ಆ್ಯಪ್ನಗರ

ಭದ್ರತಾ ಪಡೆಗಳ ಜತೆ ಕಾಳಗದ ವೇಳೆ ತಮ್ಮನ್ನು ಸ್ಫೋಟಿಸಿಕೊಂಡವರೂ ನಮ್ಮವರೇ: ಐಸಿಸ್‌

ಮದ್ದುಗುಂಡುಗಳು ಕಾಲಿಯಾಗುವ ವರೆಗೆ ಭದ್ರತಾ ಪಡೆ ಜತೆ ಕಾಳಗ ನಡೆಸಿದ್ದಾರೆ. ಮದ್ದುಗುಂಡುಗಳು ಕಾಲಿಯಾದ ನಂತರ ತಮ್ಮನ್ನು ಸ್ಫೋಟಿಸಿಕೊಂಡಿದ್ದಾರೆ ಎಂದೂ ಐಸಿಸ್‌ ಹೇಳಿಕೊಂಡಿದೆ.

Times Now 28 Apr 2019, 12:04 pm
ಕೊಲಂಬೊ: ಶ್ರೀಲಂಕಾದ ಸರಣಿ ಆತ್ಮಾಹುತಿ ಬಾಂಬ್‌ ದಾಳಿಯ ಹೊಣೆ ಹೊತ್ತುಕೊಂಡಿರುವ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಯು ಭದ್ರತಾ ಪಡೆ ಜತೆಗಿನ ಕಾಳಗದಲ್ಲಿ ತಮ್ಮನ್ನು ಸ್ಫೋಟಿಸಿಕೊಂಡ ಮೂವರು ಉಗ್ರರನ್ನು ತಮ್ಮವರೆಂದು ಹೇಳಿಕೊಂಡಿದೆ.
Vijaya Karnataka Web ISIS


ಶ್ರೀಲಂಕಾದ ಪೂರ್ವ ಕರಾವಳಿಯಲ್ಲಿ ಶುಕ್ರವಾರ ರಾತ್ರಿಯಿಡೀ ಉಗ್ರರ ಜತೆ ಗುಂಡಿನ ಕಾಳಗ ನಡೆದಿದ್ದು, 6 ಮಕ್ಕಳೂ ಸೇರಿದಂತೆ 15 ಶವಗಳು ಪತ್ತೆಯಾಗಿದ್ದವು. 250ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡ ಈಸ್ಟರ್ ಭಾನುವಾರದ ಸರಣಿ ಸ್ಫೋಟಗಳ 6 ದಿನಗಳ ಬಳಿಕ ಈ ಘಟನೆ ನಡೆದಿತ್ತು.

ಅಮಾಕ್‌ ನ್ಯೂಸ್‌ ಏಜೆನ್ಸಿಗೆ ಹೇಳಿಕೆಯನ್ನು ನೀಡಿರುವ ಐಸಿಸ್‌ ಸಂಘಟನೆ, ತಮ್ಮನ್ನು ಸ್ಫೋಟಿಸಿಕೊಂಡು ಮತ್ತೆ 15 ಮಂದಿ ಸಾವಿಗೆ ಕಾರಣರಾದ ಉಗ್ರರು ತಮ್ಮವರು. ಅಬು ಹಮದ್‌, ಅಬು ಸುಫ್ಯಾನ್‌ ಮತ್ತು ಅಬು ಅಲ್‌ಕ್ವಾಕ ಎಂಬುದು ಅವರ ಹೆಸರು ಎಂದು ತಿಳಿಸಿದೆ. ಮದ್ದುಗುಂಡುಗಳು ಕಾಲಿಯಾಗುವ ವರೆಗೆ ಭದ್ರತಾ ಪಡೆ ಜತೆ ಕಾಳಗ ನಡೆಸಿದ್ದಾರೆ. ಮದ್ದುಗುಂಡುಗಳು ಕಾಲಿಯಾದ ನಂತರ ತಮ್ಮನ್ನು ಸ್ಫೋಟಿಸಿಕೊಂಡಿದ್ದಾರೆ ಎಂದೂ ಐಸಿಸ್‌ ಹೇಳಿಕೊಂಡಿದೆ.

ಬಟ್ಟಿಕಲೋವಾ ಪಟ್ಟಣದ ದಕ್ಷಿಣಕ್ಕಿರುವ ಅಂಪಾರಾದ ಸೈಂತಾಮರುತುವಿನಲ್ಲಿ ಶಂಕಿತ ಇಸ್ಲಾಮಿಕ್ ಉಗ್ರರು ಮತ್ತು ಸೇನಾ ಯೋಧರ ನಡುವೆ ಶುಕ್ರವಾರ ಸಂಜೆಯೇ ಗುಂಡಿನ ಕಾಳಗ ಆರಂಭವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ