ಪ್ಯಾರಿಸ್: ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಬಳಿಕ ತಲೆಮರೆಸಿಕೊಂಡಿದ್ದ ಮಹಾನ್ ಕ್ರಿಮಿನಲ್, ಅನೇಕ ವರ್ಷಗಳ ಬಳಿಕ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆದರೆ ವಿಚಿತ್ರದ ಸಂಗತಿಯೆಂದರೆ ಈತ ಎಲ್ಲರ ನಡುವೆ ಆರಾಮಾಗಿ ಜೀವಿಸುತ್ತಿದ್ದ. ಸ್ಥಳೀಯ ಪತ್ರಿಕೆಯಲ್ಲಿಯೂ ಆತನ ಸಂದರ್ಶನವಿತ್ತು. ಹಾಗಿದ್ದರೂ ಪೊಲೀಸರ ಕೈಗೆ ಆತ ಸಿಕ್ಕಿಕೊಂಡಿರಲಿಲ್ಲ. ಇಟಲಿಯ ಮಾಫಿಯಾ ಕಿಲ್ಲರ್ ಎಡ್ಗರ್ಡೊ ಗ್ರೆಕೋ ಎಂಬ ಚಾಲಾಕಿಯನ್ನು 16 ವರ್ಷಗಳ ಬಳಿಕ ಫ್ರಾನ್ಸ್ನಲ್ಲಿ ಬಂಧಿಸಲಾಗಿದೆ. ವಿಶೇಷವೆಂದರೆ ಈತ ಫ್ರಾನ್ಸ್ನ ಬಹು ಜನಪ್ರಿಯ ರೆಸ್ಟೋರೆಂಟ್ನಲ್ಲಿ ಪಿಜ್ಜಾ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ.
ಇಟಲಿಯ ಅತ್ಯಂತ ನಟೋರಿಯಸ್ ಮಾಫಿಯಾ ಸಂಘಟನೆಗಳಲ್ಲಿ ಒಂದೆನಿಸಿದ 'ನಡ್ರಂಘೆಟಾ'ದ ಸದಸ್ಯ ಎನ್ನಲಾಗಿರುವ 63 ವರ್ಷದ ಗ್ರೆಕೋನನ್ನು ಫ್ರಾನ್ಸ್ನ ಸೇಂಟ್ ಎಟೀನ್ನೆಯಲ್ಲಿ ಬಂಧಿಸಲಾಗಿದೆ ಎಂದು ಇಂಟರ್ಪೋಲ್ ತಿಳಿಸಿದೆ. ಈ ಹಿಂದೆ ಅನೇಕರನ್ನು ಕೊಲೆ ಮಾಡಿದ್ದ ಗ್ರೆಕೋ, ಬಹು ಅಪಾಯಕಾರಿ ಕ್ರಿಮಿನಲ್ ಎನಿಸಿದ್ದ. ಬಾರ್ಟೊಲೊಮಿಯೋ ಸಹೋದರರ ಕೊಲೆ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಮಾಫಿಯಾ ವಾರ್ ಸಂದರ್ಭದಲ್ಲಿ ಸ್ಟೀಫೆನೋ ಮತ್ತು ಗಿಸೆಪ್ಪೆ ಬಾರ್ಟೊಲೋಮಿಯೋ ಸಹೋದರರನ್ನು 1991ರ ಜನವರಿಯಲ್ಲಿ ಕೊಲೆ ಮಾಡಲಾಗಿತ್ತು. ಕಬ್ಬಿಣದ ರಾಡುಗಳಿಂದ ಅವರನ್ನು ಥಳಿಸಲಾಗಿತ್ತು. ಅವರ ದೇಹಗಳನ್ನು ಆಸಿಡ್ನಲ್ಲಿ ಮುಳುಗಿಸಿ ಕರಗಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಂತರ ಗ್ರೆಕೋ ನಾಪತ್ತೆಯಾಗಿದ್ದ. 2006ರಿಂದಲೂ ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು.
ಪಾಲೋ ಡಿಮಿಟ್ರಿ ಎಂಬ ಹೆಸರಿನಲ್ಲಿ ಫ್ರಾನ್ಸ್ನಲ್ಲಿ ನೆಲೆಯೂರಿದ್ದ ಗ್ರೆಕೋ, ಫ್ರಾನ್ಸ್ನಲ್ಲಿನ ಅನೇಕ ಇಟಾಲಿಯನ್ ರೆಸ್ಟೋರೆಂಟ್ಗಳಲ್ಲಿ ಬಾಣಸಿಗನಾಗಿ ಕೆಲಸ ಮಾಡಿದ್ದ. ಅಷ್ಟೇ ಅಲ್ಲದೆ 2021ರಲ್ಲಿ ಕೆಫೆ ರೋಸಿನಿ ರಿಸ್ಟೋರಂಟೆ ಎಂಬ ಹೆಸರಿನ ರೆಸ್ಟೋರೆಂಟ್ ಅನ್ನು ಆರಂಭಿಸಿದ್ದ. ಇದು ಸ್ಥಳೀಯ ಪತ್ರಿಕೆಗಳಲ್ಲಿ ವರದಿಯಾಗಿತ್ತು.