ಆ್ಯಪ್ನಗರ

ಗೆಳೆಯರೊಂದಿಗೆ ಹೀಗಾ ಮಾತಾಡೋದು?: ಭಾರತ ಕಲುಷಿತ ಎಂದ ಟ್ರಂಪ್‌ಗೆ ಬಿಡೆನ್ ಗುದ್ದು!

ಭಾರತದ ಗಾಳಿ ಕಲುಷಿತವಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಟ್ರಂಪ್ ಹೇಳಿಕೆ ಭಾರತೀಯರನ್ನು ಕೆರಳಿಸಿದ್ದು, ಪ್ರತಿಸ್ಪರ್ಧಿ ಜೋ ಬಿಡೆನ್ ಕೂಡ 'ಗೆಳೆಯರೊಂದಿಗೆ ಮಾತನಾಡುವ ರೀತಿ ಇದಲ್ಲ' ಎನ್ನುವ ಮೂಲಕ ಟ್ರಂಪ್ ಕಾಲೆಳೆದಿದ್ದಾರೆ.

Vijaya Karnataka Web 25 Oct 2020, 9:07 am
ವಾಷಿಂಗ್ಟನ್: ಇತ್ತೀಚಿಗೆ ನಡೆದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವಿನ ಎರಡನೇ ಚರ್ಚೆಯಲ್ಲಿ, ಭಾರತ-ಚೀನಾದ ಗಾಳಿ ಕಲುಷಿತವಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.
Vijaya Karnataka Web Debate
ಸಂಗ್ರಹ ಚಿತ್ರ


ಟ್ರಂಪ್ ಹೇಳಿಕೆಯನ್ನು ಟೀಕಿಸುತ್ತಿರುವ ಭಾರತೀಯರು, ಭಾರತವನ್ನು ಸಾರ್ವಜನಿಕವಾಗಿ ಅಪಮಾನಗೊಳಿಸಿದ ಟ್ರಂಪ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಚೀನಾ, ಭಾರತದ ಗಾಳಿ ಕಲುಷಿತವಾಗಿದೆ: ಬಿಡೆನ್ ಜೊತೆಗಿನ ಮುಖಾಮುಖಿ ಚರ್ಚೆಯಲ್ಲಿ ಟ್ರಂಪ್ ವಿಶ್ಲೇಷಣೆ

ಈ ಮಧ್ಯೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಕೂಡ ಟ್ರಂಪ್ ಹೇಳಿಕೆಯನ್ನು ಖಂಡಿಸಿದ್ದು, ಗೆಳಯರೊಂದಿಗೆ(ಭಾರತ) ಮಾತನಾಡುವ ರೀತಿ ಇದಲ್ಲ ಎಂದು ಟ್ರಂಪ್ ಅವರ ಕಾಲೆಳೆದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಜೋ ಬಿಡೆನ್, ಭಾರತದ ಗಾಳಿ ಕಲುಷಿತ ಎಂದು ಹೇಳುವ ಮೂಲಕ ಟ್ರಂಪ್ ಭಾರತೀಯರ ಮನ ನೋಯಿಸಿದ್ದಾರೆ. ಟ್ರಂಪ್ ಹೇಳಿಕೆ ಭಾರತೀಯರಿಗೆ ನೋವುಂಟು ಮಾಡಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಹೇಳಿದ್ದಾರೆ.


ಗೆಳೆಯರೊಂದಿಗೆ ಹೀಗೆ ಮಾತನಾಡಬಾರದು. ಅಷ್ಟೇ ಅಲ್ಲದೇ ಟ್ರಂಪ್ ಅವರಾಡಿದ ಮಾತುಗಳಿಂದ ಜಾಗತಿಕ ಹವಾಮಾನ ಸಮಸ್ಯೆ ಪರಿಹಾರವೂ ಕಾಣದು ಎಂದು ಜೋ ಬಿಡೆನ್ ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಪ್ರಯಾಸದ ಜಯ?, ಉಭಯ ನಾಯಕರ ಪ್ಲ್ಯಾನ್‌ಗಳು ಏನು?; ಇಲ್ಲಿದೆ ರಿಪೋರ್ಟ್‌

ಅಮೆರಿಕನ್ ಭಾರತೀಯರ ಮನ ಗೆಲ್ಲಲು ಟ್ರಂಪ್ ಅವರ ಹೇಳಿಕೆಯನ್ನೇ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಜೋ ಬಿಡೆನ್, ಭಾರತೀಯರನ್ನು 'ಗೆಳೆಯರು' ಎಂದು ಕರೆಯುವ ಮೂಲಕ ಅಮೆರಿಕನ್ ಭಾರತೀಯ ಸಮುದಾಯಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ