ಆ್ಯಪ್ನಗರ

ರಫೇಲ್‌ ಇರುವಾಗಲೇ ಯುಎಇನ ಅಲ್‌-ಧಫ್ರಾ ನೆಲೆಯಲ್ಲಿ ಇರಾನ್‌ ಕ್ಷಿಪಣಿ ಪರೀಕ್ಷೆ, ಆತಂಕ!

ಯುಎಇಯಲ್ಲಿನ ಅಲ್‌-ಧಫ್ರಾ ವಾಯುನೆಲೆಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಅರೆಸೈನಿಕ ಪಡೆ ಕ್ಷಿಪಣಿ ಪರೀಕ್ಷೆ ನಡೆಸಿದೆ. ಆದರೆ ಇದು ಭಾರೀ ಸುದ್ದಿಯಾಗಲು ಕಾರಣ ಅದೇ ನೆಲೆಯಲ್ಲಿ ಭಾರತದ ರಫೇಲನ್ನ ತಾತ್ಕಾಲಿಕವಾಗಿ ನಿಲ್ಲಿಸಿದ್ದರಿಂದ ಆತಂಕ ಸೃಷ್ಟಿಯಾಗಿತ್ತು.

TIMESOFINDIA.COM 30 Jul 2020, 8:03 am
ತೆಹ್ರಾನ್‌: ರಫೇಲ್‌ ಜೆಟ್‌ಗಳು ಭಾರತಕ್ಕೆ ಬರುವ ಮುನ್ನ ತಾತ್ಕಾಲಿಕ ನಿಲ್ದಾಣವಾಗಿ ಬಳಸಿದ್ದ ಯುಎಇಯಲ್ಲಿನ ಅಲ್‌-ಧಫ್ರಾ ವಾಯುನೆಲೆಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಅರೆಸೈನಿಕ ಪಡೆ ನಡೆಸಿದ ಕ್ಷಿಪಣಿ ಪರೀಕ್ಷೆ ಕ್ಷಣಕಾಲ ಆತಂಕದ ವಾತಾವರಣ ನಿರ್ಮಿಸಿತ್ತು.
Vijaya Karnataka Web Ed6i8JGUYAEHZK7


ಖಂಡಾಂತರ ಕ್ಷಿಪಣಿ ಹಾರಿದ ಕೂಡಲೇ ಅಗ್ನಿ ಜ್ವಾಲೆ ಬಹುತೇಕ ಕಡೆಗಳಲ್ಲಿ ಆವರಿಸಿದ್ದರಿಂದ ಅಲ್ಲಿದ್ದಂತಹ ಅಮೆರಿಕದ ಮಿಲಿಟರಿ ಸೆಂಟ್ರಲ್‌ ಕಮಾಂಡ್‌ ಸೈನಿಕರು ಆತಂಕಗೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗಾರ್ಡ್ಸ್ನ ಏರೋಸ್ಪೇಸ್‌ ವಿಭಾಗ ಮುಖ್ಯಸ್ಥ ಜನರಲ್‌ ಆಮಿರ್‌ ಅಲಿ ಹಾಜಿಝಾದೆ, ತಾಲೀಮಿನ ನಡುವೆ ಎರಡು ಕ್ಷಿಪಣಿಗಳು ಸಿಡಿದು ಹಾರಿದ್ದರಿಂದ ಕೆಲವು ಅವಶೇಷಗಳು ನೆಲೆಯ ಪ್ರದೇಶಗಳಿಗೆ ಅಪ್ಪಳಿಸಿದೆ. ಆದರೆ ಯಾವುದೇ ಹಾನಿಯಾಗಿಲ್ಲಎಂದಿದ್ದಾರೆ.

ಫ್ರಾನ್ಸ್‌ನಿಂದ ಬಂದ ರಫೇಲ್‌ ಯುದ್ಧ ವಿಮಾನಗಳು ತಾತ್ಕಾಲಿಕವಾಗಿ ಯುಎಇನ ಅಲ್‌-ಧಫ್ರಾ ವಾಯುನೆಲೆಯಲ್ಲಿ ನಿಲ್ಲಿಸಲಾಗಿತ್ತು. ಇದೇ ವೇಳೆ ಈ ಘಟನೆ ನಡೆದಿದ್ದರಿಂದ ಆಂತಕ ಸೃಷ್ಟಿಯಾಯಿತು. ತದ ನಂತರ ಇರಾನ್‌ ಮಾಹಿತಿ ನೀಡಿದ ಹಿನ್ನೆಲೆ ಗೊಂದಲ ಮಾಯವಾಗಿತ್ತು.
ತ್ರಿವಳಿ ತಲಾಕ್‌ ನಿ‍ಷೇಧವಾಗಿ ಒಂದು ವರ್ಷ, ಶೇ.82 ರಷ್ಟು ಇಳಿದ ಪ್ರಕರಣ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ