ಆ್ಯಪ್ನಗರ

ಲಂಕಾ ಸ್ಫೋಟ: ಸೇನೆಯ ಅನುಪಯುಕ್ತ ಕಾರ್ಟ್ರಿಡ್ಜ್‌ ಖರೀದಿಸಿದ್ದ ದಾಳಿಕೋರ

ಇನ್ಸಾಫ್ ಅಹ್ಮದ್ ಎಂಬ ಆತ್ಮಹತ್ಯಾ ದಾಳಿಕೋರ, ಕೈಗಾರಿಕಾ ಅಭಿವೃದ್ಧಿ ಮಂಡಳಿ (ಐಡಿಬಿ) ಮೂಲಕ ಸಣ್ಣ ಉದ್ಯಮಿಗಳಿಗೆ ಒದಗಿಸಲಾಗುವ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದ. ಲಂಕಾ ಸೇನೆ ಅನುಪಯುಕ್ತವೆಂದು ತ್ಯಜಿಸಿದ ಕಾರ್ಟ್ರಿಡ್ಜ್‌ಗಳನ್ನು ಈತ ಪ್ರಭಾವಿ ಅಧಿಕಾರಿಗಳ ಮೂಲಕ ಪಡೆದುಕೊಂಡಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.

Vijaya Karnataka Web 26 Apr 2019, 3:34 pm
ಕೊಲಂಬೋ: ಈಸ್ಟರ್ ಭಾನುವಾರದಂದು ಕೊಲಂಬೋದ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡ ಆತ್ಮಹತ್ಯಾ ಬಾಂಬರ್ ಸೇನೆ ಅನುಪಯುಕ್ತವೆಂದು ವಿಲೇವಾರಿ ಮಾಡಿದ್ದ ಖಾಲಿ ಕಾರ್ಟ್ರಿಡ್ಜ್‌ಗಳನ್ನು ದುಷ್ಕೃತ್ಯಕ್ಕೆ ಬಳಸಿಕೊಂಡಿದ್ದ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
Vijaya Karnataka Web Srilanka Blasts


ಸಿಂಹಳಿ ಭಾಷೆಯ 'ಲಂಕಾದ್ವೀಪ' ಪತ್ರಿಕೆ ಆರ್‌ಟಿಐ ಬಳಸಿ ಪಡೆದ ಮಾಹಿತಿಯಲ್ಲಿ ಈ ವಿಷಯ ಬಹಿರಂಗವಾಗಿದೆ ಎಂದು ಡೈಲಿ ಮಿರರ್ ವರದಿ ಮಾಡಿದೆ.

ಇನ್ಸಾಫ್ ಅಹ್ಮದ್ ಎಂಬ ಆತ್ಮಹತ್ಯಾ ದಾಳಿಕೋರ, ಕೈಗಾರಿಕಾ ಅಭಿವೃದ್ಧಿ ಮಂಡಳಿ (ಐಡಿಬಿ) ಮೂಲಕ ಸಣ್ಣ ಉದ್ಯಮಿಗಳಿಗೆ ಒದಗಿಸಲಾಗುವ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದ. ಲಂಕಾ ಸೇನೆ ಅನುಪಯುಕ್ತವೆಂದು ತ್ಯಜಿಸಿದ ಕಾರ್ಟ್ರಿಡ್ಜ್‌ಗಳನ್ನು ಈತ ಪ್ರಭಾವಿ ಅಧಿಕಾರಿಗಳ ಮೂಲಕ ಪಡೆದುಕೊಂಡಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.

ತನ್ನ ಮಾಲೀಕತ್ವದ ತಾಮ್ರದ ಕಾರ್ಖಾನೆಯಲ್ಲಿ ಉತ್ಪಾದನೆಗಾಗಿ ಈತ ಇಂತಹ ಖರೀದಿಗಳನ್ನು ಮಾಡುತ್ತಿದ್ದ ಎಂದು ಆರ್‌ಟಿಐ ಮಾಹಿತಿ ತಿಳಿಸಿದೆ. ಈಸ್ಟರ್ ಭಾನುವಾರದಂದು ಚರ್ಚ್‌ನಲ್ಲಿ ಸ್ಫೋಟಿಸಲು ಬಳಸಿದ ಬಾಂಬ್‌ಗಳನ್ನು ಈತನ ಕಾರ್ಖಾನೆಯಲ್ಲೇ ನಿರ್ಮಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಅಹ್ಮದ್‌ ಕುಟುಂಬದಲ್ಲಿ ಏಳು ಸೋದರರಿದ್ದಾರೆ. ಅವರಲ್ಲಿ ಒಬ್ಬ ಇಲ್ಹಾಂ ಅಹ್ಮದ್ ಸಿನ್ನಾಮೊನ್ ಗ್ರಾಂಡ್ ಹೋಟೆಲ್ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ. ಬಳಿಕ ದೊರೆತ ಸುಳಿವಿನ ಮೇರೆಗೆ ಮಹಾವಿಲಾ ಗಾರ್ಡನ್‌ನಲ್ಲಿರುವ ಈತನ ಮನೆಗೆ ಭದ್ರತಾ ಪಡೆಗಳು ದಾಳಿ ನಡೆಸುತ್ತಿದ್ದಂತೆ ಒಳಗೆ ಬಾಂಬೊಂದು ಸ್ಫೋಟಿಸಿ ಈತನ ಪತ್ನಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದರು.

ಬಳಿಕ ತಾಮ್ರದ ಫ್ಯಾಕ್ಟರಿಗೆ ದಾಳಿ ಮಾಡಿದ ಪೊಲೀಸರು ಮ್ಯಾನೇಜರ್ ಸೇರಿದಂತೆ 9 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಲಂಕಾ ಸ್ಫೋಟಗಳ ಹಿಂದೆ ಕೇರಳದ ಐಸಿಸ್‌ ಘಟಕಗಳ ಕೈವಾಡ? ಎನ್‌ಐಎ ತನಿಖೆ
ಲಂಕಾ ಸರಣಿ ಸ್ಫೋಟ: ಮೂರು ಮಹಿಳೆಯರು ಸೇರಿದಂತೆ 6 ಶಂಕಿತರ ಫೋಟೋ ಬಿಡುಗಡೆ
ಶ್ರೀಲಂಕಾ ದಾಳಿ ಸಂಚಿನ ಹಿಂದೆ ಶ್ರೀಮಂತ ಸೋದರರು
ಲಂಕಾ ಉಗ್ರರ ದಾಳಿಯಲ್ಲಿ ಒಟ್ಟು 45 ಮಕ್ಕಳು ಸಾವನ್ನಪ್ಪಿದ್ದಾರೆ: ವಿಶ್ವಸಂಸ್ಥೆ
ಲಂಕಾ ಸರಣಿ ಸ್ಫೋಟದ ಹಿಂದೆ ಐಸಿಸ್ ಕೈವಾಡ
ಶ್ರೀಲಂಕಾ ಬಾಂಬ್ ದಾಳಿ: ಶಂಕಿತ ಉಗ್ರರ ಮತ್ತೊಂದು ಸಿಸಿ ಕ್ಯಾಮರಾ ದೃಶ್ಯಾವಳಿ ಬಿಡುಗಡೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ