ಆ್ಯಪ್ನಗರ

ಕಾಬುಲ್‌: ಆ್ಯಂಬುಲೆನ್ಸ್‌ನಲ್ಲಿ ಬಾಂಬ್‌ ಸ್ಪೋಟಿಸಿದ ಉಗ್ರರು; 95ಕ್ಕೆ ಏರಿದ ಮೃತರ ಸಂಖ್ಯೆ

ಪೊಲೀಸ್‌ ಚೆಕ್‌ಪೋಸ್ಟ್‌ ಬಳಿ ಉಗ್ರರು ಆ್ಯಂಬುಲೆನ್ಸ್‌ನಲ್ಲಿ ಅಡಗಿಸಿಟ್ಟಿದ್ದ ಬಾಂಬ್‌ ಸ್ಪೋಟಗೊಂಡು ಕನಿಷ್ಠ 95 ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ.

TNN 27 Jan 2018, 7:47 pm
ಕಾಬುಲ್: ಪೊಲೀಸ್‌ ಚೆಕ್‌ಪೋಸ್ಟ್‌ ಬಳಿ ಉಗ್ರರು ಆ್ಯಂಬುಲೆನ್ಸ್‌ನಲ್ಲಿ ಅಡಗಿಸಿಟ್ಟಿದ್ದ ಬಾಂಬ್‌ ಸ್ಪೋಟಗೊಂಡು ಮೃತಪಟ್ಟವರ ಸಂಖ್ಯೆ 95ಕ್ಕೆ ಏರಿದ್ದು ಘಟನೆಯಲ್ಲಿ ಇತರ 158ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Vijaya Karnataka Web kabul 40 killed 140 injured in car bomb blast near embassies
ಕಾಬುಲ್‌: ಆ್ಯಂಬುಲೆನ್ಸ್‌ನಲ್ಲಿ ಬಾಂಬ್‌ ಸ್ಪೋಟಿಸಿದ ಉಗ್ರರು; 95ಕ್ಕೆ ಏರಿದ ಮೃತರ ಸಂಖ್ಯೆ


ವಿದೇಶಿ ರಾಯಭಾರ ಕಚೇರಿ ಬಳಿ ನಡೆದ ಬಾಂಬ್‌ ಸ್ಪೋಟದ ಹೊಣೆಯನ್ನು ತಾಲಿಬಾನ್​ ಸಂಘಟನೆ ಹೊತ್ತುಕೊಂಡಿದೆ ಎಂದು ಆಫ್ಘನ್​ ಸರ್ಕಾರ ತಿಳಿಸಿದೆ.

ಆತ್ಮಾಹುತಿ ಬಾಂಬರ್​ ಆಂಬ್ಯುಲೆನ್ಸ್​ನಲ್ಲಿ ಬಂದು ಮೊದಲ ಚೆಕ್​ಪೋಸ್ಟ್​ ದಾಟಿ ನಗರದೊಳಗೆ ಬಂದಿದ್ದಾನೆ, ಬಳಿಕ ಹೈ ಪೀಸ್ ಕೌನ್ಸಿಲ್ ಕಚೇರಿ ಹಾಗೂ ಹಲವು ವಿದೇಶಿ ದೂತಾವಾಸಗಳ ಕಚೇರಿ ಬಳಿ ತನ್ನನ್ನು ಸ್ಪೋಟಿಸಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಮೀರ್ವಾಯಿಸ್ ಯಾಸಿನ್ ಹೇಳಿದ್ದಾರೆ.

ಘಟನೆ ಬಳಿಕ ಹಲವಾರು ಮಂದಿ ಗಾಯಗೊಂಡು ಕೆಳಕ್ಕೆ ಬಿದ್ದು ಹೊರಳಾಡುತ್ತಿದ್ದರು, ಇವರ ರಕ್ಷಣೆಗೆ ಸಾರ್ವಜನಿಕರೇ ಮುಂದಾಗಿದ್ದಾರೆ, ಅಲ್ಲದೇ ಘಟನೆಯಿಂದ ಟ್ರಾಫಿಕ್‌ ದಟ್ಟಣೆ ಹೆಚ್ಚಾದ ಪರಿಣಾಮ ಆ್ಯಂಬುಲೆನ್ಸ್‌ಗಳು ದಾರಿ ಮಧ್ಯೆಯೇ ನಿಂತಿವೆ ಎಂದು ಯಾಸಿನ್‌ ಹೇಳಿದ್ದಾರೆ.

ಕಳೆದ ವಾರ ಉಗ್ರರು ಕಾಬುಲ್​ನ ಇಂಟರ್​ ಕಾಂಟಿನೆಂಟಲ್​ ಹೋಟೆಲ್​ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 20 ಜನರು ಮೃತಪಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ