ಆ್ಯಪ್ನಗರ

ಅಪನಂಬಿಕೆ ಬಿತ್ತುವುದನ್ನು ನಿಲ್ಲಿಸಿ: ಮೈಕ್ ಪಾಂಪಿಯೋ ಭಾರತ ಭೇಟಿಯನ್ನು ಟೀಕಿಸಿದ ಚೀನಾ!

ಭಾರತ-ಅಮೆರಿಕ ನಡುವಿನ ಮೂರನೇ ವಾರ್ಷಿಕ 2+2 ಸಚಿವರ ಮಟ್ಟದ ಮಾತುಕತೆ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾ, ಮೈಕ್ ಪಾಂಪಿಯೋ ಚೀನಾ ವಿರುದ್ಧ ಅಪನಂಬಿಕೆ ಬಿತ್ತಲೆಂದೇ ಭಾರತ ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ ಎಂದು ಕಿಡಿಕಾರಿದೆ.

Vijaya Karnataka Web 27 Oct 2020, 5:38 pm
ಬೀಜಿಂಗ್: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರ ಭಾರತ ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರಗಳ ಭೇಟಿಯನ್ನು ಚೀನಾ ಕಟು ಶಬ್ಧಗಳಲ್ಲಿ ಟೀಕಿಸಿದೆ.
Vijaya Karnataka Web Wang Wenbin
ಸಂಗ್ರಹ ಚಿತ್ರ


ಭಾರತ-ಅಮೆರಿಕ ನಡುವಿನ ಮೂರನೇ ವಾರ್ಷಿಕ 2+2 ಸಚಿವರ ಮಟ್ಟದ ಮಾತುಕತೆ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾ, ಮೈಕ್ ಪಾಂಪಿಯೋ ಚೀನಾ ವಿರುದ್ಧ ಅಪನಂಬಿಕೆ ಬಿತ್ತಲೆಂದೇ ಭಾರತ ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ ಎಂದು ಕಿಡಿಕಾರಿದೆ.

ಮೈಕ್ ಪಾಂಪಿಯೋ ಅವರ ಭೇಟಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಚೀನಾದ ವಿದೇಶಾಂಗ ಇಲಾಖೆ ವಕ್ತಾರೆ ವಾಂಗ್ ವೆನ್‌ಬಿನ್, ದಕ್ಷಿಣ ಏಷ್ಯಾದ ನೆರೆಯ ದೇಶಗಳಲ್ಲಿ ಚೀನಾದ ಕುರಿತು ಅಪನಂಬಿಕೆ ಬಿತ್ತುವ ಅಮೆರಿಕದ ಪ್ರಯತ್ನದ ಭಾಗವಾಗಿ ಮೈಕ್ ಪಾಂಪಿಯೋ ಭೇಟಿ ನೀಡಿದ್ದಾರೆ ಎಂದು ಆಪಾದಿಸಿದ್ದಾರೆ.

ಚೀನಾದ ಎದೆ ನಡುಗಿಸಿದ ದಿಗ್ಗಜರ ಸಮಾಗಮ: ಪ್ರಧಾನಿ ಮೋದಿ ಸುತ್ತ ಪ್ರಜಾಪ್ರಭುತ್ವ ರಕ್ಷಕರು!

ಚೀನಾದ ವಿರುದ್ಧ ಮೈಕ್ ಪಾಂಪಿಯೋ ಸುಳ್ಳು ಪ್ರಚಾರಾಗಳನ್ನು ಹಬ್ಬಿಸುತ್ತಿರುವುದು ಇದೇ ಮೊದಲೇನಲ್ಲ. ಅಲ್ಲದೇ ಚೀನಾ ಇಂತಹ ಪ್ರಯತ್ನಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ವಾಂಗ್ ವೆನ್‌ಬಿನ್ ಹೇಳಿದ್ದಾರೆ.

ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾದ ರಾಷ್ಟ್ರಗಳೊಂದಿಗೆ ಚೀನಾ ಘನಿಷ್ಠ ಸಂಬಂಧವನ್ನು ಹೊಂದಿದ್ದು, ಈ ಸಂಬಂಧವನ್ನು ಹಾಳು ಮಾಡಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ವಾಂಗ್ ವೆನ್‌ಬಿನ್ ಹರಿಹಾಯ್ದರು.

ಪ್ರಜಾಪ್ರಭುತ್ವ ವಿರೋಧಿ ಕಮ್ಯೂನಿಸ್ಟ್ ಚೀನಾ ವಿರುದ್ಧ ಭಾರತ-ಅಮೆರಿಕ ಒಂದಾಗಿವೆ: ಪಾಂಪಿಯೋ!

ಮಾರಕ ಕೊರೊನಾ ವೈರಸ್ ಹಾವಳಿಯ ಬಳಿಕ ಚೀನಾದ ವಿರುದ್ಧ ಅಮೆರಿಕ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದ್ದು, ಚೀನಾದ ಸೈನ್ಯ ಶಕ್ತಿಗೆ ಪ್ರತಿಯಾಗಿ ಜಾಗತಿಕ ಸಾಮರಿಕ ಒಕ್ಕೂಟ ರಚಿಸುವುದರಲ್ಲಿ ನಿರತವಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ