ಆ್ಯಪ್ನಗರ

ಫೆ.11ರಂದು ಭಾರತಕ್ಕೆ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಭೇಟಿ

ನೆತನ್ಯಾಹು ಅವರು ಫೆ.11ರಂದು ಹೊಸದಿಲ್ಲಿಗೆ ಆಗಮಿಸಲಿದ್ದು, ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದೇ ತಿಂಗಳು ಇಸ್ರೇಲ್‌ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೀರ್‌ ಬೆನ್‌-ಶಬ್ಬತ್‌ ಅವರು ಹೊಸದಿಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ನಾಯಕರು ಫೋನ್‌ ಮೂಲಕ ಮಾತುಕತೆ ನಡೆಸಿದ್ದರು.

Vijaya Karnataka Web 31 Jan 2019, 5:00 am
ಜೆರುಸಲೇಮ್‌: ಒಂದು ದಿನದ ಪ್ರವಾಸಕ್ಕಾಗಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಫೆಬ್ರವರಿ 11ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ನೆತನ್ಯಾಹು ಅವರ ಎರಡನೇ ಭಾರತ ಭೇಟಿ ಇದಾಗಿದೆ.
Vijaya Karnataka Web netanyahu

2018ರ ಜನವರಿಯಲ್ಲಿ ಅವರು ಹೊಸದಿಲ್ಲಿಗೆ ಆಗಮಿಸಿದ್ದರು. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ ಪ್ರವಾಸ ಕೈಗೊಳ್ಳುವ ಮೂಲಕ ಯಹೂದಿಯರ ರಾಷ್ಟ್ರಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎನಿಸಿಕೊಂಡರು.

ನೆತನ್ಯಾಹು ಅವರು ಫೆ.11ರಂದು ಹೊಸದಿಲ್ಲಿಗೆ ಆಗಮಿಸಲಿದ್ದು, ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದೇ ತಿಂಗಳು ಇಸ್ರೇಲ್‌ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೀರ್‌ ಬೆನ್‌-ಶಬ್ಬತ್‌ ಅವರು ಹೊಸದಿಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ನಾಯಕರು ಫೋನ್‌ ಮೂಲಕ ಮಾತುಕತೆ ನಡೆಸಿದ್ದರು.

ಏಪ್ರಿಲ್‌ 9ರಂದು ಇಸ್ರೇಲ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಿಗದಿಯಾಗಿದ್ದು, ಇದಕ್ಕೆ ಕೆಲವು ತಿಂಗಳ ಮೊದಲು ನೆತನ್ಯಾಹು ಭಾರತಕ್ಕೆ ಆಗಮಿಸುತ್ತಿದ್ದಾರೆ. ಸತತವಾಗಿ ನಾಲ್ಕನೇ ಬಾರಿ ಅಧಿಕಾರದ ಗದ್ದುಗೆ ಏರಲು ನೆತನ್ಯಾಹು ಸಕಲ ರೀತಿಯಲ್ಲಿ ಪ್ರಯತ್ನ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ