ಆ್ಯಪ್ನಗರ

ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಾಕ್ಷಿಯಾದ ಶ್ವೇತ ಭವನ: ಟ್ರಂಪ್‌ ಮಧ್ಯಸ್ಥಿಕೆಯಲ್ಲಿ ಯುಎಇ, ಬಹ್ರೇನ್, ಇಸ್ರೇಲ್‌ ಸಮ್ಮಿಲನ!

​ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಉಪಸ್ಥಿತಿಯಲ್ಲಿ ಇಸ್ರೇಲ್‌, ಬಹ್ರೇನ್‌ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ನಡುವೆ ಶಾಂತಿ ಒಪ್ಪಂದಗಳಿಗೆ ಚಾಲನೆ ದೊರೆಯಿತು. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು, ಬಹ್ರೇನ್‌ ವಿದೇಶಾಂಗ ಸಚಿವ ಅಬ್ದುಲ್ಲಾತಿಫ್‌ ಬಿನ್‌ ರಷೀದ್ ಅಲ್‌ ಝಯಾದಿ ಹಾಗೂ ಯುಎಐ ದೊರೆ ಮೊಹಮ್ಮದ್ ಬಿನ್‌ ಝೈದ್‌ ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕಿದರು. ​​ಇಂಗ್ಲಿಷ್‌, ಅರಾಬಿಕ್‌ ಹಾಗೂ ಹೀಬ್ರೂ ಮೂರೂ ಭಾಷೆಗಳಲ್ಲಿದ್ದ ಒಪ್ಪಂದಗಳಿಗೆ ಮೂರೂ ರಾಷ್ಟ್ರಗಳ ಪ್ರತಿನಿಧಿಗಳು ಸಹಿ ಮಾಡಿದರು. ಇದಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಶ್ವೇತಭವನ ಸಾಕ್ಷಿಯಾಯಿತು.

Agencies 16 Sep 2020, 12:53 pm
ವಾಷಿಂಗ್ಟನ್‌: ಇಸ್ರೇಲ್‌ ಹಾಗೂ ಅರಬ್‌ ದೇಶಗಳ ನಡುವೆ ದಶಕಗಳಿಂದ ಇದ್ದ ಹಾಗೂ ಇರುವಂತಹ ಸಂಘರ್ಷದ ಕೊಂಡಿ ಒಂದೊಂದೆ ಕಳಚಿಕೊಳ್ಳುತ್ತಿದೆ. ಇಸ್ರೇಲ್‌ ಜೊತೆ ಸ್ನೇಹಸಂಬಂಧಗಳು ಆರಂಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸಿಕೊಳ್ಳುತ್ತಿದೆ. ಇದೀಗ ಇಸ್ರೇಲ್‌, ಬಹ್ರೇನ್‌ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿವೆ ಈ ಮೂಲಕ ಸ್ನೇಹ ಸಂಬಂಧಕ್ಕೆ ಚಾಲನೆ ನೀಡಿವೆ.
Vijaya Karnataka Web 1500x500


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಉಪಸ್ಥಿತಿಯಲ್ಲಿ ಇಸ್ರೇಲ್‌, ಬಹ್ರೇನ್‌ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ನಡುವೆ ಶಾಂತಿ ಒಪ್ಪಂದಗಳಿಗೆ ಚಾಲನೆ ದೊರೆಯಿತು. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು, ಬಹ್ರೇನ್‌ ವಿದೇಶಾಂಗ ಸಚಿವ ಅಬ್ದುಲ್ಲಾತಿಫ್‌ ಬಿನ್‌ ರಷೀದ್ ಅಲ್‌ ಝಯಾದಿ ಹಾಗೂ ಯುಎಐ ದೊರೆ ಮೊಹಮ್ಮದ್ ಬಿನ್‌ ಝೈದ್‌ ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕಿದರು. ಇಂಗ್ಲಿಷ್‌, ಅರಾಬಿಕ್‌ ಹಾಗೂ ಹೀಬ್ರೂ ಮೂರೂ ಭಾಷೆಗಳಲ್ಲಿದ್ದ ಒಪ್ಪಂದಗಳಿಗೆ ಮೂರೂ ರಾಷ್ಟ್ರಗಳ ಪ್ರತಿನಿಧಿಗಳು ಸಹಿ ಮಾಡಿದರು. ಇದಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಶ್ವೇತಭವನ ಸಾಕ್ಷಿಯಾಯಿತು.

ಅರಬ್‌ ಜೊತೆ ಸ್ನೇಹ ಅಷ್ಟಕಷ್ಟೆ!
ಗಲ್ಫ್ ರಾಷ್ಟ್ರಗಳಾದ ಬಹ್ರೇನ್‌ ಮತ್ತು ಯುಎಇ ಅಬ್ರಹಾಂ ಒಪ್ಪಂದ ಸಹಿ ಮಾಡುವ ಮೂಲಕ ಈಜಿಪ್ಟ್‌ ಮತ್ತು ಜೋರ್ಡಾನ್ ಸಾಲಿಗೆ ಸೇರ್ಪಡೆಯಾಗಿವೆ. ಅರಬ್‌ ರಾಷ್ಟ್ರಗಳ ಪೈಕಿ ಆ ಎರಡು ರಾಷ್ಟ್ರಗಳು ಮಾತ್ರವೇ ಇಸ್ರೇಲ್‌ನೊಂದಿಗೆ ಸಂಪೂರ್ಣ ರಾಜತಾಂತ್ರಿಕ ಸಂಬಂಧ ಹೊಂದಿವೆ.

ರಷ್ಯಾ: ಎಸ್‌ಸಿಒ ಶೃಂಗ ಸಭೆಯಿಂದ ಹೊರ ನಡೆದ ಅಜಿತ್‌ ದೋವಲ್‌, ಪಾಕ್‌ನ ಭೂಪಟದ ಕ್ಯಾತೆಗೆ ಬಹಿಷ್ಕಾರದ ಅಸ್ತ್ರ!

ಈಜಿಪ್ಟ್‌ 1971 ರಲ್ಲಿ ಇಸ್ರೇಲ್‌ ಜತೆ ಒಪ್ಪಂದ ಮಾಡಿಕೊಂಡಿದ್ದರೆ, ಜೋರ್ಡಾನ್‌ 1994 ರಲ್ಲಿ ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಆ ಬಳಿಕ ಯಾವುದೇ ಅರಬ್‌ ರಾಷ್ಟ್ರ ಇಸ್ರೇಲ್‌ ಜತೆ ಒಪ್ಪಂದ ಮಾಡಿಕೊಂಡಿರಲಿಲ್ಲ. ಇನ್ನು ಈ ಎರಡು ದೇಶಗಳು ಸಂಬಂಧ ಬೆಳೆಸಲು ಮುಂದಾಗಿರುವ ಕ್ರಮವನ್ನು ಶ್ಲಾಘಿಸಿರುವ ಡೊನಾಲ್ಡ್‌ ಟ್ರಂಪ್‌, ಇತರೆ ಅರಬ್‌ ಹಾಗೂ ಮುಸ್ಲಿಂ ರಾಷ್ಟ್ರಗಳೂ ಸಹ ಯುಎಇಯ ನಿಲುವು ಮುಂದುವರಿಸುವಂತೆ ಕರೆ ನೀಡಿದರು.

ಇನ್ನು ಈ ಒಪ್ಪಂದದ ಪ್ರಕಾರ ಈ ಮೂರು ದೇಶಗಳು ಪರಸ್ಪರ ರಾಜತಾಂತ್ರಿಕ ಕಚೇರಿಗಳನ್ನು ತೆರೆಯಲಿವೆ, ಪರಸ್ಪರ ರಾಯಭಾರಿಗಳನ್ನು ನೇಮಕ ಮಾಡಲಿದ್ದಾರೆ. ಅಲ್ಲದೆ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಇನ್ನು ಪ್ಯಾಲೇಸ್ತೇನ್‌ ಈ ಒಪ್ಪಂದವನ್ನು ವಿರೋಧಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ