ಆ್ಯಪ್ನಗರ

ಪಾಕ್ ಸಹಿತ 5 ಮುಸ್ಲಿಂ ದೇಶಗಳ ವಲಸಿಗರ ಮೇಲೆ ಕುವೈತ್‌ ನಿಷೇಧ

ಪಾಕಿಸ್ತಾನವನ್ನು ಸೇರಿ ಐದು ಮುಸ್ಲಿಂ ರಾಷ್ಟ್ರಗಳ ವೀಸಾವನ್ನು ಕುವೈತ್‌ ನಿಷೇಧಿಸಿದೆ.

ಟೈಮ್ಸ್ ಆಫ್ ಇಂಡಿಯಾ 2 Feb 2017, 6:42 pm
ಕುವೈತ್‌ : ಏಳು ಮುಸ್ಲಿಂ ರಾಷ್ಟ್ರಗಳ ವಲಸಿಗರ ಮೇಲೆ ಅಮೆರಿಕ ನಿಷೇಧ ಹೇರಿದ ಬಳಿಕ, ಇದೀಗ ಪಾಕಿಸ್ತಾನವನ್ನೂ ಸೇರಿ ಐದು ಮುಸ್ಲಿಂ ರಾಷ್ಟ್ರಗಳಿಗೆ ವೀಸಾವನ್ನು ಕುವೈತ್‌ ನಿಷೇಧಿಸಿದೆ.
Vijaya Karnataka Web kuwait bans visa for 5 muslim majority nations including pakistan
ಪಾಕ್ ಸಹಿತ 5 ಮುಸ್ಲಿಂ ದೇಶಗಳ ವಲಸಿಗರ ಮೇಲೆ ಕುವೈತ್‌ ನಿಷೇಧ


ಪಾಕಿಸ್ತಾನ, ಸಿರಿಯಾ, ಇರಾಕ್, ಆಫ್ಘಾನಿಸ್ತಾನ ಮತ್ತು ಇರಾನ್ ರಾಷ್ಟ್ರಗಳ ನಾಗರಿಕರಿಗೆ ವೀಸಾ ನೀಡುವುದನ್ನು ಕುವೈತ್ ನಿಷೇಧಿಸಿದೆ. ಇದು ಇಸ್ಲಾಮಿಕ್ ಉಗ್ರಗಾಮಿಗಳು ವಲಸೆ ಬರುವುದನ್ನು ತಡೆಯುವ ಕ್ರಮವಾಗಿದೆ ಎಂದು ಸ್ಪಟನಿಕ್ ಇಂಟರ್ನ್ಯಾಷನಲ್ ವರದಿ ಮಾಡಿದೆ.

ಕಳೆದ ಶುಕ್ರವಾರ ಏಳು ಪ್ರಮುಖ ಮುಸ್ಲಿಂ ರಾಷ್ಟ್ರಗಳಿಂದ ವಲಸೆ ನಿಷೇಧಿಸಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದರು. ಇದಕ್ಕೂ ಮುನ್ನ 2011ರಲ್ಲಿ ಕುವೈತ್‌, ಸಿರಿಯಾ ದೇಶದ ಜನತೆಗೆ ವೀಸಾ ನಿರಾಕರಿಸಿ ಆದೇಶಿಸಿತ್ತು.

ಅಮೆರಿಕಕ್ಕೆ ಇರಾಕ್, ಸಿರಿಯಾ, ಇರಾನ್, ಸುಡಾನ್, ಲಿಬಿಯಾ, ಸೋಮಾಲಿಯಾ ಮತ್ತು ಯೆಮೆನ್‌ನಿಂದ ವಲಸೆ ಬರುವ ವಿದೇಶಿಗರಿಗೆ 90 ದಿನಗಳ ಕಾಲ ವೀಸಾ ವಜಾ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ