ಆ್ಯಪ್ನಗರ

ಕಮಲಾ ಹ್ಯಾರಿಸ್‌ಗೂ ಮುನ್ನ ಭಾರತದ ನಮ್ಮ ತಾಯಿ ಬಗ್ಗೆ ತಿಳಿಯಿರಿ: ಸಹೋದರಿ ಮಾಯಾ ಭಾವನಾತ್ಮಕ ಟ್ವೀಟ್‌

ಅಮೆರಿಕದ ಉಪಾಧ್ಯಕ್ಷ ಚುನಾವಣೆಗೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯನ್ನಾಗಿ ಭಾರತೀಯ ಮೂಲದ ಕಮಲಾದೇವಿ ಹ್ಯಾರಿಸ್ ಅವರು ಆಯ್ಕೆಯಾಗಿದ್ದಾರೆ. ಅದರ ಬೆನ್ನಲ್ಲಿಯೇ ಹ್ಯಾರಿಸ್‌ ಅವರ ಸಹೋದರಿ ಮಾಯಾ ಹ್ಯಾರಿಸ್‌ ತಮ್ಮ ತಾಯಿ ಬಗ್ಗೆ ಭಾವನಾತ್ಮಕ ವಿಡಿಯೋ ಒಂದನ್ನು ಟ್ವೀಟ್‌ ಮಾಡಿ ಅವರ ಬಗ್ಗೆ ಮೊದಲು ತಿಳಿಯಿರಿ ಎಂದು ಹೇಳಿದ್ದಾರೆ.

Agencies 12 Aug 2020, 4:53 pm
ವಾಷಿಂಗ್‌ಟನ್‌: ಅಮೆರಿಕದ ಉಪಾಧ್ಯಕ್ಷ ಚುನಾವಣೆಗೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯನ್ನಾಗಿ ಭಾರತೀಯ ಮೂಲದ ಕಮಲಾದೇವಿ ಹ್ಯಾರಿಸ್ ಅವರನ್ನು ಆಯ್ಕೆ ಮಾಡಿದ ಬೆನ್ನಲ್ಲಿಯೇ ಹ್ಯಾರಿಸ್‌ ಅವರ ಸಹೋದರಿ ಮಾಯಾ ಹ್ಯಾರಿಸ್‌ ತಮ್ಮ ತಾಯಿ ಬಗ್ಗೆ ಭಾವನಾತ್ಮಕ ವಿಡಿಯೋ ಒಂದನ್ನು ಟ್ವೀಟ್‌ ಮಾಡಿದ್ದು, ಇದೆಲ್ಲವನ್ನು ಸಾಧ್ಯವಾಗಿಸಿದ ಮಹಿಳೆ ಎಂದು ಪರಿಚಯಿಸಿದ್ದಾರೆ.
Vijaya Karnataka Web know our mother ancestors are smiling today says kamala harriss sister
ಕಮಲಾ ಹ್ಯಾರಿಸ್‌ಗೂ ಮುನ್ನ ಭಾರತದ ನಮ್ಮ ತಾಯಿ ಬಗ್ಗೆ ತಿಳಿಯಿರಿ: ಸಹೋದರಿ ಮಾಯಾ ಭಾವನಾತ್ಮಕ ಟ್ವೀಟ್‌


ಕಮಲಾ ಹ್ಯಾರಿಸ್‌ ಅಮೆರಿಕದ ಉಪಾಧ್ಯಕ್ಷ ಸ್ಥಾನಸ ಅಭ್ಯರ್ಥಿಯಾಗಿ ಆಯ್ಕೆಯಾದ ಮೊದಲ ಏಷ್ಯನ್-ಅಮೆರಿಕನ್ ಮಹಿಳೆಯಾಗಿದ್ದಾರೆ. ಹ್ಯಾರಿಸ್‌ ಸಹೋದರಿ ಮಾಯಾ ಹ್ಯಾರಿಸ್‌ ತಮ್ಮ ಟ್ವೀಟ್‌ನಲ್ಲಿ ನಮ್ಮ ತಾಯಿ ಯಾರೆಂದು ತಿಳಿಯದೆ ಕಮಲಾ ಹ್ಯಾರಿಸ್ ಯಾರೆಂದು ನಿಮಗೆ ತಿಳಿಯಲು ಸಾಧ್ಯವಿಲ್ಲ. ಅವರನ್ನು ಬಹಳಷ್ಟು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ. ಆದರೆ, ಅವರು ಮತ್ತು ನಮ್ಮ ಪೂರ್ವಜರು ಇಂದು ನಗುತ್ತಿದ್ದಾರೆಂದು ಗೊತ್ತಿದೆ ಎಂದು ಹೇಳಿದ್ದಾರೆ.


ಭಾರತ ಮೂಲದ ಕಮಲಾ ಅಮೆರಿಕದಲ್ಲಿ ಸೆನೆಟ್‌ ಆಗಿ ಸೇವೆ ಸಲ್ಲಿಸಿದಿ ಮೊದಲ ದಕ್ಷಿಣ ಏಷ್ಯಾ-ಅಮೆರಿಕನ್‌ ಮಹಿಳೆ ಮತ್ತು ಎರಡನೇ ಕಪ್ಪು ಮಹಿಳೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕ ಇತಿಹಾಸದಲ್ಲಿ ಅಧ್ಯಕ್ಷೀಯ ಸ್ಥಾನಗಳಲ್ಲಿ ಒಂದಕ್ಕೆ ಅಭ್ಯರ್ಥಿಯಾಗಿ ಆಯ್ಕೆಯಾದ ನಾಲ್ಕನೇ ಮಹಿಳೆ ಎಂದು ಹೇಳಲಾಗಿದೆ.

ಅಮೆರಿಕ ಉಪಾಧ್ಯಕ್ಷ ಚುನಾವಣೆಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಆಯ್ಕೆ: ಡೆಮಾಕ್ರಾಟ್ಸ್ ಜಾಣ ನಡೆ!

ಐತಿಹಾಸಿಕ ನಿರ್ಣಯವನ್ನು ಸ್ಮರಣೀಯವಾಗಿಸಲು, ಕಮಲಾ ಹ್ಯಾರಿಸ್ ಅವರ ಸಹೋದರಿ ಕ್ಯಾಲಿಫೋರ್ನಿಯಾ ಸೆನೆಟರ್ ಅವರ ಚಿತ್ರಗಳ ಕೋಲಾಜ್‌ ಹಂಚಿಕೊಂಡಿದ್ದಾರೆ. ಕಮಲಾ ಹ್ಯಾರಿಸ್‌ ಒಂದು ಭಾಷಣದಲ್ಲಿ ತಮ್ಮ ತಾಯಿ ವಿಜ್ಞಾನ ಅಧ್ಯಯನ ಮಾಡಲು ಚೆನ್ನೈನಿಂದ ಅಮೆರಿಕಕ್ಕೆ ವಲಸೆ ಬಂದಿದ್ದ ಘಟನೆಯನ್ನು ಹಂಚಿಕೊಂಡಿರುವುದು ಕೂಡ ಮಾಯಾ ಅವರು ಹಂಚಿಕೊಂಡ ವಿಡಿಯೋದಲ್ಲಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಬೆಂಬಲಿಸಿದ ಒಬಾಮಾ: ಕಣ್ಣು ಕೆಂಪಾಗಿಸಿದ ಟ್ರಂಪ್!

ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್‌, ಬುಧವಾರ ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದರು. ಡೊನಾಲ್ಡ್‌ ಟ್ರಂಪ್‌ ಅವರನ್ನು ಒಟ್ಟಾಗಿ ಸೋಲಿಸೋಣ ಎಂದು ಜೋ ಬಿಡೆನ್‌ ಹೇಳಿದ್ದರು.

ಅಧಿಕಾರಕ್ಕೆ ಬಂದರೆ H-1B ವೀಸಾ ರದ್ದತಿ ಆದೇಶ ಹಿಂಪಡೆಯುವುದಾಗಿ ಹೇಳಿದ ಜೋ ಬಿಡೆನ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ