫ್ರಾನ್ಸಿಸ್‌ ಅವರಿಂದ ಲಂಚದ ರೂಪದಲ್ಲಿ 1,30,000 ಸಿಂಗಾಪುರ ಡಾಲರ್‌ಗಿಂತ ಹೆಚ್ಚಿನ ಮೊತ್ತವನ್ನು ಪಡೆದಿದ್ದರು ಎಂದು ಕೋರ್ಟ್‌ ವಿಚಾರಣೆ ವೇಳೆ ಆರೋಪಿಸಲಾಗಿದೆ. ಜಿಡಿಎಂಎ, ಸಿಂಗಾಪುರ ಮೂಲದ ಗ್ಲೆನ್‌ ಮೆರೈನ್‌ ಗ್ರೂಪ್‌ನ ಅಂಗಸಂಸ್ಥೆಯಾಗಿದ್ದು,ಏಷ್ಯಾದಲ್ಲಿ ಕನಿಷ್ಠ 12ಕ್ಕೂ ಹೆಚ್ಚು ದೇಶಗಳಲ್ಲಿ ಅಮೆರಿಕನ್‌ ಹಡಗುಗಳಿಗೆ ಸರಕು ಮತ್ತು ಸೇವೆಗಳನ್ನು ಒದಗಿಸುತ್ತದೆ.

ಸಾರ್ವಜನಿಕರಿಗೆ ಲಭ್ಯವಿರದ ಅಮೆರಿಕ ನೌಕಾಸೇನೆ ಕುರಿತ ಮಾಹಿತಿ ನೀಡಲು 2006 ಮತ್ತು 2011ರ ನಡುವೆ ಕೌರ್‌ ಅವರಿಗೆ ಫ್ರಾನ್ಸಿಸ್‌ ಲಂಚ ನೀಡಿದ್ದರು. ತನ್ನ ಸಂಸ್ಥೆಯ ಸಹ ಸ್ಪರ್ಧಿ ಸಂಸ್ಥೆಗಳ ಸೂಕ್ಷ್ಮ ಮಾಹಿತಿ ಮತ್ತು ಬೆಲೆ ಸಂಬಂಧಿ ಮಾಹಿತಿಗಳನ್ನು ಆಕೆ ಬಹಿರಂಗಪಡಿಸುತ್ತಿದ್ದಳು. ಇದರ ಪರಿಣಾಮವಾಗಿ, ಅಮೆರಿಕ ನೌಕಾಪಡೆಯೊಂದಿಗೆ ಲಾಭದಾಯಕ ಗುತ್ತಿಗೆಗಳನ್ನು ಭದ್ರಪಡಿಸಿಕೊಳ್ಳಲು ಹೆಚ್ಚು ಸ್ಪರ್ಧಾತ್ಮಕ ಬಿಡ್‌ ಮಾಡಲು ಫ್ರಾನ್ಸಿಸ್‌ಗೆ ಸಾಧ್ಯವಾಯಿತು. ಅಮೆರಿಕ ನೌಕಾಪಡೆಯ 16 ಗುತ್ತಿಗೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಆಕೆ ಬಹಿರಂಗಪಡಿಸಿದ್ದಳು. ಆ ಪೈಕಿ ಜಿಡಿಎಂಎ 14 ಬಿಡ್‌ಗಳನ್ನು ಸಲ್ಲಿಸಿದೆ. ಅದರಲ್ಲಿ ಒಟ್ಟು 48 ದಶಲಕ್ಷ ಡಾಲರ್‌ ಮೌಲ್ಯದ 11 ಗುತ್ತಿಗೆಗಳು ಸಂಸ್ಥೆಗೆ ಸಿಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ