ಆ್ಯಪ್ನಗರ

ದಢೂತಿಯ ಪಕ್ಕ ಕೂರಿಸಿದ್ದಕ್ಕೆ ಪರಿಹಾರ ಕೇಳಿದ ಪ್ರಯಾಣಿಕ

ದಕ್ಷಿಣ ವೇಲ್ಸ್‌ನ ಸಿವಿಲ್‌ ಎಂಜಿನಿಯರ್‌ ಸ್ಟೀಫನ್‌ ಪ್ರೋಸ್ಸರ್‌ (51) ಅವರು 2016ರ ಜನವರಿಯಲ್ಲಿ ಬ್ರಿಟಿಷ್‌ ಏರ್‌ವೇಸ್‌ ವಿಮಾನದ ಮೂಲಕ ಬ್ಯಾಂಕಾಂಕ್‌ನಿಂದ ಹೀಥ್ರೂ ನಗರಕ್ಕೆ ಪ್ರಯಾಣಿಸಿದ್ದರು.

Vijaya Karnataka 19 Nov 2018, 9:39 am
ಲಂಡನ್‌: ವಿಮಾನದಲ್ಲಿ ದಢೂತಿ ವ್ಯಕ್ತಿಯ ಪಕ್ಕದಲ್ಲಿ ಒತ್ತಾಯಪೂರ್ವಕವಾಗಿ ಕುಳ್ಳಿರಿಸಿದ ಕಾರಣ ತನಗೆ ಗಾಯವಾದ್ದು, 10,000 ಯೂರೋ ಪರಿಹಾರ ಕೊಡಿಸಬೇಕು ಎಂದು ಕೋರಿ ಪ್ರಯಾಣಿಕರೊಬ್ಬರು ಬ್ರಿಟಿಷ್‌ ಏರ್‌ವೇಸ್‌ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ.
Vijaya Karnataka Web Airways


ದಕ್ಷಿಣ ವೇಲ್ಸ್‌ನ ಸಿವಿಲ್‌ ಎಂಜಿನಿಯರ್‌ ಸ್ಟೀಫನ್‌ ಪ್ರೋಸ್ಸರ್‌ (51) ಅವರು 2016ರ ಜನವರಿಯಲ್ಲಿ ಬ್ರಿಟಿಷ್‌ ಏರ್‌ವೇಸ್‌ ವಿಮಾನದ ಮೂಲಕ ಬ್ಯಾಂಕಾಂಕ್‌ನಿಂದ ಹೀಥ್ರೂ ನಗರಕ್ಕೆ ಪ್ರಯಾಣಿಸಿದ್ದರು.

''12 ಗಂಟೆಗಳ ಪ್ರಯಾಣದಲ್ಲಿ 5.3 ಅಡಿ ಎತ್ತರದ ನನ್ನನ್ನು 6.4 ಅಡಿ ಎತ್ತರದ, ಸುಮಾರು 140 ಕೆ.ಜಿ. ತೂಕದ ದಢೂತಿ ವ್ಯಕ್ತಿಯ ಪಕ್ಕದ ಆಸನದಲ್ಲಿ ಕೂರಿಸಲಾಯಿತು. ಸಹ ಪ್ರಯಾಣಿಕನ ದೃಢಕಾಯದ ಪರಿಣಾಮ ನಾನು ಸರಿಯಾಗಿ ನನ್ನ ಆಸನದಲ್ಲಿ ಕೂರಲು ಸಾಧ್ಯವಾಗಲಿಲ್ಲ. ಆತನ ದೇಹದ ಅರ್ಧ ಭಾಗ ನನ್ನ ಆಸನವನ್ನು ಆವರಿಸಿತು. ನನಗೆ ಕೂರಲು ತುಂಬ ತೊಂದರೆಯಾಯಿತು. ಗಗನಸಖಿಯನ್ನು ಬೇರೆ ಆಸನಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಿದರೂ, ಎಲ್ಲ ಆಸನಗಳು ತುಂಬಿದರಿಂದ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದರು. ಆತನ ದಢೂತಿ ದೇಹದ ಕಾರಣ ಕುಬ್ಜವಾಗಿ ನನ್ನ ದೇಹವನ್ನು ತಗ್ಗಿಸಿ ಇಡೀ ಪ್ರಯಾಣವನ್ನು ಮಾಡುವಂತಾಯಿತು. ಇದರಿಂದ ನನ್ನ ಬೆನ್ನು ಮೂಳೆ ಮತ್ತು ಬೆನ್ನು ಹುರಿಗೆ ತೊಂದರೆಯಾಯಿತು. ಆತನ ಕೈಗಳು ಪದೇ ಪದೆ ಆಸನ ಹತ್ತಿರವಿದ್ದ ಆಡಿಯೊ ಬಟನ್‌ ಅನ್ನು ಆಕಸ್ಮಿಕವಾಗಿ ಒತ್ತಿದ ಕಾರಣ, ನಾನು ಆಲಿಸುತ್ತಿದ್ದ ಸಂಗೀತದ ಧ್ವನಿ ತೀವ್ರವಾಯಿತು. ಇದರಿಂದ ನನಗೆ ತುಂಬ ಕಿರಿಕಿಯಾಯಿತು,'' ಎಂದು ಸ್ಟೀಫನ್‌ ಆರೋಪಿಸಿದ್ದಾರೆ. ಆದರೆ ಸ್ಟೀಫನ್‌ ಈ ಘಟನೆಯನ್ನು ಉತ್ಪ್ರೇಕ್ಷೆಯಾಗಿ ಹೇಳುತ್ತಿದ್ದಾರೆ ಎಂದು ಬ್ರಿಟಿಷ್‌ ಏರ್‌ವೇಸ್‌ ನ್ಯಾಯಾಲಯಕ್ಕೆ ತಿಳಿಸಿದೆ. ಕೋರ್ಟ್‌ ವಿಚಾರಣೆಯನ್ನು ಮುಂದೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ