ಆ್ಯಪ್ನಗರ

ಚೀನಾದ ಶಿಕ್ಷಕರ ಅಪಹರಿಸಿ ಹತ್ಯೆ ಮಾಡಿದ ಐಸಿಸ್

ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿದ್ದ ಚೀನಾದ ಇಬ್ಬರು ಶಿಕ್ಷಕರನ್ನು ಕೊಂದು ಹಾಕಿರುವುದಾಗಿ ಐಸಿಸ್ ಉಗ್ರ ಸಂಘಟನೆ ಹೇಳಿಕೊಂಡಿದೆ.

ಟೈಮ್ಸ್ ಆಫ್ ಇಂಡಿಯಾ 9 Jun 2017, 5:19 pm
ಸಿಐರೊ/ಕ್ವೆಟ್ಟಾ: ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿದ್ದ ಚೀನಾದ ಇಬ್ಬರು ಶಿಕ್ಷಕರನ್ನು ಕೊಂದು ಹಾಕಿರುವುದಾಗಿ ಐಸಿಸ್ ಉಗ್ರ ಸಂಘಟನೆ ಹೇಳಿಕೊಂಡಿದೆ.
Vijaya Karnataka Web islamic state claims it killed two chinese in pakistan
ಚೀನಾದ ಶಿಕ್ಷಕರ ಅಪಹರಿಸಿ ಹತ್ಯೆ ಮಾಡಿದ ಐಸಿಸ್


ಅಪಹರಣಕ್ಕೊಳಗಾಗಿರುವ ಶಿಕ್ಷಕನ್ನು ರಕ್ಷಿಸಲು ಪ್ರಯತ್ನಿಸುತ್ತೇವೆ. ಅವರನ್ನು ಹತ್ಯೆಗೈದ ಕುರಿತ ವರದಿಯನ್ನು ಪರಿಶೀಲಿಸುತ್ತೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಅಧಿಕೃತ ಮೂಲಗಳು ತಿಳಿಸಿವೆ.

ಘಟನೆಗೆ ಸಂಬಂಧಿಸಿದಂತೆ ಚೀನಾ ಪ್ರತಿಕ್ರಿಯೆ ನೀಡಿದೆ. ಆದರೆ, ಪಾಕಿಸ್ತಾನದ ಆಂತರಿಕ ಸಚಿವಾಲಯ ಹಾಗೂ ವಿದೇಶಾಂಗ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕ್ವೆಟ್ಟಾದ ಪ್ರಾಂತ್ಯವೊಂದರಿಂದ ಮೇ 24ರಂದು ಪೊಲೀಸರ ವೇಶದಲ್ಲಿ ಬಂದ ಐಸಿಸ್ ಉಗ್ರರು ಇಬ್ಬರು ಚೀನಿ ಶಿಕ್ಷಕರನ್ನು ಅಪಹರಿಸಿದ್ದು, ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಚೀನಾ ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆಗಾಗಿ ಚೀನಾ ಪಾಕಿಸ್ತಾನದ ಜತೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಉಗ್ರರ ಈ ಘೋರ ಘಟನೆಯಿಂದ ಚೀನಾ ಹಾಗೂ ಪಾಕಿಸ್ತಾನದ ಸಂಬಂಧ ಹದಗೆಡುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ