ಆ್ಯಪ್ನಗರ

ಖಶೋಗಿ ದೇಹವನ್ನು ಆಸಿಡ್‌ನಲ್ಲಿ ಕರಗಿಸಿ, ಚರಂಡಿಗೆ ಎಸೆದ ಹಂತಕರು

ಇಸ್ತಾನ್‌ಬುಲ್‌ನಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿನ ಚರಂಡಿಯಿಂದ ಸಂಗ್ರಹಿಸಲಾದ ಅವಶೇಷಗಳಲ್ಲಿ ಆ್ಯಸಿಡ್‌ ಅಂಶವಿರುವುದು ಪತ್ತೆಯಾಗಿದೆ. ಖಶೋಗಿ ಅವರ ದೇಹವನ್ನು ಆ್ಯಸಿಡ್‌ನಿಂದ ಕರಗಿಸಿ, ಚರಂಡಿಗೆ ಹಾಕಲಾಗಿದೆ

Vijaya Karnataka 11 Nov 2018, 9:10 am
ಅಂಕಾರಾ: ನಿಗೂಢವಾಗಿ ಮೃತಪಟ್ಟ ಸೌದಿ ಪತ್ರಕರ್ತ ಜಮಾಲ್‌ ಖಶೋಗಿ ಅವರ ದೇಹವನ್ನು ಹಂತಕರು ಆ್ಯಸಿಡ್‌ನಲ್ಲಿ ಕರಗಿಸಿ, ಚರಂಡಿಗೆ ಎಸೆದಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಟರ್ಕಿ ಪತ್ರಿಕೆಯೊಂದು ವರದಿ ಮಾಡಿದೆ.
Vijaya Karnataka Web Khashogi


ಇಸ್ತಾನ್‌ಬುಲ್‌ನಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿನ ಚರಂಡಿಯಿಂದ ಸಂಗ್ರಹಿಸಲಾದ ಅವಶೇಷಗಳಲ್ಲಿ ಆ್ಯಸಿಡ್‌ ಅಂಶವಿರುವುದು ಪತ್ತೆಯಾಗಿದೆ. ಖಶೋಗಿ ಅವರ ದೇಹವನ್ನು ಆ್ಯಸಿಡ್‌ನಿಂದ ಕರಗಿಸಿ, ಚರಂಡಿಗೆ ಹಾಕಲಾಗಿದೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ ಎಂದು 'ಸಬಾಹ್‌' ಪತ್ರಿಕೆ ವರದಿ ಮಾಡಿದೆ. ಈ ನಡುವೆ ಟ್ವೀಟ್‌ ಮಾಡಿರುವ ಖಶೋಗಿ ಅವರ ಪ್ರೇಯಸಿ ಹ್ಯಾಟಿಸ್‌ ಸೆಂಜಿಜ್‌, ''ಜಮಾಲ್‌, ನಿನ್ನ ದೇಹವನ್ನು ಆಸಿಡ್‌ನಲ್ಲಿ ಕರಗಿಸಿರುವ ಸುದ್ದಿ ಕೇಳಿ ದುಃಖ ಉಮ್ಮಳಿಸಿದೆ. ನಿನ್ನನ್ನು ಕೊಲೆ ಮಾಡಿ, ತುಂಡುಗಳಾಗಿ ಕತ್ತರಿಸುವ ಮೂಲಕ ನಾನು ಮತ್ತು ನಿನ್ನ ಕುಟುಂಬ ನಿನ್ನ ಮೃತದೇಹದ ಅಂತಿಮ ಸಂಸ್ಕಾರ ಮಾಡಲೂ ಸಾಧ್ಯವಾಗಲಿಲ್ಲ ಎಂಬ ಬೇಸರ ನನ್ನನ್ನು ಕಾಡುತ್ತಿದೆ,'' ಎಂದು ದುಃಖ ತೋಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ