ಆ್ಯಪ್ನಗರ

ಕಾಶ್ಮೀರಿ ಪಂಡಿತರಿಂದ ಮೋದಿಗೆ ಕೃತಜ್ಞತೆ ಸಲ್ಲಿಕೆ

ನಿಯೋಗದ ಸದಸ್ಯರೊಬ್ಬರು ಪ್ರಧಾನಿ ಮೋದಿ ಅವರ ಕೈಹಿಡಿದು ಭಾವುಕರಾಗಿ ಮುತ್ತಿಕ್ಕಿದ್ದು ವಿಶೇಷವಾಗಿತ್ತು.

PTI 23 Sep 2019, 5:00 am
ಹ್ಯೂಸ್ಟನ್‌: 17 ಸದಸ್ಯರ ಕಾಶ್ಮೀರಿ ಪಂಡಿತರ ನಿಯೋಗವು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹ್ಯೂಸ್ಟನ್‌ನಲ್ಲಿಭೇಟಿ ಮಾಡಿ ಜಮ್ಮು-ಕಾಶ್ಮೀರದಲ್ಲಿ370ನೇ ವಿಧಿ ರದ್ದತಿಗಾಗಿ ಧನ್ಯವಾದ ಸಲ್ಲಿಸಿತು. ನಿಯೋಗದ ಸದಸ್ಯರೊಬ್ಬರು ಪ್ರಧಾನಿ ಮೋದಿ ಅವರ ಕೈಹಿಡಿದು ಭಾವುಕರಾಗಿ ಮುತ್ತಿಕ್ಕಿದ್ದು ವಿಶೇಷವಾಗಿತ್ತು. ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿದ ಪ್ರಧಾನಿ, ''ನೀವುಗಳು 30 ವರ್ಷ ತೋರಿದ ಸಹನೆಗೆ ಧನ್ಯವಾದ. ಕಾಶ್ಮೀರದಲ್ಲಿಸದ್ಯ ಹೊಸತನದ ಗಾಳಿ ಬೀಸುತ್ತಿದೆ. ಎಲ್ಲರಿಗಾಗಿ ನವ ಕಾಶ್ಮೀರವನ್ನು ನಿರ್ಮಿಸೋಣ ಬನ್ನಿ,'' ಎಂದರು.
Vijaya Karnataka Web MODI_PANDIT


ಶ್ಲೋಕಪಠಣ: ಇದೇ ವೇಳೆ ನಿಯೋಗದ ಸದಸ್ಯರೊಬ್ಬರು ಶಾರದಾ ದೇವಿಯ ಶ್ಲೋಕ ಪಠಿಸೋಣ ಎಂದು ಪ್ರಧಾನಿ ಅವರಲ್ಲಿಮನವಿ ಮಾಡಿದರು. ಇದಕ್ಕೆ ಒಪ್ಪಿದ ಪ್ರಧಾನಿ ಮೋದಿ, '' ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ.....'' ಶ್ಲೋಕವನ್ನು ಪಂಡಿತರೊಂದಿಗೆ ಪಠಿಸಿದರು. ಶ್ಲೋಕದ ಕೊನೆಯಲ್ಲಿನಮೋ ನಮಃ ಎಂದು ಬಂದಾಗ ಪ್ರಧಾನಿ ಮೋದಿ ಅವರು, '' ನೋಡಿ ಇಲ್ಲಿಯೂ ಮತ್ತೆ ನಮೋ ನಮಃ '' ಬಂದಿದೆ ಎನ್ನುತ್ತಾ ತಮ್ಮನ್ನು ಪ್ರೀತಿಯಿಂದ ಜನರು ಕರೆಯುವ 'ನಮೋ' ಪದವನ್ನು ಉಲ್ಲೇಖಿಸಿ ಹಾಸ್ಯಚಟಾಕಿ ಹಾರಿಸಿದರು. 370ನೇ ವಿಧಿ ರದ್ದುಗೊಂಡಾಗ ಜಮ್ಮು ಮತ್ತು ಕಾಶ್ಮೀರದಲ್ಲಿನ ಶಾರದಾ ಪೀಠದ ಜೀರ್ಣೋದ್ಧಾರಕ್ಕಾಗಿ ಒತ್ತಾಯ ಕೇಳಿಬಂದಿತ್ತು.

ಸಿಖ್ಖರಿಂದ ಧನ್ಯವಾದ: ಅಮೆರಿಕದ ವಿವಿಧ ಭಾಗಗಳಿಂದ ಆಗಮಿಸಿದ 50 ಜನರ ಸಿಖ್‌ ನಿಯೋಗ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ತಮ್ಮ ಸಮುದಾಯದ 300 ಸದಸ್ಯರನ್ನು ಕಪ್ಪುಪಟ್ಟಿಯಿಂದ ತೆರವುಗೊಳಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿತು. ವಿದೇಶಗಳಲ್ಲಿನೆಲೆಸಿ ಭಾರತ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ 312 ಮಂದಿ ಸಿಖ್ಖರನ್ನು ಹಲವು ವರ್ಷಗಳಿಂದ ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಇವರ ಬಗ್ಗೆ ಕಳೆದ ವಾರ ತನಿಖಾ ಸಂಸ್ಥೆಗಳ ಮೂಲಕ ತಾಜಾ ವರದಿ ಪಡೆದ ಮೋದಿ ಸರಕಾರ, ಅಷ್ಟೂ ಮಂದಿ ವಿರುದ್ಧದ ಕಪ್ಪುಪಟ್ಟಿಯನ್ನು ತೆರವುಗೊಳಿಸಿತ್ತು. ಇದೇ ವೇಳೆ, ಅಮೆರಿಕದಲ್ಲಿನ ಸಿಖ್‌ ರಾಜಕೀಯ ಆಶ್ರಿತರಿಗೆ ವೀಸಾ ಮತ್ತು ಪಾಸ್‌ ಪೋರ್ಟ್‌ ಸೇವೆ ಒದಗಿಸುವಂತೆ ಸಿಖ್‌ ನಿಯೋಗ ಪ್ರಧಾನಿ ಅವರನ್ನು ಕೋರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ